ಬೆಂಗಳೂರು, ಫೆ.20 www.bengaluruwire.com : ಸ್ಯಾಂಡಲ್‌ವುಡ್‌ನ ಅತೀ ಹೆಚ್ಚು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ (Toxic) ಕುರಿತು ಅಭಿಮಾನಿಗಳಲ್ಲಿ ಮನೆ ಮಾಡಿದ್ದ ಕುತೂಹಲಕ್ಕೆ ಇಂದು ತೆರೆಬಿದ್ದಿದೆ. ಚಿತ್ರದ ಎರಡನೇ ಟೀಸರ್ ಇಂದು (ಫೆಬ್ರವರಿ 20) ಬಿಡುಗಡೆಯಾಗಿದ್ದು, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಮಾಸ್ ಮತ್ತು ಕ್ಲಾಸ್ ಅವತಾರಗಳು ಸಿನಿಪ್ರೇಕ್ಷಕರ ನಿದ್ದೆಗೆಡಿಸಿವೆ.
ಒಂದೇ ಗಂಟೆಯಲ್ಲಿ ಲಕ್ಷಾಂತರ ವೀಕ್ಷಣೆ:
ಟೀಸರ್ ಬಿಡುಗಡೆಯಾದ ಕೇವಲ ಒಂದು ಗಂಟೆಯಲ್ಲೇ ಸುಮಾರು 5.98 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್ ವಿವಾದಗಳ ನಡುವೆಯೂ 100 ಮಿಲಿಯನ್ ಕ್ಲಬ್ ಸೇರಿತ್ತು. ಆದರೆ ಈಗ ಬಿಡುಗಡೆಯಾಗಿರುವ ಟೀಸರ್ ಸಂಪೂರ್ಣವಾಗಿ ಭಿನ್ನವಾಗಿದ್ದು, ಯಶ್ ಅವರ ‘ರಾ ಲುಕ್’ (Raw Look) ಎಲ್ಲರ ಗಮನ ಸೆಳೆಯುತ್ತಿದೆ.
ದ್ವಿಪಾತ್ರದಲ್ಲಿ ಯಶ್ ಅಬ್ಬರ?:

ಈ ಹೊಸ ಟೀಸರ್‌ನಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಯಂಗ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಯಶ್, ರಾಯನ ಮಗನ ಪಾತ್ರವಿರಬಹುದೇ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ. “ಈ ಸಲ ಯುದ್ಧನೇ ಬೇರೆ” ಎಂಬ ಖಡಕ್ ಡೈಲಾಗ್ ಮೂಲಕ ಚಿತ್ರವು ಭರ್ಜರಿ ಆ್ಯಕ್ಷನ್ ಒಳಗೊಂಡಿರುವುದನ್ನು ಸಾರಿದೆ. ಅಷ್ಟೇ ಅಲ್ಲದೆ, “ಹಠ ಬಿಡೋ ಮಾತೇ ಇಲ್ಲ” ಎಂಬ ಸಂಭಾಷಣೆ ಸದ್ಯ ಸಿನಿವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇದು ‘ಧುರಂದರ್ 2’ ಚಿತ್ರಕ್ಕೆ ನೀಡಿದ ಕೌಂಟರ್ ಎಂದೇ ವಿಶ್ಲೇಷಿಸಲಾಗುತ್ತಿದೆ.
ತಾರಾಗಣ ಮತ್ತು ತಾಂತ್ರಿಕ ತಂಡ:
ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರಕ್ಕೆ ಕೆವಿಎನ್ (KVN) ಪ್ರೊಡಕ್ಷನ್ ಬಂಡವಾಳ ಹೂಡಿದೆ. ಯಶ್ ಕೂಡ ಈ ಚಿತ್ರದ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ಹುಮಾ ಖುರೇಶಿಯಂತಹ ಘಟಾನುಘಟಿ ತಾರೆಯರು ಬಣ್ಣ ಹಚ್ಚಿದ್ದಾರೆ. ಸಿನಿಮಾ ಮಾರ್ಚ್ 19ರಂದು ವಿಶ್ವಾದ್ಯಂತ ತೆರೆಕಾಣಲು ಸಜ್ಜಾಗಿದೆ. (Photo/Teaser Vedio Credit : KVN Productions)























