ಬೆಂಗಳೂರು, ಮಾ.23 www.bengaluruwire.com : ಯಶ್ ನಟನೆಯ ದೇಶದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಭಾರತದಲ್ಲಿ ಮಾತ್ರವಲ್ಲ ವಿದೇಶಿ ಅಭಿಮಾನಿಗಳು ಸಹ ಈ ಸಿನಿಮಾದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾವನ್ನು ಹಾಲಿವುಡ್ ಮಟ್ಟದಲ್ಲಿ ನಿರ್ಮಿಸಲಾಗುತ್ತಿದ್ದು, ಅದಕ್ಕೆ ಸಾಕ್ಷಿ ಎನ್ನುವಂತೆ ಯಶ್ ಆ ಫಿಲಮ್ ನ ಪೋಸ್ಟರ್ ಹಾಗೂ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ‘ಟಾಕ್ಸಿಕ್’ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದಾರೆ. ಪೋಸ್ಟರ್ನಲ್ಲಿ ಯಶ್ ಬಂದೂಕು ಹಿಡಿದುಕೊಂಡು ನಡೆದು ಬರುತ್ತಿರುವ ದೃಶ್ಯವಿದೆ. ಯಶ್ ಹಿಂದೆ ಬೆಂಕಿ ತುಂಬಿಕೊಂಡಿದೆ. ಎಲ್ಲವನ್ನೂ ವಿಧ್ವಂಸ ಮಾಡಿ ಸ್ಟೈಲ್ ಆಗಿ ನಡೆದು ಬರುತ್ತಿರುವ ಯಶ್ ಕೈಯಲ್ಲಿ ಹಳೆಯ ಮಾದರಿಯ ಮಷಿನ್ ಗನ್ ಒಂದಿದೆ. ಇದರ ಜೊತೆಗೆ ಯಶ್ ಪಾತ್ರದ ಕ್ಲೋಸ್ ಅಪ್ ಫೋಟೊ ಸಹ ಒಂದಿದೆ. ಆದರೆ ಆ ಫೋಟೊನಲ್ಲಿ ಯಶ್ನ ಮುಖ ಸ್ಪಷ್ಟವಾಗಿ ಕಾಣುತ್ತಿಲ್ಲ. ಆದರೆ ಯಶ್ ಧರಿಸಿರುವ ಕಿವಿಯೋಲೆ, ಹೇರ್ ಸ್ಟೈಲ್ ಮತ್ತು ಧರಿಸಿರುವ ಕೌವ್ ಬಾಯ್ ಹ್ಯಾಟ್ ಎಲ್ಲರ ಗಮನ ಸೆಳೆಯುತ್ತಿದೆ.
‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಒಂದು ವರ್ಷದ ಬಳಿಕ ಅಂದರೆ 2026 ಮಾರ್ಚ್ 19 ರಂದು ಆಗಲಿದೆ. ಯಶ್, ‘ಟಾಕ್ಸಿಕ್’ ಸಿನಿಮಾ ಪೋಸ್ಟರ್ ಮಾ.22ರಂದು ಬಿಡುಗಡೆ ಮಾಡಿದ್ದು ಈತನಕ ಸುಮಾರು 9 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದರೆ, 63.9 ಸಾವಿರ ಮಂದಿ ಈ ಪೋಸ್ಟರನ್ನು ಇಷ್ಟಪಟ್ಟಿದ್ದಾರೆ. ಯಶ್ ಅವರ ಈ ಪೋಸ್ಟರ್ ಸಖತ್ತಾಗಿ ವೈರಲ್ ಆಗಿದೆ. ಅಲ್ಲದೆ ಸಾಕಷ್ಟು ಕಮೆಂಟ್ಗಳು ವ್ಯಕ್ತವಾಗಿವೆ.