ಬೆಂಗಳೂರು, ಮಾ.13 www.bengaluruwire.com : ಜನತೆಗೆ ರಾಜ್ಯ ಸರ್ಕಾರ ಸಂತಸದ ಸುದ್ದಿಯನ್ನು ನೀಡಿದೆ. ಇನ್ನು ಮುಂದೆ ಎ-ಖಾತಾ, ಬಿ-ಖಾತಾ ಯಾವುದೇ ಇದ್ದರೂ ಇ-ತಂತ್ರಾಂಶದಿಂದ ಮಾಹಿತಿ ಪಡೆದು ಸ್ವತ್ತುಗಳನ್ನು ನೋಂದಣಿ ಮಾಡಿಕೊಡುವಂತೆ ಉಪನೋಂದಣಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ, ಗ್ರಾಪಂ ಅಧೀನದಲ್ಲಿರುವ ಸ್ವತ್ತುಗಳಿಗೆ ಕಡ್ಡಾಯವಾಗಿ ಇ- ಸ್ವತ್ತು, ಇ- ಆಸ್ತಿಯ ಬಗ್ಗೆ ಇ- ತಂತ್ರಾಂಶದಿಂದ ಮಾಹಿತಿ ಪಡೆದು ಎ ಖಾತಾ ಅಥವಾ ಬಿ ಖಾತಾ ಯಾವುದೇ ಇದ್ದರೂ ಅಂತಹ ಆಸ್ತಿಗಳನ್ನು ನೋಂದಾಯಿಸಬೇಕು ಎಂದು ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕ ಇಲಾಖೆ ಆಯುಕ್ತರಾದ ದಯಾನಂದ್ ಅವರು ಮಾ.12ರಂದು ಜ್ಞಾಪನ ಪತ್ರ ಹೊರಡಿಸಿದ್ದಾರೆ.

ರಾಜ್ಯದ ಯಾವುದೇ ಸ್ಥಳೀಯ ಸಂಸ್ಥೆಯಲ್ಲಿ ಬರುವ ಸ್ಥಿರಾಸ್ತಿಗಳಿಗೆ ಅನ್ವಯಿಸುವಂತೆ ಇ- ತಂತ್ರಾಂಶ (E- Software)ದಡಿ ಇ- ಖಾತಾ (E-Khata) ಹೊಂದಿರುವ ಎ ಖಾತಾ, ಬಿ ಖಾತಾ ಆಸ್ತಿಗಳ ನೋಂದಣಿಗೆ ಕೆಲವು ಉಪ ನೋಂದಣಾಧಿಕಾರಿಗಳು ಇ-ಖಾತಾ ಇದ್ದಾಗ್ಯೂ ಗೊಂದಲ ಸೃಷ್ಟಿಸುತ್ತಿದ್ದರು. ಹೀಗಾಗಿ ಜನರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಇ- ತಂತ್ರಾಂಶದಿಂದ ನಿಶ್ಚಿತವಾದ ಇ- ಆಸ್ತಿ ಅಥವಾ ಇ- ಸ್ವತ್ತಿನ ಬಗ್ಗೆ ಇ-ತಂತ್ರಾಂಶದಿಂದ ಮಾಹಿತಿ ಪಡೆದು ಎ ಖಾತಾ ಆಸ್ತಿಯಾಗಿರಲಿ ಅಥವಾ ಬಿ ಖಾತಾ ಆಸ್ತಿಯಾಗಿರಲಿ ನೋಂದಣಿ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಅದಾಗ್ಯೂ ಸರ್ಕಾರ ಸುತ್ತೋಲೆ, ಪತ್ರದಲ್ಲಿನ ನಿರ್ದೇಶನಗಳನ್ನು ಉಲ್ಲಂಘಿಸಿ ಉಪ ನೋಂದಣಾಧಿಕಾರಿಗಳು ಸ್ವತ್ತುಗಳ ನೋಂದಣಿ ಮಾಡಲು ಅವಕಾಶವಿರುವುದಿಲ್ಲ. ಒಂದೊಮ್ಮೆ ಈ ನಿರ್ದೇಶನಗಳನ್ನು ಉಲ್ಲಂಘಿಸಿ ಸ್ಥಿರಾಸ್ತಿಗಳನ್ನು ನೋಂದಾಯಿಸಿದರೆ ಅಂತಹ ಸಬ್ ರಿಜಿಸ್ಟ್ರಾರ್ ಗಳ ವಿರುದ್ಧ ಕೆಸಿಎಸ್ ಆರ್ ನಿಯಮಗಳ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.


“ನಾಗರೀಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಾಗೂ ಸ್ವತ್ತು ಪರಭಾರೆ ವಿಷಯದಲ್ಲಿ ಅಕ್ರಮಕ್ಕೆ ಕಡಿವಾಣ ಹಾಕಲು, ಇ- ತಂತ್ರಾಂಶದಿಂದ ನಿಶ್ಚಿತವಾದ ಇ- ಆಸ್ತಿ ಅಥವಾ ಇ- ಸ್ವತ್ತಿನ ಬಗ್ಗೆ ಇ-ತಂತ್ರಾಂಶದಿಂದ ಮಾಹಿತಿ ಪಡೆದು ಎ ಖಾತಾ ಆಸ್ತಿಯಾಗಿರಲಿ ಅಥವಾ ಬಿ ಖಾತಾ ಆಸ್ತಿಯಾಗಿರಲಿ ನೋಂದಣಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ”

– ಕೆ.ಎ.ದಯಾನಂದ, ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕ ಇಲಾಖೆ ಆಯುಕ್ತರು
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.