ಬೆಂಗಳೂರು, ಡಿ.22 www.bengaluruwire.com : ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ನೈರುತ್ಯ ರೈಲ್ವೆ (South Western Railway) ಕೆಲವೊಂದು ಪ್ರಮುಖ ಬದಲಾವಣೆ ಕೈಗೊಂಡಿದೆ.
ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ) ನಿಂದ ಕೇರಳದ ಕೊಲ್ಲಂ ಮತ್ತು ಕಣ್ಣೂರಿಗೆ ವಿಶೇಷ ರೈಲುಗಳನ್ನು ಓಡಿಸಲು ತೀರ್ಮಾನಿಸಲಾಗಿದೆ. ಇದೇ ವೇಳೆ, ಹೆಜ್ಜಾಲ ಮತ್ತು ಕೆಂಗೇರಿ ನಿಲ್ದಾಣಗಳ ನಡುವೆ ಕಾಮಗಾರಿ ನಡೆಯುತ್ತಿರುವುದರಿಂದ ಮೈಸೂರು ಭಾಗದ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು – ಕೊಲ್ಲಂ ವಿಶೇಷ ರೈಲು (ಒಂದು ಟ್ರಿಪ್)
ಕ್ರಿಸ್ಮಸ್ ರಜಾ ದಿನಗಳಲ್ಲಿ ಊರಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಎಸ್‌ಎಂವಿಟಿ ಬೆಂಗಳೂರು ಮತ್ತು ಕೊಲ್ಲಂ ನಡುವೆ ವಿಶೇಷ ರೈಲನ್ನು ಓಡಿಸಲಾಗುತ್ತಿದೆ.

ರೈಲು ಸಂಖ್ಯೆ 06573 (ಬೆಂಗಳೂರು – ಕೊಲ್ಲಂ): ಈ ರೈಲು ಡಿಸೆಂಬರ್ 25 ರಂದು ಮಧ್ಯಾಹ್ನ 3:00 ಗಂಟೆಗೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 6:30ಕ್ಕೆ ಕೊಲ್ಲಂ ತಲುಪಲಿದೆ.
ರೈಲು ಸಂಖ್ಯೆ 06574 (ಕೊಲ್ಲಂ – ಬೆಂಗಳೂರು): ಡಿಸೆಂಬರ್ 26, 2025ರಂದು ಬೆಳಿಗ್ಗೆ 10:30ಕ್ಕೆ ಕೊಲ್ಲಂನಿಂದ ಹೊರಟು, ಮರುದಿನ ಬೆಳಗಿನ ಜಾವ 3:30ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.
ನಿಲುಗಡೆಗಳು: ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಪೋದನೂರ್, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಾರಿ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕರ ಮತ್ತು ಕಾಯಂಕುಲಂ.
ಬೋಗಿಗಳು: ಈ ರೈಲಿನಲ್ಲಿ ಒಟ್ಟು 20 ಸ್ಲೀಪರ್ ಕ್ಲಾಸ್ ಕೋಚ್‌ಗಳು ಮತ್ತು 2 ಎಸ್‌ಎಲ್‌ಆರ್/ಡಿ ಕೋಚ್‌ಗಳು ಇರಲಿವೆ. ಬೆಂಗಳೂರು – ಕಣ್ಣೂರು ವಿಶೇಷ ರೈಲು (ಒಂದು ಟ್ರಿಪ್). ಕರಾವಳಿ ಭಾಗದ ಪ್ರಯಾಣಿಕರಿಗಾಗಿ ಮತ್ತೊಂದು ವಿಶೇಷ ರೈಲನ್ನು ಘೋಷಿಸಲಾಗಿದೆ.
ರೈಲು ಸಂಖ್ಯೆ 06575 (ಬೆಂಗಳೂರು – ಕಣ್ಣೂರು): ಡಿಸೆಂಬರ್ 24 ರಂದು ಸಂಜೆ 4:35ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 7:50ಕ್ಕೆ ಕಣ್ಣೂರು ತಲುಪಲಿದೆ.
ರೈಲು ಸಂಖ್ಯೆ 06576 (ಕಣ್ಣೂರು – ಬೆಂಗಳೂರು): ಡಿಸೆಂಬರ್ 25 ರಂದು ಬೆಳಿಗ್ಗೆ 10 ಗಂಟೆಗೆ ಕಣ್ಣೂರಿನಿಂದ ಹೊರಟು, ಡಿಸೆಂಬರ್ 26ರ ಮಧ್ಯರಾತ್ರಿ 12:15ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.
ನಿಲುಗಡೆಗಳು: ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಪೋದನೂರ್, ಪಾಲಕ್ಕಾಡ್, ಶೋರ್ನೂರ್, ತಿರೂರ್, ಕೋಝಿಕ್ಕೋಡ್, ವಡಕರ ಮತ್ತು ತಲಶೇರಿ.
ಬೋಗಿಗಳು: 2 ಎಸಿ 3-ಟೈಯರ್, 8 ಸ್ಲೀಪರ್ ಕ್ಲಾಸ್, 6 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್/ಡಿ ಕೋಚ್‌ಗಳನ್ನು ಒಳಗೊಂಡಿರಲಿದೆ.
ರೈಲು ಸಂಚಾರದಲ್ಲಿ ವ್ಯತ್ಯಯ: ರದ್ದು ಮತ್ತು ಭಾಗಶಃ ರದ್ದು
ಹೆಜ್ಜಾಲ ಮತ್ತು ಕೆಂಗೇರಿ ನಿಲ್ದಾಣಗಳ ನಡುವೆ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕಾಮಗಾರಿ (ಗರ್ಡರ್ ಅಳವಡಿಕೆ) ನಡೆಯುತ್ತಿರುವುದರಿಂದ ಈ ಕೆಳಕಂಡ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಸಂಪೂರ್ಣ ರದ್ದಾದ ರೈಲುಗಳು:
* ಡಿ.25, 2025 ಮತ್ತು ಜ.08, 2026 ರಂದು ರದ್ದು:
* ರೈಲು ಸಂಖ್ಯೆ 56265 ಅರಸೀಕೆರೆ – ಮೈಸೂರು ಪ್ಯಾಸೆಂಜರ್
* ರೈಲು ಸಂಖ್ಯೆ 06269 ಮೈಸೂರು – ಎಸ್‌ಎಂವಿಟಿ ಬೆಂಗಳೂರು ಪ್ಯಾಸೆಂಜರ್ ಸ್ಪೆಷಲ್
* ರೈಲು ಸಂಖ್ಯೆ 06270 ಎಸ್‌ಎಂವಿಟಿ ಬೆಂಗಳೂರು – ಮೈಸೂರು ಪ್ಯಾಸೆಂಜರ್ ಸ್ಪೆಷಲ್
* ಡಿ.26, 2025 ಮತ್ತು ಜ.09, 2026 ರಂದು ರದ್ದು:
* ರೈಲು ಸಂಖ್ಯೆ 56266 ಮೈಸೂರು – ಅರಸೀಕೆರೆ ಪ್ಯಾಸೆಂಜರ್
* ರೈಲು ಸಂಖ್ಯೆ 66535 ಕೆಎಸ್‌ಆರ್ ಬೆಂಗಳೂರು – ಚನ್ನಪಟ್ಟಣ ಮೆಮು
ಭಾಗಶಃ ರದ್ದಾದ ರೈಲುಗಳು (ಡಿ.25 ಮತ್ತು ಜ.08 ರಂದು):
ರೈಲು ಸಂಖ್ಯೆ 06526 (ಅಶೋಕಪುರಂ – ಕೆಎಸ್‌ಆರ್ ಬೆಂಗಳೂರು ಮೆಮು): ಚನ್ನಪಟ್ಟಣದಲ್ಲಿ ಸಂಚಾರ ಅಂತ್ಯಗೊಳ್ಳಲಿದೆ (ಚನ್ನಪಟ್ಟಣ ಮತ್ತು ಬೆಂಗಳೂರು ನಡುವೆ ರದ್ದು).
ರೈಲು ಸಂಖ್ಯೆ 16022 (ಅಶೋಕಪುರಂ – ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್): ಕೆಎಸ್‌ಆರ್ ಬೆಂಗಳೂರಿನಿಂದ ಪ್ರಯಾಣ ಆರಂಭಿಸಲಿದೆ (ಅಶೋಕಪುರಂ ಮತ್ತು ಬೆಂಗಳೂರು ನಡುವೆ ರದ್ದು).
ರೈಲು ಸಂಖ್ಯೆ 66580 (ಅಶೋಕಪುರಂ – ಕೆಎಸ್‌ಆರ್ ಬೆಂಗಳೂರು ಮೆಮು): ರಾಮನಗರದಲ್ಲಿ ಸಂಚಾರ ಅಂತ್ಯಗೊಳ್ಳಲಿದೆ.
ಭಾಗಶಃ ರದ್ದಾದ ರೈಲುಗಳು (ಡಿ.26 ಮತ್ತು ಜ.09 ರಂದು):
ರೈಲು ಸಂಖ್ಯೆ 66579 (ಕೆಎಸ್‌ಆರ್ ಬೆಂಗಳೂರು – ಅಶೋಕಪುರಂ ಮೆಮು): ರಾಮನಗರದಿಂದ ಪ್ರಯಾಣ ಆರಂಭಿಸಲಿದೆ (ಬೆಂಗಳೂರು ಮತ್ತು ರಾಮನಗರ ನಡುವೆ ರದ್ದು).
ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ನೈರುತ್ಯ ರೈಲ್ವೆ ಕೋರಿದೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.






















