ಬೆಂಗಳೂರು, ಮಾ.17 www.bengaluruwire.com : ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ಜನ್ಮ ದಿನಕ್ಕೆ ಅವರ ಸಹೋದರ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ವಿಶೇಷ ವಿಡಿಯೋ ಶೇರ್ ಮಾಡಿದ್ದಾರೆ. ಇನ್ನೊಂದೆಡೆ ಅಪ್ಪು ಕುಟುಂಬ ಬೆಳಗ್ಗೆಯೇ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಅವರ ಸ್ಮಾರಕದ ಬಳಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದಾರೆ. ಬೆಳಗ್ಗೆಯಿಂದಲೇ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕದ ಬಳಿ ಬಂದು ನಮನವನ್ನು ಸಲ್ಲಿಸುತ್ತಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪುನೀತ್ ಸ್ಮಾರಕಕ್ಕೆ ವಿವಿಧ ಬಗೆಯ ಹೂವಿನಿಂದ ಅಲಂಕಾರ ಮಾಡಲಾಗಿದೆ. ದೇವಸ್ಥಾನದ ಮಂಟಪದ ಮಾದರಿಯಲ್ಲಿ ಅಪ್ಪು ಸ್ಮಾರಕಕ್ಕೆ ಅಲಂಕಾರ ಮಾಡಲಾಗಿದೆ.
ಅಪ್ಪು ಸಮಾಧಿಗೆ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಶಿವಣ್ಣ ದಂಪತಿ ಹಾಗೂ ಮಕ್ಕಳು, ರಾಘಣ್ಣ ದಂಪತಿ ಮತ್ತು ಮಕ್ಕಳು ಸೇರಿದಂತೆ ರಾಜ್ ಕುಟುಂಬದ ಅನೇಕ ಮಂದಿ ಅಪ್ಪು ಸ್ಮಾರಕಕ್ಕೆ ನಮನ ಸಲ್ಲಿಸಿ ಪೂಜೆ ಸಲ್ಲಿಸಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಅಭಿಮಾನಿಗಳುಅನ್ನದಾನ, ರಕ್ತದಾನ ಶಿಬಿರ ಹಮ್ಮಿಕೊಂಡಿದ್ದಾರೆ. ರಕ್ತದಾನಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪುನೀತ್ ಅಭಿಮಾನಿಗಳು ಭಾಗಿಯಾದ್ದಾರೆ.

ಇನ್ನು ನಟ ರಾಘವೇಂದ್ರ ರಾಜ್ ಕುಮಾರ್ ಶೇರ್ ಮಾಡಿರುವ ವಿಶೇಷ ವಿಡಿಯೋದಲ್ಲಿ ಡಾ.ರಾಜ್ ಕುಮಾರ್ ಫ್ಯಾಮಿಲಿ (Dr.Rajkumar Family) ವಿಶೇಷ ಫೋಟೋಗಳಿವೆ. ಪುನೀತ್ (Puneeth) ಜೊತೆಗಿನ ರಾಘವೇಂದ್ರ ರಾಜ್ ಕುಮಾರ್ ಅದ್ಭುತ ಕ್ಷಣದ ಮರೆಯಲಾರದ ಚಿತ್ರಗಳೂ ಇವೆ.

ಈ ಒಂದು ಫೋಟೋಗಳ ವಿಡಿಯೋದ ಹಿನ್ನೆಲೆಯಲ್ಲಿ ರಾಜ್‌ಕುಮಾರ್ ಹಾಡಿರೋ ಚಿತ್ರವೊಂದರ ಹಾಡನ್ನು ಬಳಕೆ ಮಾಡಲಾಗಿದೆ. ಪುನೀತ್ ಹುಟ್ಟುಹಬ್ಬಕ್ಕೆ ಈ ವಿಡಿಯೋ ತುಂಬಾನೆ ವಿಶೇಷ ಅಂತ ಹೇಳಬಹುದು. ಎಕ್ಸ್ ಖಾತೆಯಲ್ಲಿ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಇದನ್ನ ಹಂಚಿಕೊಂಡಿದ್ದಾರೆ. ಇದರ ಸುತ್ತ ಇನ್ನಷ್ಟು ವಿವರ ಇರೋ ಒಂದು ಸ್ಟೋರಿ ಇಲ್ಲಿದೆ .
ಅಪ್ಪು ಜನ್ಮ ದಿನಕ್ಕೆ ಫ್ಯಾಮಿಲಿ ವಿಶೇಷ ಫೊಟೋಗಳಿರುವ ವಿಡಿಯೋ :

ರಾಘವೇಂದ್ರ ರಾಜ್‌ಕುಮಾರ್ ತಮ್ಮ ಸಹೋದರ ಅಪ್ಪು ಜನ್ಮ ದಿನಕ್ಕೆ ಸ್ಪೆಷಲ್ ವಿಡಿಯೋ ಸಿದ್ದ ಮಾಡಿದ್ದಾರೆ. ಪುನೀತ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಡಾ.ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ಹೀಗೆ ಎಲ್ಲರೂ ಇರೋ ವಿಶೇಷ ಫೋಟೋಗಳು ಈ ಒಂದು ವಿಡಿಯೋದಲ್ಲಿವೆ.
ರಾಜ್‌ಕುಮಾರ್ ಹಾಡಿರೋ ‘ನೂರಾರು ನೆನಪಿನ ಸಂಸತಸ ತುಂಬಿದ ಹಾಡಿದು’ ಅನ್ನುವ ಹಾಡನ್ನು ಈ ವಿಡಿಯೋದಲ್ಲಿ ಬಳಕೆ ಮಾಡಲಾಗಿದೆ. ವಿಶೇಷವಾಗಿ ಈ ಹಾಡು ಸೂತ್ರಧಾರ ಚಿತ್ರದ್ದು. ಈ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ನಾಯಕರಾಗಿಯೇ ನಟಿಸಿದ್ದಾರೆ. ತಮ್ಮ ಚಿತ್ರದ ಹಾಡನ್ನೇ ಈ ಒಂದು ವಿಡಿಯೋದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಬಳಕೆ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ವಿಡಿಯೋ :

ರಾಘವೇಂದ್ರ ರಾಜ್‌ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಆಯಕ್ಟೀವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ಸೇರಿದಂತೆ ಎಕ್ಸ್ ಖಾತೆಯಲ್ಲೂ ರಾಘವೇಂದ್ರ ಆಕ್ಟೀವ್ ಆಗಿದ್ದಾರೆ. ಹಾಗೇನೆ ಇದೀಗ ಅಪ್ಪು ಜನ್ಮ ದಿನಕ್ಕೆ ಮಾಡಿರೋ ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಒಂದು ವಿಡಿಯೋ ನೋಡಿದಾಕ್ಷಣ ಗಮನ ಸೆಳೆಯುತ್ತದೆ. ಕಾರಣ, ರಾಜ್‌ಕುಮಾರ್ ಫ್ಯಾಮಿಲಿಯ ಅಪರೂಪದ ಫೋಟೋಗಳು ಇಲ್ಲಿ ಸಾಕಷ್ಟಿವೆ. ಇವುಗಳನ್ನ ನೋಡಿದವ್ರು ತುಂಬಾನೆ ಇಷ್ಟಪಡ್ತಾರೆ ಅಂತಲೂ ಹೇಳಬಹುದು.
ಒಂದಕ್ಕಿಂತ ಒಂದು ಅಪರೂಪದ ಫೋಟೋಗಳು :
ರಾಘವೇಂದ್ರ ರಾಜ್‌ಕುಮಾರ್ ಅವರ ಬಳಿ ಅಪರೂಪದ ಫೋಟೋಗಳಿವೆ. ರಾಜ್‌ಕುಮಾರ್ ಅವರಿಂದ ಹಿಡಿದು ತಮ್ಮ ಮಕ್ಕಳ ಈಗೀನ ಫೋಟೋಗಳ ಒಟ್ಟು ಕಲೆಕ್ಷನ್ ಇದೆ. ಅದನ್ನ ಆಗಾಗ ಅವರು ಶೇರ್ ಮಾಡ್ತಾ ಇರ್ತಾರೆ. ರಾಘಣ್ಣನ ಇನ್ಸ್ಟಾಗ್ರಾಮ್ ಪೇಜ್‌ಗೆ ಹೋದರೆ ಸಾಕು ಇದೆಲ್ಲವನ್ನು ಕಣ್ಣು ತುಂಬಿಕೊಳ್ಳಬಹುದು.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.