ಶ್ರೀನಗರ, ಮೇ.03 www.bengaluruwire.com : ಪಹಲ್ಗಾಮ್ ಉಗ್ರರ ದುಷ್ಕೃತ್ಯದಿಂದ ನಲುಗಿದ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ಶ್ರೀ ಆದಿ ಶಂಕರಚಾರ್ಯ ಮಠದಲ್ಲಿ ಶುಕ್ರವಾರ ಬಹಳ ಭಕ್ತಿಭಾವದಿಂದ ಶಂಕರ ಜಯಂತಿ ಆಚರಣೆ ನಡೆಯಿತು. ಮೈಸೂರು ಮತ್ತು ಬೆಂಗಳೂರಿನಿಂದ ತೆರಳಿದ್ದ 13 ಜನರ ಭಕ್ತರ ತಂಡ ವಿಶೇಷ ಪೂಜೆ ಕೈಂಕರ್ಯಗಳನ್ನು ನಡೆಸಿದರು.
ದೇಶ ರಕ್ಷಣೆಗಾಗಿ, ಯೋಧರಿಗೆ ಹೆಚ್ಚು ಆರೋಗ್ಯ ಶಕ್ತಿ ತುಂಬುವುದಕ್ಕಾಗಿ ಹಾಗೂ ಜಮ್ಮು ಕಾಶ್ಮೀರದಲ್ಲಿ ಶಾಂತಿ, ಸುರಕ್ಷತೆ, ನೆಮ್ಮದಿ ನೆಲೆಸುವುದಕ್ಕಾಗಿ, ಇದೇ ವೇಳೆ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಶಾರದಾ ಪೀಠ ವಾಪಸ್ ಭಾರತಕ್ಕೆ ಬರುವ ಹಾಗೆ ಎಲ್ಲಾ ಶಕ್ತಿ ನೀಡಲೆಂದು ಈ ಎಲ್ಲಾ ಪೂಜೆ ವಿಶೇಷ ಪೂಜಾ ಕೈಂಕರ್ಯಗಳನ್ನು ಆಚರಣೆ ಕೈಗೊಳ್ಳಲಾಯಿತು.
ಸ್ವಾಮಿ ವಿಶ್ವನಾಥನಂದ ಸರಸ್ವತಿ ಸುಬೇಂದ್ರ ಬಾನಿ ಮಹಾ ಮಂಡಲೇಶ್ವರ ಶ್ರೀ ಅಕ್ಷಗಾನನಂದ ಜಿ ಉಪಸ್ಥಿತಿಯಲ್ಲಿ ಬೆಳಿಗ್ಗೆ ನಾಲ್ಕು ಗಂಟೆಯಿಂದ ಸಂಜೆ 5 ವರೆಗೂ ರುದ್ರಭಿಷೇಕ, ಮೃತ್ಯುಂಜಯ ಜಪ, ಜಮ್ಮು-ಕಾಶ್ಮೀರ್ ಪೊಲೀಸ್ ತಂಡದಿಂದ ವಿಶೇಷ ವಾದ್ಯ, ಸಿಆರ್ ಪಿಎಫ್ ಮತ್ತು ಯೋಧರ ತಂಡದ ಸಹಾಯದಿಂದ ವಿಶೇಷ ಹೋಮ, ಜಿಲ್ಲಾ ಆಡಳಿತದಿಂದ ವಿಶೇಷ ಪೂಜೆ ಹೋಮ, ಹವನ, ವೇದ ಮಂತ್ರ ಪಠಣೆ ನೆರವೇರಿಸಲಾಯಿತು.

ಮೈಸೂರಿನ ಡಾ.ನಾಗಲಕ್ಷ್ಮಿ ನಾಗಾರ್ಜುನ್ ತಂಡದಿಂದ ಆದಿ ಶಂಕರಚಾರ್ಯ ಜೀವನ ಕುರಿತ ಭರತನಾಟ್ಯ ಪ್ರದರ್ಶಿಸಿದರು. ಕಳೆದ 13 ವರ್ಷಗಳಿಂದ ಶ್ರೀ ಆದಿಶಂಕರ ಜಯಂತಿಯನ್ನು ಬೆಂಗಳೂರು ಮೈಸೂರು ತಂಡ ಜಮ್ಮು ಕಾಶ್ಮೀರನ ಶ್ರೀನಗರದ ಆದಿ ಶಂಕರಚಾರ್ಯ ಮಠದಲ್ಲಿ ನಡೆಸುತ್ತಾ ಬಂದಿದೆ. ಸಾಧು ಸಂತರಾದ ಸುಬೇಂದ್ರ ಬಾನಿ ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
