Friday, March 6, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

    Video News | ದೇವರಿಗೆ ಕೈಮುಗಿದು ‘ಕೈಕೊಟ್ಟ’ ಕಳ್ಳರು: ದೇವಸ್ಥಾನದ ಹುಂಡಿ ಹೊತ್ತೊಯ್ದ ಖದೀಮರ ವಿಚಿತ್ರ ಭಕ್ತಿ

    ವಾಹನ ಸವಾರರಿಗೆ ಬಿಗ್ ಶಾಕ್: ಇನ್ನು ಮುಂದೆ ಬರಲಿದೆ ‘ಗ್ರೇಡ್ ಆಧಾರಿತ’ ಚಾಲನಾ ಪರವಾನಗಿ; ನಿಯಮ ಮೀರಿದರೆ ಲೈಸೆನ್ಸ್ ರದ್ದು

  • Bengaluru Focus

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

    Namma Metro News | ನಮ್ಮ ಮೆಟ್ರೋ ‘ಗುಲಾಬಿ’ ಪಥಕ್ಕೆ ವೇಗ: ಎಂ.ಡಿ. ಡಾ. ಜೆ. ರವಿಶಂಕರ್ ಅವರಿಂದ ಕಾಮಗಾರಿ ಪರಿಶೀಲನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Life Style

ಉಡುಪಿ : ಕಡಲತೀರ ಭಾರ್ಗವರ ಅಂಗಳಕ್ಕೆ ಬಂತು Mig-21 ಯುದ್ಧ ವಿಮಾನ : ಕೋಟ ಶಿವರಾಮ ಕಾರಂತ ಥೀಮ್  ಪಾರ್ಕ್‌ ಈಗ Hotspot

ಸಾಹಿತ್ಯಲೋಕ - ವಿಜ್ಞಾನ ಲೋಕದ ಸಂಗಮ ; ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರ ಸತತ ಪ್ರಯತ್ನಕ್ಕೆ ಸಂದ ಫಲ.

by Bengaluru Wire Desk
December 9, 2025
in Life Style, Public interest
Reading Time: 1 min read
0
View this post on Instagram

ಕೋಟ (ಉಡುಪಿ), ಡಿ.09 www.bengaluruwire.com : ಕಡಲತೀರದ ಭಾರ್ಗವ, ನಡೆದಾಡುವ ವಿಶ್ವಕೋಶ ಎಂದೇ ಪ್ರಖ್ಯಾತರಾಗಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಹೆಸರಲ್ಲಿ ಸ್ಥಾಪಿತವಾದ ಥೀಮ್ ಪಾರ್ಕಿನಲ್ಲಿ ವಾಯುಪಡೆಯ ಮಿಗ್-21 ಯುದ್ಧ ವಿಮಾನವನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಶಿವರಾಮ ಕಾರಂತರು, ಕೇವಲ ಸಾಹಿತ್ಯಕ್ಕಷ್ಟೇ ಸೀಮಿತರಾಗಿರಲಿಲ್ಲ. ಅವರು ಯಕ್ಷಗಾನ, ಪರಿಸರ ಮತ್ತು ವಿಜ್ಞಾನದ ಬಗೆಗೂ ಅಪಾರ ಕುತೂಹಲ ಹಾಗೂ ಅಧ್ಯಯನಶೀಲತೆಯನ್ನು ಹೊಂದಿದ್ದವರು. ಅಂತಹ ಮೇರು ವ್ಯಕ್ತಿತ್ವದ ಹೆಸರಿನಲ್ಲಿ ಸ್ಥಾಪನೆಯಾಗಿರುವ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ಈ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. 

ಸಾಹಿತ್ಯದ ತೂಗುಯ್ಯಾಲೆಯ ಜೊತೆಗೆ ಈಗ ದೇಶದ ರಕ್ಷಣಾ ಪಡೆಯ ಹೆಮ್ಮೆಯ ಪ್ರತೀಕವಾದ ‘ಮಿಗ್-21’ ಯುದ್ಧ ವಿಮಾನವನ್ನು ಸಾಹಿತ್ಯಾಸಕ್ತರು, ಶಾಲಾ ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ಕರಾವಳಿಯ ಜನ ಕಣ್ತುಂಬಿಕೊಳ್ಳಬಹುದು.

ಭೂಮಿಗೆ ಇಳಿದ ಬಾನಾಡಿ: ಮಿಗ್ ಯುದ್ಧವಿಮಾನದ ರೋಚಕ ಪಯಣ 

ವಾಯುಪಡೆಯಲ್ಲಿ 60 ವರ್ಷಗಳ ಸೇವೆಯಿಂದ ನಿವೃತ್ತಿಗೊಂಡಿರುವ ಈ ಮಿಗ್ ಯುದ್ಧವಿಮಾನವು ಇಡೀ ಕರಾವಳಿ ಭಾಗಕ್ಕೆ ಮತ್ತೊಂದು ಹೆಮ್ಮೆಯ ಗರಿಯಾಗಿದೆ. ರಾಜ್ಯಸಭಾ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿಯವರ ಕನಸಿನ ಕೂಸಾದ ಈ ಯೋಜನೆ, ಹಲವು ವರ್ಷಗಳ ಸತತ ಪ್ರಯತ್ನದ ಫಲವಾಗಿ ಇಂದು ಸಾಕಾರಗೊಂಡಿದೆ. ಕಾರಂತರ ಹುಟ್ಟೂರಾದ ಕೋಟದಲ್ಲಿ, ಅವರ ನೆನಪಿನಂಗಳದಲ್ಲಿ ಈ ಯುದ್ಧವಿಮಾನವನ್ನು ಪ್ರದರ್ಶನಕ್ಕಾಗಿ ಸ್ಥಾಪಿಸಿರುವುದು ಸಾಹಿತ್ಯ ಮತ್ತು ವಿಜ್ಞಾನದ ಅಪರೂಪದ ಸಂಗಮದಂತಿದೆ.

ಸತತ ಪ್ರಯತ್ನದ ಹಾದಿ: ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದೇನು? :

ಈ ಕುರಿತು ಸಂತಸ ಹಂಚಿಕೊಂಡಿರುವ ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರು, “ನಮ್ಮೂರಿನ ಕಾರಂತ ಥೀಮ್ ಪಾರ್ಕ್ ಅಂಗಳಕ್ಕೆ ಮಿಗ್-21 ಯುದ್ಧವಿಮಾನ ಬಂದಿರುವುದು ನಮಗೆಲ್ಲರಿಗೂ ಅತ್ಯಂತ ಖುಷಿಯ ವಿಚಾರ. ಇಲ್ಲಿಗೆ ಬರುವ ಮಕ್ಕಳಿಗೆ ಮತ್ತು ಪ್ರವಾಸಿಗರಿಗೆ ವೀಕ್ಷಣೆಗೆ ಅನುಕೂಲವಾಗಬೇಕೆಂಬ ದೃಷ್ಟಿಯಿಂದ ನಾನು ಬಹಳ ವರ್ಷಗಳಿಂದ ಈ ಪ್ರಯತ್ನದಲ್ಲಿದ್ದೆ”.

“ಮನೋಹರ್ ಪರಿಕ್ಕರ್ ರಕ್ಷಣಾ ಸಚಿವರಾಗಿದ್ದಾಗ ನಳಿನ್ ಕುಮಾರ್ ಕಟೀಲ್ ಅವರ ಮೂಲಕ ಮನವಿ ಸಲ್ಲಿಸಿದ್ದೆ. ನಂತರ ನಿರ್ಮಲಾ ಸೀತಾರಾಮನ್ ಅವರ ಬಳಿಯೂ ಪ್ರಸ್ತಾಪಿಸಿದ್ದೆ. ಇದೀಗ ರಾಜನಾಥ್ ಸಿಂಗ್ ಅವರು ರಕ್ಷಣಾ ಮಂತ್ರಿಯಾಗಿರುವಾಗ, ನಾನೇ ಸ್ವತಃ ಸಂಸದನಾಗಿ ಮನವಿ ಮಾಡಿದ ಹಿನ್ನೆಲೆಯಲ್ಲಿ, ಕಾರಂತ ಥೀಮ್ ಪಾರ್ಕ್ ಮೇಲಿನ ಪ್ರೀತಿಯಿಂದ ಅವರು ಇದನ್ನು ಮಂಜೂರು ಮಾಡಿದ್ದಾರೆ,” ಎಂದು ಅವರು ಸ್ಮರಿಸಿದರು.

ಸುಮಾರು 15 ಜನ ತಜ್ಞ ಇಂಜಿನಿಯರ್‌ಗಳ ತಂಡ, ಸತತ 15 ದಿನಗಳ ಕಾಲ ಶ್ರಮಿಸಿ ಈ ಯುದ್ಧವಿಮಾನವನ್ನು ಜೋಡಿಸುವ ಕಾರ್ಯವನ್ನು ಪೂರೈಸಿದ್ದಾರೆ.

“ಕರ್ನಾಟಕದಲ್ಲಿ ಶಿವಮೊಗ್ಗ ಮತ್ತು ಬೆಂಗಳೂರನ್ನು ಬಿಟ್ಟರೆ, ಗ್ರಾಮೀಣ ಭಾಗವಾದ ನಮ್ಮ ಕೋಟದಲ್ಲಿ ಇಂತಹದೊಂದು ಯುದ್ಧವಿಮಾನ ನೆಲೆಸಿರುವುದು ಹೆಮ್ಮೆಯ ಸಂಗತಿ. ಇದು ಕಾರಂತರ ಥೀಮ್ ಪಾರ್ಕ್‌ಗೆ ವಿಶೇಷ ಗೌರವ ತಂದಿದೆ,” ಎಂದು ಪೂಜಾರಿಯವರು ಅಭಿಪ್ರಾಯಪಟ್ಟರು.

ಥೀಮ್ ಪಾರ್ಕ್: ಸಾಹಿತ್ಯ ಲೋಕದ ದೃಶ್ಯಕಾವ್ಯ :

2011ರಲ್ಲಿ ಉದ್ಘಾಟನೆಗೊಂಡ ಈ ಥೀಮ್ ಪಾರ್ಕ್, ಕಾರಂತರ ಸಾಹಿತ್ಯ ಕೃತಿಗಳ ಪಾತ್ರಗಳಿಗೆ ಜೀವ ತುಂಬುವ ಸಾಕ್ಷಿಕಟ್ಟೆಯಾಗಿದೆ.

ಮೂಕಜ್ಜಿಯ ಕನಸುಗಳು: ಜ್ಞಾನಪೀಠ ಪ್ರಶಸ್ತಿ ವಿಜೇತ ಕೃತಿಯ ನಾಯಕಿ ಮೂಕಜ್ಜಿಯು ಮಕ್ಕಳಿಗೆ ಕಥೆ ಹೇಳುತ್ತಿರುವ ಶಿಲ್ಪವು ಇಲ್ಲಿನ ಪ್ರಮುಖ ಆಕರ್ಷಣೆ.

ಚೋಮನ ದುಡಿ: ಚೋಮನು ಡೊಳ್ಳು ಬಾರಿಸುವ ದೃಶ್ಯವು ನೋಡುಗರ ಮನ ಕದಡುತ್ತದೆ.

ಕೂಸಣ್ಣನ ಎತ್ತಿನ ಗಾಡಿ: ಕಾರಂತರನ್ನು ಕರೆದೊಯ್ಯುತ್ತಿದ್ದ ಕೋಟ ಗ್ರಾಮದ ಕೊನೆಯ ಎತ್ತಿನ ಗಾಡಿಯಾಗಿದ್ದ ಕೂಸಣ್ಣನ ಗಾಡಿಯೂ ಇಲ್ಲಿ ಶಿಲ್ಪವಾಗಿ ಶಾಶ್ವತ ಸ್ಥಾನ ಪಡೆದಿದೆ. ಕೂಸಣ್ಣನ ಶಿಲ್ಪ ರಚಿಸುವಾಗ ಖುದ್ದು ಕೂಸಣ್ಣನೇ ಬಂದು ವೇಷ ಧರಿಸಿ ಕುಳಿತಿದ್ದು ಇತಿಹಾಸ.

ಜಟಾಯು ಮತ್ತು ರಾಧಾ-ಕೃಷ್ಣ: 

ಪ್ರವೇಶ ದ್ವಾರದಲ್ಲಿ ಕಾರಂತರ ಶಿಷ್ಯ ಸಂಜೀವ್ ಪೂಜಾರಿಯವರೇ ಮಾದರಿಯಾಗಿ ನಿಂತು ರಚಿಸಲಾದ ಜಟಾಯು ಶಿಲ್ಪ ಹಾಗೂ ಕೆ.ಕೆ. ಹೆಬ್ಬಾರರ ಕಲ್ಪನೆಯ ರಾಧಾ-ಕೃಷ್ಣರ ಶಿಲ್ಪಗಳು ಉದ್ಯಾನದ ಅಂದವನ್ನು ಹೆಚ್ಚಿಸಿವೆ.

ನಡೆದಾಡುವ ವಿಶ್ವಕೋಶದ ನೆನಪು :

44 ಕಾದಂಬರಿಗಳು, 14 ನಾಟಕಗಳು, ವಿಜ್ಞಾನ ಪ್ರಪಂಚ, ಬಾಲ ಪ್ರಪಂಚದಂತಹ ವಿಶ್ವಕೋಶಗಳನ್ನು ರಚಿಸಿದ ಕಾರಂತರು ಕನ್ನಡ ಸಾರಸ್ವತ ಲೋಕದ ದಿಗ್ಗಜ. ಅವರ ಬದುಕು, ಬರಹ ಮತ್ತು ಕಲಾ ಆಸಕ್ತಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಥೀಮ್ ಪಾರ್ಕ್ ಮಹತ್ವದ ಪಾತ್ರ ವಹಿಸುತ್ತಿದೆ. ಇದೀಗ ಯುದ್ಧವಿಮಾನದ ಸೇರ್ಪಡೆಯು ಥೀಮ್ ಪಾರ್ಕ್‌ನ ಆಕರ್ಷಣೆಯನ್ನು ಇಮ್ಮಡಿಗೊಳಿಸಿದ್ದು, ವಾರದ ಏಳೂ ದಿನಗಳ ಕಾಲ (ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ) ಪ್ರವಾಸಿಗರಿಗೆ ಮುಕ್ತವಾಗಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

BW Special | Wakeup Call | ಗೋವಾ ನೈಟ್ ಕ್ಲಬ್ ದುರಂತ: ಸಿಲಿಕಾನ್ ಸಿಟಿ ಹೊಸ ವರ್ಷದ ಪಾರ್ಟಿಗೆ ‘ರೆಡ್ ಅಲರ್ಟ್’!!

Next Post

ಬೆಂಗಳೂರಿಗರೇ ಗಮನಿಸಿ: ಇನ್ನು ಮುಂದೆ ಹಳೆಯ ಪದ್ಧತಿಯಲ್ಲೇ ‘ಇ-ಖಾತಾ’ ವಿತರಣೆ; ಕಸ ವಿಲೇವಾರಿಗೆ ಹೈಟೆಕ್ ಸ್ಪರ್ಶ

Next Post

ಬೆಂಗಳೂರಿಗರೇ ಗಮನಿಸಿ: ಇನ್ನು ಮುಂದೆ ಹಳೆಯ ಪದ್ಧತಿಯಲ್ಲೇ ‘ಇ-ಖಾತಾ’ ವಿತರಣೆ; ಕಸ ವಿಲೇವಾರಿಗೆ ಹೈಟೆಕ್ ಸ್ಪರ್ಶ

ಚಂದ್ರನ ಶಿವಶಕ್ತಿ ಪಾಯಿಂಟ್ ನಿಜಕ್ಕೂ ಶಕ್ತಿಶಾಲಿ : ಶಶಿಯ ಅಂಗಳದಲ್ಲಿ ಊಹೆಗೂ ಮೀರಿದ 'ವಿದ್ಯುತ್' ಪ್ರವಾಹದ ರಹಸ್ಯ ಭೇದಿಸಿದ ಇಸ್ರೋ

Please login to join discussion

Like Us on Facebook

Follow Us on Twitter

Recent News

Karnataka Budget 2026-27 | ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ: 4.48 ಲಕ್ಷ ಕೋಟಿ ಮೊತ್ತದ ‘ಸರ್ವೋದಯ’ ಆಯವ್ಯಯದ ಕಂಪು

March 6, 2026

AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

March 5, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Karnataka Budget 2026-27 | ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ: 4.48 ಲಕ್ಷ ಕೋಟಿ ಮೊತ್ತದ ‘ಸರ್ವೋದಯ’ ಆಯವ್ಯಯದ ಕಂಪು

March 6, 2026

AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

March 5, 2026

#IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

March 5, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d