ಬೆಂಗಳೂರು, ನ.10 www.bengaluruwire.com : ತಮ್ಮ ನಿವೇಶನಗಳ ಹಂಚಿಕೆಗಾಗಿ ದೀರ್ಘಕಾಲದವರೆಗೆ ಕಾಯುತ್ತಿದ್ದ ಅರ್ಕಾವತಿ ಬಡಾವಣೆಯ ನಿವೇಶನದಾರರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಒಂದೇ ದಿನದಲ್ಲಿ ಬರೋಬ್ಬರಿ 784 ಬದಲಿ ನಿವೇಶನಗಳನ್ನು ಹಂಚಿಕೆ ಮಾಡುವ ಮೂಲಕ ಹೊಸ ಮುನ್ನುಡಿ ಬರೆದಿದೆ.
ಬದಲಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದ ಅರ್ಕಾವತಿ ಬಡಾವಣೆಯ ನಿವೇಶನ ಹಂಚಿಕೆದಾರರಿಗೆ, ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ (Nadaprabhu Kempegowda Layout) ಈ ಬದಲಿ ಸೈಟ್‌ಗಳನ್ನು ನೀಡಲಾಗಿದೆ. ಸೋಮವಾರ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರು ‘ರಾಂಡಮೈಸೇಷನ್’ (Randomization) ತಂತ್ರಾಂಶದ ಮೂಲಕ ಈ ನಿವೇಶನಗಳನ್ನು ಹಂಚಿಕೆ ಮಾಡಿದರು.

ಲಾಟರಿ ಪ್ರಕ್ರಿಯೆಯಲ್ಲಿ ಹಂಚಿಕೆಯಾದ ನಿವೇಶನಗಳ ವಿವರ:
ಬಿಡಿಎ ಹಂಚಿಕೆ ಮಾಡಿರುವ ವಿವಿಧ ಅಳತೆಯ 784 ನಿವೇಶನಗಳ ವಿವರಗಳು ಈ ಕೆಳಕಂಡಂತಿವೆ:


ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಾಗಿ, ಹಂಚಿಕೆದಾರರು ಸ್ವಾಧೀನ ಪಡೆಯದ ಸೈಟ್‌ಗಳನ್ನು ಈಗ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನಗಳಾಗಿ ಹಂಚಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಬಿಡಿಎ ಪ್ರಕಟಣೆಯಲ್ಲಿ ಕೋರಿದೆ.
ಈ ಸಂದರ್ಭದಲ್ಲಿ ಆಯುಕ್ತರಾದ ಮೇಜರ್ ಮಣಿವಣ್ಣನ್, ಬಿಡಿಎ ಕಾರ್ಯದರ್ಶಿ ಸಿ.ಎಲ್. ಶಿವಕುಮಾರ್, ಹೆಚ್ಚುವರಿ ಕಾರ್ಯದರ್ಶಿ ಎನ್. ಮಂಜುನಾಥ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.






















