ಬೆಂಗಳೂರು, ಡಿ.11 www.bengaluruwire.com: ಕಳೆದ ಒಂದೂವರೆ ದಶಕಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಬಸವನಗುಡಿಯ ‘ರಾವ್ಸ್ ಅಕಾಡೆಮಿ’ (Rao’s Academy), ಪ್ರಸಕ್ತ ಸಾಲಿನ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ನೂತನ ಅಭ್ಯಾಸ ಪುಸ್ತಕಗಳನ್ನು ಬಿಡುಗಡೆ ಮಾಡಿದೆ.
ವಿಶೇಷವೇನೆಂದರೆ, ಈ ಪುಸ್ತಕಗಳನ್ನು ಖರೀದಿಸುವ ವಿದ್ಯಾರ್ಥಿಗಳಿಗೆ ಮುಂಬರುವ ವಾರ್ಷಿಕ ಪರೀಕ್ಷಾ ತಯಾರಿಗಾಗಿ ತಜ್ಞರು ಸಿದ್ಧಪಡಿಸಿದ ‘ಮಾದರಿ ಪ್ರಶ್ನೆಪತ್ರಿಕೆ’ಗಳನ್ನು ಉಚಿತವಾಗಿ ನೀಡುವುದಾಗಿ ಸಂಸ್ಥೆ ಘೋಷಿಸಿದೆ.
ಬರವಣಿಗೆಯ ಅಭ್ಯಾಸಕ್ಕೆ ಒತ್ತು:
ಪ್ರಸ್ತುತ ದಿನಗಳಲ್ಲಿ ಆನ್‌ಲೈನ್ ಅಥವಾ ನೇರ ತರಗತಿಗಳಲ್ಲಿ ಪಾಠ ಕೇಳುವ ವಿದ್ಯಾರ್ಥಿಗಳು, ಬರವಣಿಗೆಯ ಅಭ್ಯಾಸದ ಕೊರತೆಯಿಂದ ಪರೀಕ್ಷೆಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಇದನ್ನು ಮನಗಂಡು ರಾವ್ಸ್ ಅಕಾಡೆಮಿ, “ಬರೆದು-ಬರೆದು ಅಭ್ಯಾಸ ಮಾಡಿದರೆ ಹೆಚ್ಚಿನ ಅಂಶಗಳು ನೆನಪಿನಲ್ಲಿ ಉಳಿಯುತ್ತವೆ,” ಎಂಬ ವೈಜ್ಞಾನಿಕ ತತ್ವದಡಿ ಈ ಪುಸ್ತಕಗಳನ್ನು ರೂಪಿಸಿದೆ.

ಪುಸ್ತಕದ ವಿಶೇಷತೆಗಳೇನು? :
8, 9 ಮತ್ತು 10ನೇ ತರಗತಿಯ ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕ ಪುಸ್ತಕಗಳು ಲಭ್ಯವಿದ್ದು, ಬಹು ಆಯ್ಕೆ ಪ್ರಶ್ನೆಗಳು (MCQ), ಬಿಟ್ಟ ಸ್ಥಳ ತುಂಬಿರಿ, ಹೊಂದಿಸಿ ಬರೆಯಿರಿ ಸೇರಿದಂತೆ 1, 2, 3 ಮತ್ತು 4 ಅಂಕಗಳ ದೀರ್ಘ ಉತ್ತರಗಳನ್ನು ಬರೆಯಲು ವೈಜ್ಞಾನಿಕವಾಗಿ ಅವಶ್ಯವಿರುವ ಸ್ಥಳಾವಕಾಶವನ್ನು (Space) ಪುಸ್ತಕದಲ್ಲಿಯೇ ನೀಡಲಾಗಿದೆ. ಅಲ್ಲದೆ, ಪ್ರತಿಯೊಂದು ಪ್ರಶ್ನೆಗೆ ಸಂಬಂಧಿಸಿದ ಸರಿಯುತ್ತರಗಳನ್ನು ಪ್ರತ್ಯೇಕವಾಗಿ ನೀಡಲಾಗಿದೆ.
ಉಚಿತ ಮಾದರಿ ಪ್ರಶ್ನೆ ಪತ್ರಿಕೆ ಲಭ್ಯ:
ಈ ಅಭ್ಯಾಸ ಪುಸ್ತಕಗಳನ್ನು ಕೊಂಡು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ, ಶಿಕ್ಷಣ ಇಲಾಖೆಯ ನೀಲನಕ್ಷೆಗೆ (Blueprint) ಅನುಗುಣವಾಗಿ ರಾವ್ಸ್ ಅಕಾಡೆಮಿಯ ತಜ್ಞರು ಸಿದ್ಧಪಡಿಸಿದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಜನವರಿ ತಿಂಗಳ ನಂತರ ಉಚಿತವಾಗಿ ಇ-ಮೇಲ್ (E-mail) ಮೂಲಕ ಕಳುಹಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಕೈಗೆಟುಕುವ ದರದಲ್ಲಿ ಲಭ್ಯವಿರುವ ಈ ಪುಸ್ತಕಗಳ ಲಾಭವನ್ನು ಪ್ರತಿವರ್ಷ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಡೆಯುತ್ತಿದ್ದು, ಪಬ್ಲಿಕ್ ಪರೀಕ್ಷೆಗಳಲ್ಲಿ ರ್ರ್ಯಾಂಕ್ ಹಾಗೂ ಡಿಸ್ಟಿಂಕ್ಷನ್ ಗಳಿಸುತ್ತಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ರಾವ್ಸ್ ಅಕಾಡೆಮಿ, ನಂ 51, ಡಿ.ವಿ.ಜಿ ರಸ್ತೆ, ಬಸವನಗುಡಿ, ಬೆಂಗಳೂರು ಅಥವಾ ಮೊಬೈಲ್ ಸಂಖ್ಯೆ 99005 75990 / 98443 28990 (ವಾಟ್ಸಾಪ್) ಮೂಲಕ ಸಂಪರ್ಕಿಸಬಹುದು.






















