ಬೆಂಗಳೂರು, ಮಾ.31 www.bengaluruwire.com : ಎಂ.ಚಿನ್ನಸ್ವಾಮಿ ಕ್ರೀಡಾಂಗಣ (M. Chinnaswamy Stadium)ದಲ್ಲಿ ನಡೆಯಲಿರುವ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (TATA Indian Premier League 2025-IPL T20 – ಐಪಿಎಲ್) ಟಿ-20 ಕ್ರಿಕೆಟ್ ಪಂದ್ಯಾವಳಿಗೆ ಬಂದು ಹೋಗುವ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಿಎಂಟಿಸಿ (BMTC) ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಿದೆ.
ಏಪ್ರಿಲ್ 2, 10, 18, 24 ಹಾಗೂ ಮೇ ತಿಂಗಳಲ್ಲಿ 3ನೇ ತಾರೀಖು, 13 ಮತ್ತು 17ರಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಟಾ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ಈ ಹಿನ್ನಲೆ ಪಂದ್ಯಾವಳಿಗೆ ಬಂದು-ಹೋಗುವ ವೀಕ್ಷಕರಿಗೆ ಅನುಕೂಲವಾಗುವಂತೆ ಬೇಡಿಕೆಗೆ ಅನುಗುಣವಾಗಿ ಬಿಎಂಟಿಸಿ ಬಸ್ ಗಳನ್ನು ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಿಂದ ಈ ಕೆಳಕಂಡ ಮಾರ್ಗಗಳಲ್ಲಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ:
* ಎಸ್.ಬಿ. ಎಸ್-1ಕೆ: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ ಬಸ್ ನಿಲ್ದಾಣ (ಹೆಚ್.ಎ.ಎಲ್ ರಸ್ತೆ)

* ಜಿ-2: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸರ್ಜಾಪುರ

* ಜಿ-3: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಿಂದ ಎಲೆಕ್ಟ್ರಾನಿಕ್ ಸಿಟಿ (ಹೊಸೂರು ರಸ್ತೆ)
* ಜಿ-4: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಿಂದ ಬನ್ನೇರುಘಟ್ಟ ಮೃಗಾಲಯ
* ಜಿ-7: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಿಂದ ಜನಪ್ರಿಯ ಟೌನ್ ಷಿಪ್ (ಮಾಗಡಿ ರಸ್ತೆ)
* ಜಿ-10: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಿಂದ ಆರ್.ಕೆ. ಹೆಗಡೆ ನಗರ ಯಲಹಂಕ (ನಾಗವಾರ, ಟ್ಯಾನರಿ ರಸ್ತೆ)
* 317 ಜಿ: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೊಸಕೋಟೆ
* 13: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಿಂದ ಬನಶಂಕರಿ
ಈ ವಿಶೇಷ ಬಸ್ ವ್ಯವಸ್ಥೆಯು ಕ್ರಿಕೆಟ್ ವೀಕ್ಷಕರಿಗೆ ಅನುಕೂಲವಾಗಲಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಬಿಎಂಟಿಸಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.