ಬೆಂಗಳೂರು, ಫೆ.22 www.bengaluruwire.com : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ಬೆಂಗಳೂರು ನಗರ ಜಿಲ್ಲಾ ಘಟಕದ 2025-2028ನೇ ಸಾಲಿನ ಆಡಳಿತ ಮಂಡಳಿ ಚುನಾವಣೆಯು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಅಧ್ಯಕ್ಷರಾಗಿ ಎಸ್. ಸೋಮಶೇಖರ್ (ಗಾಂಧಿ) ಅವರು ಪರಾಕ್ರಮ ಮೆರೆದಿದ್ದಾರೆ. ಬೆಂಗಳೂರು ವೈರ್ ಸಂಪಾದಕರಾದ ಶ್ಯಾಮ್.ಎಸ್ ರವರು ಜಿಲ್ಲಾ ಕಾರ್ಯಕಾರಿ ಸಮತಿ ಸದಸ್ಯರಾಗಿ ಆಯ್ಕೆಯಾಗಿದ್ದರೆ.
ಭಾನುವಾರ ಕಂದಾಯ ಭವನದ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 358 ಪತ್ರಕರ್ತರು ಅತ್ಯಂತ ಉತ್ಸಾಹದಿಂದ ಮತ ಚಲಾಯಿಸಿದರು. ನ್ಯಾಯಾಲಯದ ಆದೇಶದ ಮೇರೆಗೆ ನಡೆದ ಈ ಚುನಾವಣೆಯಲ್ಲಿ ಹಿರಿಯ ಪತ್ರಕರ್ತರು ಸೇರಿದಂತೆ ನೂರಾರು ಸದಸ್ಯರು ಭಾಗವಹಿಸಿದ್ದರು.

ಚುನಾವಣಾ ಫಲಿತಾಂಶದ ವಿವರ:
ಅಧ್ಯಕ್ಷ ಸ್ಥಾನ:
ತೀವ್ರ ಕುತೂಹಲ ಕೆರಳಿಸಿದ್ದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎಸ್. ಸೋಮಶೇಖರ್ (ಗಾಂಧಿ) ಅವರು 195 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಅವರ ಪ್ರತಿಸ್ಪರ್ಧಿ ಎ.ಬಿ. ಶಿವಪ್ರಸಾದ್ 131 ಮತಗಳನ್ನು ಪಡೆದರು.
ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ:
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಹಣಾಹಣಿಯಲ್ಲಿ ಆರ್. ಜಯಕುಮಾರ್ ಗೌಡ್ರು (153 ಮತ) ವಿಜೇತರಾಗಿದ್ದಾರೆ. ಖಜಾಂಚಿ ಸ್ಥಾನಕ್ಕೆ ಟಿ. ಮೋಹನ್ (161 ಮತ) ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರು (ಮೂರು ಸ್ಥಾನಗಳು):
* ಪರಿಮಳ ಹೆಚ್. ಎಸ್ (200 ಮತ)
* ಕೆ. ಎಸ್. ಸ್ವಾಮಿ (165 ಮತ)
* ಎಚ್. ಕೆ. ಬಸವರಾಜ್ (162 ಮತಗಳು)
ಕಾರ್ಯದರ್ಶಿಗಳು (ಅವಿರೋಧ ಆಯ್ಕೆ):
ಕೆ. ಹರೀಶ್, ಕೆ. ಎಲ್. ಲೋಕೇಶ್ ಹಾಗೂ ಗೋದಾವರಿ ಡಿ. ಎಸ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು:
ರವಿಕಾಂತ ಕುಂದಾಪುರ (246 ಮತ), ಗಂಡಸಿ ಸದಾನಂದ ಸ್ವಾಮಿ (237 ಮತ), ಬಿ. ಎನ್. ರಾಮಚಂದ್ರ (221 ಮತ), ರಮಾಕಾಂತ ಗುಗ್ರಿ (208 ಮತ), ಶರಣಬಸಪ್ಪ (194 ಮತ), ಡಿ.ಎಲ್.ಹರೀಶ್ (187 ಮತ), ಶ್ಯಾಮ್.ಎಸ್ (184 ಮತ), ಲಿಂಗರಾಜು ನೊಣವಿನಕೆರೆ (176 ಮತ) ಸೇರಿದಂತೆ 15 ಸದಸ್ಯರು ಭರ್ಜರಿ ಜಯ ದಾಖಲಿಸಿದ್ದಾರೆ.
ಸಂಘದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಎನ್. ರವಿಕುಮಾರ್ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಚುನಾವಣಾಧಿಕಾರಿ ನಂಜುಂಡಪ್ಪ ವಿ. ಅವರು ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಮತದಾನದ ವೇಳೆ ಹಿರಿಯ ಸಂಪಾದಕರು ಹಾಗೂ ಪತ್ರಕರ್ತರು ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದು ವಿಶೇಷವಾಗಿತ್ತು.






















