ಬೆಂಗಳೂರು, ಡಿ.25 www.bengaluruwire.com : ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರು ಹಾಗೂ ಸಾಧಕರಿಗೆ ನೀಡಲಾಗುವ ಪ್ರತಿಷ್ಠಿತ 2025ನೇ ಸಾಲಿನ ಬೆಂಗಳೂರು ಪ್ರೆಸ್‌ಕ್ಲಬ್ ‘ವಾರ್ಷಿಕ ಪ್ರಶಸ್ತಿ’ಗಳನ್ನು (Press Club Annual Awards) ಘೋಷಿಸಲಾಗಿದೆ. ಈ ಬಾರಿ ಒಟ್ಟು 55 ಮಂದಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರೆಸ್‌ಕ್ಲಬ್ ಪ್ರಕಟಣೆ ತಿಳಿಸಿದೆ.
ಬೆಂಗಳೂರು ಪ್ರೆಸ್‌ಕ್ಲಬ್‌ನ ಕಾರ್ಯಕಾರಿ ಸಮಿತಿಯು ಈ ತೀರ್ಮಾನವನ್ನು ಕೈಗೊಂಡಿದ್ದು, ಡಿಸೆಂಬರ್ 31 ರಂದು ಪ್ರೆಸ್‌ಕ್ಲಬ್ ಆವರಣದಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ಆಯ್ಕೆಯಾದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯ ಸಚಿವ ಸಂಪುಟದ ಹಲವು ಸಚಿವರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರೆಸ್‌ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್ ಮತ್ತು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ತಿಳಿಸಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದ ಪಟ್ಟಿ ಈ ಕೆಳಗಿನಂತಿದೆ:

ಪ್ರೆಸ್‌ಕ್ಲಬ್ ಪ್ರಕಟಿಸಿರುವ ಪಟ್ಟಿಯ ಪ್ರಕಾರ, ಮೃತ್ಯುಂಜಯ ಎನ್.ಹೆಚ್, ನಂಜುಂಡೇಗೌಡ ಹೆಚ್.ಜೆ, ಲೋಚನೇಶ್ ಹುಗಾರ್, ಗುರುಮೂರ್ತಿ ಎಂ.ಎನ್, ನಂಜುಂಡಪ್ಪ ವಿ., ವಿಶ್ವನಾಥ್ ಬಿ.ಆರ್, ನಾಗರಾಜ ಎಂ. (ಗಡೇಕಲ್), ನವೀನ್ ಕುಮಾರ್ ಅಮ್ಮೆಂಬಳ, ಅರವಿಂದ್ ಎಸ್., ರಾಮಚಂದ್ರ ಬಿ.ಎಸ್ ಸೇರಿದಂತೆ ಒಟ್ಟು 55 ಪತ್ರಕರ್ತರು ಹಾಗೂ ಛಾಯಾಗ್ರಾಹಕರು ಪಟ್ಟಿಯಲ್ಲಿದ್ದಾರೆ.
ಹಾಗೆಯೇ, ಬಸವರಾಜ್ ಬಿ., ಶಿವರುದ್ರಪ್ಪ ಡಿ.ಎಸ್, ಶ್ರೀನಾಥ ಬಿ.ವಿ, ಮಲ್ಲಿಕಾ ಚರಣ್‌ವಾಡಿ.ಕೆ, ಮುನಿರಾಮೇಗೌಡ (ರವಿ), ಮುರಳಿಕುಮಾರ್ ಕೆ., ಸುಭಾಶ್‌ಚಂದ್ರ ಎನ್.ಎಸ್, ಶ್ರೀನಿವಾಸಮೂರ್ತಿ ಟಿ.ಸಿ, ರಮೇಶ್ ಕುಮಾರ್ ನಾಯ್, ವಾಸು ಮೂರ್ತಿ ಸಿ., ಸಂತೋಷ್ ಕುಮಾರ್ ಆರ್.ಬಿ, ವೆಂಕಟೇಶ್ ಎಂ. ರಾವ್, ಆನಂದ್ ಪಿ. ಬೈದನಮನೆ, ಕೀರ್ತಿ ಪ್ರಸಾದ್ ಎಂ., ಮಂಜುನಾಥ ಆರ್. (ಕೆರೆ ಮಂಜು), ಜಿಕ್ರಿಯಾ ಕೆ.ಎಂ, ಅನಿಲ್ ಕುಮಾರ್ ರಾಜೇ ಅರಸ್ ಎ.ಸಿ., ಅಂತೋನಿ ಎ. ಮೇರಿ, ಅತ್ತಿಗುಪ್ಪೆ ರವಿಕುಮಾರ್, ಮಧುಕೇಶ್ವರ್ ಜವಳಿ ಹಾಗೂ ಮಾರುತಿ ಹೆಚ್. ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಉಳಿದಂತೆ ಶಿಲ್ಪಾ ಪಡ್ನಿಸ್, ಸೋಮಶೇಖರ್ ಪಡುಕರೆ, ಅಕ್ಷಯ ಎ., ಸಿದ್ದೇಶ್ ಟಿ.ಎನ್., ಪ್ರವೀಣ್ ಪಿ., ಸನತ್‌ಕುಮಾರ್ ರೈ ಬಿ., ಸುನಿಲ್ ಕುಮಾರ್ ಆರ್., ಮಧು ಡಿ.ಎಲ್, ರಂಗನಾಥ್ ಮರಕಿಣಿ, ಮಂಜುಶ್ರೀ ಎಂ. ಕಡಕೊಳ, ಅನುಷಾ ರವಿ, ಬನ್ನಿ ಕಾಳಪ್ಪ, ಹರೀಶ್ ಜಿ. (ಕಾಕೋಳು), ಜೈಪಾಲ್ ಶರ್ಮ, ಕಿರಣ್ ಕುಮಾರ್ ಸ್ವಾಮಿ ಬಿ.ಎಸ್, ಮರಿಯಪ್ಪ ಕೆ.ಜೆ, ಮೋಹನ್‌ಕುಮಾರ್ ಸ್ವಾಮಿ ಬಿ.ಎಸ್, ನಾಗಾರ್ಜುನ (ದ್ವಾರಕಾನಾಥ್), ಪದ್ಮ ನಾಗರಾಜು ಜಿ.ವೈ, ಪ್ರಭುದೇವ್ ಶಾಸ್ತಿಮರ್, ತಿರುಮಲೇಶ್ ದೇಸಾಯಿ ಹಾಗೂ ಅಮ್ಬದ್ ಖಾನ್ ಎಂ. ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭವು ಹೊಸ ವರ್ಷದ ಮುನ್ನಾದಿನದಂದು (ಡಿ.31) ನಡೆಯಲಿದ್ದು, ಪತ್ರಿಕೋದ್ಯಮದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.























