ಬೆಂಗಳೂರು, ಅ.29 www.bengaluruwire.com : ದಕ್ಷಿಣ ಬೆಂಗಳೂರಿನ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಪ್ರಮುಖ ಸುದ್ದಿಯೊಂದು ಇಲ್ಲಿದೆ. ಜಯನಗರದಲ್ಲಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ (RTO : KA-05)ಯನ್ನು ಅಂಜನಾಪುರಕ್ಕೆ ಸ್ಥಳಾಂತರಿಸಲಾಗಿದೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಬೆಂಗಳೂರು ನಗರ ಜಿಲ್ಲೆ ಹಾಗೂ ಜಯನಗರ RTO ಕಚೇರಿಯು, ಅಂಜನಾಪುರ, ಉತ್ತರಹಳ್ಳಿ ಹೋಬಳಿ, ಜೆ.ಪಿ. ನಗರ 9ನೇ ಹಂತದಲ್ಲಿ ನಿರ್ಮಿಸಲಾದ ನೂತನ ಕಟ್ಟಡದ ವಿಳಾಸಕ್ಕೆ ಸ್ಥಳಾಂತರಗೊಂಡಿದೆ.
ಇಲಾಖೆಗೆ ಸಂಬಂಧಿಸಿದ ಎಲ್ಲ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು ಇಂದಿನಿಂದಲೇ ಅಂಜನಾಪುರದ ಹೊಸ ಕಚೇರಿಗೆ ಭೇಟಿ ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ವಿಳಾಸದ ವಿವರ:

ಸರ್ವೇ ನಂ. 64/1, ಅಂಜನಾಪುರ, ಉತ್ತರಹಳ್ಳಿ ಹೋಬಳಿ, ಜೆ.ಪಿ. ನಗರ, 9ನೇ ಹಂತ, ಬೆಂಗಳೂರು-560108.
ಬಿಎಂಟಿಸಿ ಬಸ್ ಸಂಪರ್ಕ ವ್ಯವಸ್ಥೆ:
ಸಾರ್ವಜನಿಕರ ಅನುಕೂಲಕ್ಕಾಗಿ ಬಿಬಿಎಂಟಿಸಿ ಬಸ್ ಸಂಪರ್ಕ ಕಲ್ಪಿಸಲಾಗಿದೆ. ಅಂಜನಾಪುರ ಕಚೇರಿಗೆ ತಲುಪಲು ಈ ಕೆಳಕಂಡ ಸ್ಥಳಗಳಿಂದ ಬಸ್ ವೇಳಾಪಟ್ಟಿ ಲಭ್ಯವಿದೆ:
ಮೆಟ್ರೋ ಸಂಪರ್ಕ:
ಹೊಸ RTO ಕಚೇರಿಯು ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಿಂದ ಕೇವಲ 3 ಕಿ.ಮೀ. ದೂರದಲ್ಲಿದೆ. ಸಾರ್ವಜನಿಕರು ಮೆಟ್ರೋ ಮತ್ತು ಬಿಎಂಟಿಸಿ ಬಸ್ ಸಂಪರ್ಕದ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಜಯನಗರ RTO ಕಚೇರಿ ಅಧಿಕಾರಿಗಳು ಕೋರಿದ್ದಾರೆ.






















