ಬೆಂಗಳೂರು, ಏ.08 www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ (Infrastructure) ಕಲ್ಪಿಸುವ ಯೋಜನೆಗಳಿಗೆ ದರಪಟ್ಟಿ ರೂಪಿಸಲು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಜ್ಞರ ಸಮಿತಿಯನ್ನು ರಚಿಸಿದ್ದಾರೆ.
ಪ್ರಸ್ತುತ ಹಾಲಿ ಇರುವ ಸಾಮಾನ್ಯ ದರಪಟ್ಟಿ ಗಳು ನಗರದ ಪರಿಸ್ಥಿತಿಗೆ ಹೊಂದಾಣಿಕೆ ಆಗುವುದಿಲ್ಲ ಎಂದು ಅನುಷ್ಠಾನ ಸಂಸ್ಥೆಗಳು ಹಾಗೂ ಗುತ್ತಿಗೆದಾರರು ಕಳವಳ ವ್ಯಕ್ತಪಡಿಸಿದ್ದಾರೆ. ಮೂಲಸೌಕರ್ಯ ಯೋಜನೆಗಳಿಗೆ ಅಸಮರ್ಪಕ ಬೆಲೆ ನಿಗದಿ, ಸಂಚಾರ ದಟ್ಟಣೆ, ಕಾರ್ಮಿಕ ವರ್ಗದ ವಸತಿ ತೊಂದರೆ, ಸೀಮಿತ ಅವಧಿ ಕೆಲಸ, ಭಾರಿ ಮತ್ತು ಸರಕು ವಾಹನಗಳ ನಿರ್ಬಂಧಿತ ಪ್ರವೇಶ, ಜಮೀನಿನ ಲಭ್ಯತೆಯ ಕೊರತೆ ಸಮಸ್ಯೆಗಳನ್ನು ಹಾಲಿ ದರ ಪಟ್ಟಿಯಲ್ಲಿ ಪರಿಗಣಿಸಲಾಗಿಲ್ಲ. ಹೀಗಾಗಿ ನಗರಕ್ಕೆ ಪ್ರತ್ಯೇಕ ದರಪಟ್ಟಿ (Separate price list) ರಚಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಗರಕ್ಕೆ ಪ್ರತ್ಯೇಕ ದರಪಟ್ಟಿ ರಚಿಸಲು ಬಿಬಿಎಂಪಿಯ ನಿವೃತ್ತ ಎಂಜಿನಿಯರ್‌ಗಳ ತಂಡ ರಚಿಸಲು ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ. ಬಿಬಿಎಂಪಿ ‘ನಮ್ಮ ರಸ್ತೆ’ ಕೈಪಿಡಿಯನ್ನು ಹೊರತರಲಾಗಿದ್ದು, ಅದರ ವಿನ್ಯಾಸವನ್ನು ಅಧ್ಯಯನ ಮಾಡಿ ದರಪಟ್ಟಿ ರಚಿಸಬೇಕು ಎಂದು ತಜ್ಞರ ಸಮಿತಿಗೆ ಸೂಚಿಸಲಾಗಿದೆ. ಸಮಿತಿಯು 30 ದಿನ ಗಳಲ್ಲಿ ಶಿಫಾರಸು ನೀಡಬೇಕು ಎಂದು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಯಾರೆಲ್ಲಾ ಇದ್ದಾರೆ ತಜ್ಞರ ಸಮಿತಿಯಲ್ಲಿ? :

ಸಮಿತಿ ಅಧ್ಯಕ್ಷ- ಸೋಮಶೇಖರ್, ಬಿಬಿಎಂಪಿಯ ನಿವೃತ್ತ ಮುಖ್ಯ ಎಂಜಿನಿಯರ್; ಸದಸ್ಯರು- ವಿಜಯ ಕುಮಾರ್ ಹರಿದಾಸ್, ಮುಖ್ಯ ಎಂಜಿನಿ ಯರ್, ಬಿಬಿಎಂಪಿ, ಜಿ.ಸಿ. ಜಗದೀಶ್, ಅಧೀಕ್ಷಕ ಎಂಜಿನಿಯರ್, ಲೋಕೋಪ ಯೋಗಿ ಇಲಾಖೆ, ಗೋಪಾಲಕೃಷ್ಣ, ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ, ಜಗ ನ್ನಾಥ್, ನಿವೃತ್ತ ಕಾರ್ಯಪಾಲಕ ಎಂಜಿನಿ ಯರ್ ಲೋಕೋಪಯೋಗಿ ಇಲಾಖೆ, ಅನ್ವರ್ ಬಾಷಾ, ನಿವೃತ್ತ ಸಹಾಯಕ ಕಾರ್ಯಪಾಲಕ ಲೋಕೋಪಯೋಗಿ ಎಸ್.ಸುಧೀಂದ್ರ, ಎಂಜಿನಿಯರ್ ಇಲಾಖೆ, ಸಹಾಯಕ ಎಂಜಿನಿಯರ್ ಪಿಡಬ್ಲ್ಯುಡಿ. ಸಂಚಾಲಕ-ಬಾಲಕೃಷ್ಣ, ಸಹಾಯಕ ಕಾರ್ಯ ಪಾಲಕ ಎಂಜಿನಿಯರ್, ಬಿಬಿಎಂಪಿ.

ಪ್ರತ್ಯೇಕ ದರಪಟ್ಟಿ ತಯಾರಾದ ಬಳಿಕ ನಗರದ ಮೂಲಸೌಕರ್ಯ ಯೋಜನೆಗಳ ವೆಚ್ಚ ಈಗಿನ ಸಂದರ್ಭಕ್ಕೆ ಅನುಗುಣವಾಗಿ ಹೆಚ್ಚಾಗುವ ನಿರೀಕ್ಷೆಯನ್ನು ತಳ್ಳಿಹಾಕುವಂತಿಲ್ಲ.