ಬೆಂಗಳೂರು, ಮೇ.15 www.bengaluruwire.com : ನಗರದ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮೇ 19 ರಿಂದ ಅತ್ತಿಬೆಲೆ ಬಸ್ ನಿಲ್ದಾಣದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಹವಾನಿಯಂತ್ರಿತ ಬಸ್ ಸಂಚಾರ ಆರಂಭಿಸಲಿದೆ.
ಈ ಕೆಐಎ-8ಹೆಚ್ (KIA-8H) ಮಾರ್ಗಸಂಖ್ಯೆ ಅಡಿಯಲ್ಲಿ ಒಟ್ಟು 06 ಹವಾನಿಯಂತ್ರಿತ ಬಸ್ಸುಗಳು ಈ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿವೆ. ಹೊಸ ಬಸ್ ಸೇವೆಯು ಬಿದರಗುಪ್ಪೆ, ಮೇಡಹಳ್ಳಿ, ಸರ್ಜಾಪುರ ಬಸ್ ನಿಲ್ದಾಣ, ದೊಮ್ಮಸಂದ್ರ, ಕೊಡತಿಗೇಟ್, ಕೈಕೊಂಡರಹಳ್ಳಿ, ಬೆಳ್ಳಂದೂರು, ಕೆ.ಆರ್ ಪುರ ರೈಲ್ವೆ ನಿಲ್ದಾಣ, ಬಾಬುಸಾಬಪಾಳ್ಯ, ವೀರಣ್ಣನಪಾಳ್ಯ, ಹೆಬ್ಬಾಳ, ಕೋಗಿಲು ಕ್ರಾಸ್ ಮಾರ್ಗವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಲಿದೆ.
ಅತ್ತಿಬೆಲೆ ಬಸ್ ನಿಲ್ದಾಣದಿಂದ ಬಸ್ ಹೊರಡುವ ಸಮಯ:
ಬೆಳಿಗ್ಗೆ: 05:30, 06:30, 07:30, 08:30, 09:30, 10:30

ಸಂಜೆ: 17:20, 18:15, 19:15, 20:15, 21:15, 22:20

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಸ್ ಹೊರಡುವ ಸಮಯ :
ಬೆಳಿಗ್ಗೆ: 02:00, 03:00, 04:00, 05:00, 06:00, 07:00
ಮಧ್ಯಾಹ್ನ/ಸಂಜೆ: 14:00, 15:00, 16:00, 17:00, 18:00, 19:00
ಈ ಹೊಸ ಸೇವೆಯು ದಕ್ಷಿಣ ಬೆಂಗಳೂರಿನ ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೆ ಸುಲಭವಾಗಿ ತಲುಪಲು ನೆರವಾಗಲಿದೆ ಎಂದು ಬಿಎಂಟಿಸಿ ತಿಳಿಸಿದೆ. ಹವಾನಿಯಂತ್ರಿತ ಬಸ್ಸುಗಳ ಲಭ್ಯತೆಯಿಂದ ಪ್ರಯಾಣಿಕರು ಆರಾಮದಾಯಕ ಪ್ರಯಾಣವನ್ನು ನಿರೀಕ್ಷಿಸಬಹುದು. ಹೆಚ್ಚಿನ ಮಾಹಿತಿಗಾಗಿ ಬಿಎಂಟಿಸಿ ವೆಬ್‌ಸೈಟ್ ಅಥವಾ ಸಹಾಯವಾಣಿಯನ್ನು ಸಂಪರ್ಕಿಸಬಹುದು.