ಬೆಂಗಳೂರು, ಏ.09 www.bengaluruwire.com : ಹಾಲು, ವಿದ್ಯುತ್, ಗ್ಯಾಸ್, ಡೀಸೆಲ್ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ ನಂತರ ಇದೀಗ ಕಾವೇರಿ ಕುಡಿಯುವ ನೀರಿನ ದರ (Cauvery drinking water price)ವನ್ನು ಬೆಂಗಳೂರು ಜಲಮಂಡಳಿ (Bangalore Water Board)ಯು ಏರಿಕೆ ಮಾಡಿದೆ. ಆದರೆ ಈ ಬೆಲೆ ಹೆಚ್ಚಳವಾಗಿದ್ದು 11 ವರ್ಷಗಳ ನಂತರ ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗದಂತೆ ಹೆಚ್ಚಳ ಮಾಡಿದೆ.
ನೀರಿನ ಸಮರ್ಪಕ ಬಳಕೆಗೆ ಒತ್ತು ನೀಡುವುದನ್ನ ಮನಗಾಣಿಸುವ ಅಂಶಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ನೀರಿನ ದರವನ್ನು ಏರಿಕೆ ಮಾಡಲು ಉದ್ದೇಶಿಸಲಾಗಿದೆ. ವಿವಿಧ ಸ್ಲಾಬ್ (Various slabs) ಗಳಿಗೆ ಆಧಾರಿತವಾಗಿ ಗೃಹ ಬಳಕೆ (Domestic Use)ಗೆ ಪ್ರತಿ ಲೀಟರ್ ನೀರಿಗೆ ಕನಿಷ್ಠ 0.15 ಪೈಸೆ (ಒಂದು ಪೈಸೆಗಿಂತಲೂ ಕಡಿಮೆ) ಹಾಗೂ ಗರಿಷ್ಠ 1 ಪೈಸೆ, ದೊಡ್ಡ ಅಪಾರ್ಟ್‌ಮೆಂಟ್ (Apartment)ಗಳಿಗೆ ಕನಿಷ್ಠ 0.30 ಪೈಸೆ ಹಾಗೂ ಗರಿಷ್ಠ 1 ಪೈಸೆಯಷ್ಟು ಏರಿಕೆ ಮಾಡಲಾಗಿದೆ ಹಾಗೂ ವಾಣಿಜ್ಯ ಉದ್ದೇಶ (Commercial purpose)ಕ್ಕೆ ಕನಿಷ್ಠ ದರವನ್ನು ಪ್ರತಿ ಲೀ.0.90 ಪೈಸೆ ಹಾಗೂ ಗರಿಷ್ಠ 1.20 ಪೈಸೆ ಹೆಚ್ಚಳ ಮಾಡಲಾಗಿದ್ದು ಕಾವೇರಿ ನೀರಿನ ಬಳಕೆಗೆ ಅನುಗುಣವಾಗಿ ದರ ಏರಿಕೆ ಮಾಡಲಾಗಿದೆ.
ಈ ಬಗ್ಗೆ ಏ.10ರಂದು ಅಧಿಕೃತವಾಗಿ ಆದೇಶ ಹೊರಡಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ (Bangalore Water Board Chairman Dr Ram Prasat Manohar) ತಿಳಿಸಿದ್ದಾರೆ.
ಇಂದು ಬೆಂಗಳೂರು ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ 11 ವರ್ಷಗಳಲ್ಲಿ ಬೆಂಗಳೂರು ನಗರ ಕೇವಲ ವ್ಯಾಪ್ತಿಯಷ್ಟೇ ಅಲ್ಲ ಜನಸಂಖ್ಯೆಯಲ್ಲೂ ಅಗಾಧ ಬೆಳವಣಿಗೆಯನ್ನು ಕಂಡಿದೆ. ಸರಕಾರದಿಂದ ಹಣಕಾಸಿನ ಸಹಾಯವಿಲ್ಲದೇ ಸ್ವಾಯತ್ತ ಸಂಸ್ಥೆಯಾಗಿರುವ ಮಂಡಲಿಗೆ ಕುಡಿಯುವ ನೀರಿಗೆ ವಿಧಿಸುವ ಶುಲ್ಕವೇ ಪ್ರಮುಖ ಆದಾಯವಾಗಿದೆ.

ಕಳೆದ 10 ವರ್ಷಗಳಲ್ಲಿ ವಿದ್ಯುತ್ ವೆಚ್ಚ (Electricity cost)ವು ಶೇಕಡಾ 107% ರಷ್ಟು ಹೆಚ್ಚಾಗಿದೆ. ಹಾಗೆಯೇ ನಿರ್ವಹಣಾ ವೆಚ್ಚದಲ್ಲಿ ಶೇಡಕಾ 122.5 ರಷ್ಟು ಹೆಚ್ಚಳವಾಗಿದೆ.ಪ್ರಸ್ತುತ ಬೆಂಗಳೂರು ಜಲಮಂಡಳಿಯ ಮಾಸಿಕ ವೆಚ್ಚ 200 ಕೋಟಿ ರೂಪಾಯಿಗಳು. ಆದರೆ, ಪ್ರತಿ ತಿಂಗಳು ಸಂಗ್ರಹಣೆ ಆಗುತ್ತಿರುವುದು ಕೇವಲ 120 ಕೋಟಿ ರೂಪಾಯಿಗಳು ಮಾತ್ರ. ಪ್ರತಿ ತಿಂಗಳು ಸುಮಾರು 80 ಕೋಟಿ ರೂಪಾಯಿಗಳ ಆರ್ಥಿಕ ಕೊರತೆಯನ್ನ ಬೆಂಗಳೂರು ಜಲಮಂಡಳಿ ನಿಭಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನೀರಿನ ದರವನ್ನು ಏರಿಸಲು ಉದ್ದೇಶಿಸಲಾಗಿದ್ದು , ಏ.10ರಂದು ಅಧಿಕೃತ ಘೋಷಣೆ ಹೊರಡಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ನೀರಿನ ದರ ಹೆಚ್ಚಳದ ಪ್ರಮಾಣ ಹೇಗೆ? :
ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ತನ್ನ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಜನಸಾಮಾನ್ಯರಿಗೆ ಹೊರೆಯಾಗದಂತೆ ನಿಭಾಯಿಸಲು ನೀರಿನ ದರವನ್ನು ಏರಿಕೆ ಮಾಡಲಾಗಿದೆ. ಕಡಿಮೆ ನೀರು ಬಳಕೆಯನ್ನು ಉತ್ತೇಜಿಸುವುದು ಹಾಗೆಯೇ ನೀರಿನ ಮರುಬಳಕೆಯನ್ನು ಹೆಚ್ಚಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಯಾರಿಗೂ ಹೊರೆಯಾಗದಂತಹ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಗೃಹ ಬಳಕೆ ನೀರಿನ ದರ ಏರಿಕೆ (ಪ್ರತಿ ಲೀಟರ್‌ಗೆ)
0-8000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 0.15 ಪೈಸೆ ಹೆಚ್ಚಳ(1ಪೈಸೆಗಿಂತ ಕಡಿಮೆ) ಈ ಸ್ಲ್ಯಾಬ್ ನಡಿಯಲ್ಲಿ ಪ್ರತಿ 1 ಸಾವಿರ ಲೀಟರ್ ಗೆ ಪ್ರಸ್ತುತ ದರ ರೂ.7ರಿಂದ ರೂ.8.50 ಪೈಸೆ(ಅಂದರೇ ರೂ.1.50)ಯಷ್ಟು ಹೆಚ್ಚಳವಾಗಲಿದೆ.
ಇನ್ನು 8001- 25000 ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 0.30 ಪೈಸೆ ಹೆಚ್ಚಳ(1ಪೈಸೆಗಿಂತ ಕಡಿಮೆ) ಉದಾಹರಣೆಗೆ ಈ ಸ್ಲ್ಯಾಬ್ ನಡಿಯಲ್ಲಿ ಪ್ರತಿ 1 ಸಾವಿರ ಲೀಟರ್ ಗೆ ಪ್ರಸ್ತುತ ದರ ರೂ.11ರಿಂದ ರೂ.14ಕ್ಕೆ (ಅಂದರೆ ರೂ.3)ಹೆಚ್ಚಳವಾಗಲಿದೆ.
ಅದೇ ರೀತಿ 25001 – 50000 ಲೀಟರ್ ತನಕ :
0.80 ಪೈಸೆ ಹೆಚ್ಚಳ ಹಾಗೂ 50,001 – 1,00,000 ಲೀಟರ್ ಗಿನ ನೀರಿನ ಬಳಕೆಗೆ 1.00 ಪೈಸೆ ಹೆಚ್ಚಳ ಮಾಡಲಾಗಿದೆ.
ಅಪಾರ್ಟ್‌ಮೆಂಟ್ ನೀರಿನ ದರ ಏರಿಕೆ (ಪ್ರತಿ ಲೀಟರ್‌ಗೆ) :
ನಗರದಲ್ಲಿನ ಅಪಾರ್ಟ್ ಮೆಂಟ್ ಗಳಲ್ಲಿನ ವಸತಿ ಘಟಕಗಳಿಗೆ 0-2,00,000 ಲೀಟರ್ ತನಕದ ನೀರಿಗೆ:
0.30 ಪೈಸೆ, 2,00,001-5,00,000 ಲೀಟರ್ ನೀರಿಗೆ:
0.60 ಪೈಸೆ ಹಾಗೂ 5,00,001-10,00,000 ಲೀಟರ್ ನೀರಿಗೆ : 1 ಪೈಸೆಯಷ್ಟು ಏರಿಕೆ ಮಾಡಲಾಗಿದೆ.
ನಾನ್ ಡೊಮೆಸ್ಟಿಕ್ -ಗೃಹೇತರ ಬಳಕೆ (ವಾಣಿಜ್ಯ ಉದ್ದೇಶ)ಕೈಗಾರಿಕೆಗಳಿಗೆ/ಬಲ್ಕ್ ಸಪ್ಲೇ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 0.90 ಪೈಸೆ ಹೆಚ್ಚಳ(1ಪೈಸೆಗಿಂತ ಕಡಿಮೆ)
0 – 10,000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 1.00 ಪೈಸೆ ಹೆಚ್ಚಳ
10,001 – 25,000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ಗೆ 1.30 ಪೈಸೆ ಹೆಚ್ಚಳ
25,001 – 50,000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ಗೆ 1.50 ಪೈಸೆ ಹೆಚ್ಚಳ
50,001 – 75,000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ಗೆ 1.90 ಪೈಸೆ ಹೆಚ್ಚಳ
760001 – 1 ಲಕ್ಷ ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ಗೆ 1.10 ಪೈಸೆ ಹೆಚ್ಚಳ
1 ಲಕ್ಷ ಮತ್ತು ಅದಕ್ಕೂ ಹೆಚ್ಚು ಬಳಕೆ ಸ್ಲಾಬ್: ಪ್ರತಿ ಲೀಟರ್ಗೆ 1.20 ಪೈಸೆ ಹೆಚ್ಚಳ
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.