ಬೆಂಗಳೂರು, ಜ.15 www.bengaluruwire.com: ಜಗತ್ತಿನಾದ್ಯಂತ ಈಗ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಲೆ ಜೋರಾಗಿದೆ. ಸಾಫ್ಟ್‌ವೇರ್ ಕೋಡಿಂಗ್ ನಿಂದ ಹಿಡಿದು ವೈದ್ಯಕೀಯ, ರಕ್ಷಣಾ ಕ್ಷೇತ್ರಗಳವರೆಗೆ ವ್ಯಾಪಿಸಿರುವ ಎಐ, ಇದೀಗ ನಮ್ಮ ಹಬ್ಬದ ಆಚರಣೆಗಳಿಗೂ ಕಾಲಿಟ್ಟಿದೆ.
ಇದಕ್ಕೆ ಸಾಕ್ಷಿಯೆಂಬಂತೆ, ಪ್ರಖ್ಯಾತ ವಸ್ತ್ರ ಮಳಿಗೆಯಾದ “ಸುದರ್ಶನ್ ಸಿಲ್ಕ್ಸ್ ಒರಿಜಿನಲ್”, ಎಐ ತಂತ್ರಜ್ಞಾನ ಬಳಸಿ ನಾಡಿನ ಜನತೆಗೆ ಸಂಕ್ರಾಂತಿ ಶುಭಾಶಯ ಕೋರುವ ಮೂಲಕ ಹೊಸ ಸಂಚಲನ ಮೂಡಿಸಿದೆ.

ಒರಿಜಿನಲ್ ವಿಡಿಯೋವನ್ನೇ ನಾಚಿಸುವಂತೆ ಎಐ ಬಳಸಿ ವಿಡಿಯೋಗಳನ್ನು ಸಿದ್ಧಪಡಿಸುವುದು ಈಗ ಬ್ಯುಸಿನೆಸ್ ಟ್ರೆಂಡ್ ಆಗುತ್ತಿದೆ. ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತಿರುವ ಸುದರ್ಶನ್ ಸಿಲ್ಕ್ಸ್, ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ತನ್ನ ಗ್ರಾಹಕರಿಗಾಗಿ ಹಾಗೂ ಸಮಸ್ತ ಕನ್ನಡಿಗರಿಗಾಗಿ ಸೊಗಸಾದ ಹಾಗೂ ನಮ್ಮ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿಶೇಷ ಗೀತೆಯೊಂದನ್ನು ಎಐ ಮೂಲಕ ರಚಿಸಿದೆ.

ಸಂಭ್ರಮದ ‘ಎಐ’ ಸಂಕ್ರಾಂತಿ ಗೀತೆ:

ಸುದರ್ಶನ್ ಸಿಲ್ಕ್ಸ್ ಪ್ರಸ್ತುತ ಪಡಿಸಿರುವ ಈ ಎಐ ಸಂಕ್ರಾಂತಿ ಗೀತೆಯ ಸಾಹಿತ್ಯವು ಗ್ರಾಮೀಣ ಸೊಗಡು ಮತ್ತು ಹಬ್ಬದ ಸಂಭ್ರಮವನ್ನು ಕಟ್ಟಿಕೊಡುತ್ತದೆ. ಹಾಡಿನ ಸಾಲುಗಳು ಹೀಗಿವೆ:
> ಎಳ್ಳು ಬೆಲ್ಲ ತಿನ್ನೋಣ
> ಒಳ್ಳೆಯ ಮಾತು ಆಡೋಣ
> ಪತಂಗ ಹಾರಿಸಿ ನಲಿಯೋಣ
> ಕಿಚ್ಚನು ಹಾರಿಸಿ ಕುಣಿಯೋಣ
> ಕಬ್ಬಿನ ಜಲ್ಲೆ ರಂಗೋಲಿ
> ಹಬ್ಬದ ಊಟ ಮನೆಯಲ್ಲಿ
> ಸುಗ್ಗಿಯ ಸಂಭ್ರಮ ಊರಲ್ಲಿ
> ಪೂಜೆಯ ಸಂಗಮ ಮನದಲ್ಲಿ
> ಸಂಕ್ರಾಂತಿ ಸಂಕ್ರಾಂತಿ
> ಸುದರ್ಶನ್ ಸಿಲ್ಕ್ಸ್ ನಮ್ಮ ಸಂಗಾತಿ…..
ಪರಂಪರೆ ಮತ್ತು ತಂತ್ರಜ್ಞಾನದ ಸಂಗಮ:
ಬೆಂಗಳೂರಿನ ಚಿಕ್ಕಪೇಟೆ ಮತ್ತು ಮಾರತ್ ಹಳ್ಳಿಯಲ್ಲಿ ಶಾಖೆಗಳನ್ನು ಹೊಂದಿರುವ “ಸುದರ್ಶನ್ ಸಿಲ್ಕ್ಸ್ ಒರಿಜಿನಲ್”, 1944ನೇ ಇಸವಿಯಿಂದಲೂ ವಸ್ತ್ರೋದ್ಯಮದಲ್ಲಿ ವಿಶ್ವಾಸಾರ್ಹ ಹೆಸರಾಗಿದೆ. ಸೂಕ್ಷ್ಮ ಕುಸುರಿ ಕೆಲಸದ ಅಪೂರ್ವ ವಿನ್ಯಾಸದ ರೇಷ್ಮೆ ಸೀರೆಗಳು, ಲೆಹೆಂಗಾ ಹಾಗೂ ನೂರಾರು ಬಗೆಯ ಡ್ರೆಸ್ ಮೆಟೀರಿಯಲ್ ಕಲೆಕ್ಷನ್ ಗಳನ್ನು ನೀಡುತ್ತಾ ಬಂದಿದೆ. ನುರಿತ ನೇಕಾರರ ಕೈಚಳಕ ಮತ್ತು ಆಧುನಿಕ ತಂತ್ರಜ್ಞಾನದ ಸಮ್ಮಿಲನದೊಂದಿಗೆ ಕರ್ನಾಟಕದ ಸಂಸ್ಕೃತಿಯನ್ನು ದೇಶಾದ್ಯಂತ ಪಸರಿಸುತ್ತಿದೆ.

ಈ ವಿನೂತನ ಪ್ರಯೋಗದ ಬಗ್ಗೆ ಮಾತನಾಡಿದ ಸುದರ್ಶನ್ ಸಿಲ್ಕ್ಸ್ ಒರಿಜಿನಲ್‌ನ ವ್ಯವಸ್ಥಾಪಕ ನಿರ್ದೇಶಕಿ ವರ್ಷಾ ಶರತ್, “ಎಐ ತಂತ್ರಜ್ಞಾನ ಬಳಸಿ ರಚಿಸಿದ ಸುದರ್ಶನ್ ಸಿಲ್ಕ್ಸ್ ಸಂಕ್ರಾಂತಿ ಗೀತೆಯು, ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ನಾಡಿನ ಜನರಿಗೆ ವಿಭಿನ್ನವಾಗಿ ಶುಭಾಶಯ ಕೋರಲೆಂದೇ ನಿರ್ಮಾಣ ಮಾಡಲಾಗಿದೆ,” ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ, ಎಲ್ಲಾ ವಯೋಮಾನದವರಿಗೂ ಸರಿಹೊಂದುವ ವಸ್ತ್ರಗಳನ್ನು ನೀಡುವ ಮೂಲಕ ಮನೆಮಾತಾಗಿರುವ ಸುದರ್ಶನ್ ಸಿಲ್ಕ್ಸ್, ಇದೀಗ ತಂತ್ರಜ್ಞಾನದ ಮೂಲಕವೂ ಗ್ರಾಹಕರ ಮನ ಗೆಲ್ಲಲು ಮುಂದಾಗಿದೆ.























