ಬೆಂಗಳೂರು, ಮೇ.16 www.bengaluruwire.com : ರಾಜ್ಯ ಸರ್ಕಾರವು ಗೃಹಜ್ಯೋತಿ ಯೋಜನೆಯಡಿ ಮನೆ ಬದಲಾಯಿಸಿದ ಗ್ರಾಹಕರಿಗೂ ವಿದ್ಯುತ್ ಬಿಲ್‌ನಲ್ಲಿ ಸಹಾಯಧನ ಪಡೆಯಲು ಅನುಕೂಲವಾಗುವಂತೆ ಡಿ-ಲಿಂಕ್ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಿದೆ.
ಈ ಮೊದಲು ಇದ್ದ ಗೊಂದಲಗಳನ್ನು ನಿವಾರಿಸಿ, ಹೊಸ ಮನೆಗೆ ಸ್ಥಳಾಂತರಗೊಂಡಿರುವ ಫಲಾನುಭವಿಗಳು ಸುಲಭವಾಗಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಇಚ್ಛಿಸುವವರು ಸೇವಾಸಿಂಧು ಗ್ಯಾರೆಂಟಿ ಸ್ಕೀಮ್ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್ sevasindhugs.karnataka.gov.in ಅಥವಾ ನೇರವಾಗಿ https://sevasindhu.karnataka.gov.in/GruhaJyothi_Delink/GetAadhaarData.aspx ಲಿಂಕ್ ಮೂಲಕ ತಮ್ಮ ಆಧಾರ್ ಕಾರ್ಡ್ ವಿವರಗಳನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು.
ರಾಜ್ಯಾದ್ಯಂತ ಈವರೆಗೆ 2,83,291 ಡಿ-ಲಿಂಕ್ ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ವ್ಯಾಪ್ತಿಯಲ್ಲೇ ಗರಿಷ್ಠ ಅಂದರೆ 2,11,456 ಅರ್ಜಿಗಳು ಸ್ವೀಕೃತವಾಗಿವೆ ಎಂದು ಇಲಾಖೆ ತಿಳಿಸಿದೆ.

ಹೊಸ ಮನೆಗೆ ಬಂದಿರುವ ಬಾಡಿಗೆದಾರರು ಅಥವಾ ಮಾಲೀಕರು ಈ ಅವಕಾಶವನ್ನು ಬಳಸಿಕೊಂಡು ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೇಲಿನ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
