Friday, May 16, 2025
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Gruha Jyothi | ಮನೆ ಬದಲಾಯಿಸಿದವರಿಗೂ ಗೃಹಜ್ಯೋತಿ ಭಾಗ್ಯ! ಡಿ-ಲಿಂಕ್ ಪ್ರಕ್ರಿಯೆ ಇನ್ನಷ್ಟು ಸರಳ

    Video News | ಭಾರ್ಗವಾಸ್ತ್ರ: ಡ್ರೋನ್ ದಾಳಿಗಳನ್ನು ಸಮರ್ಥವಾಗಿ ಎದುರಿಸಿ ಧ್ವಂಸ ಮಾಡುವ ಪ್ರಯೋಗ ಯಶಸ್ವಿ

    ವಿಧಾನಸೌಧದ ಸಾಂದರ್ಭಿಕ ಚಿತ್ರ

    ರಾಜ್ಯದಲ್ಲಿ ಬಿ-ಖಾತಾ ಅವಧಿ 3 ತಿಂಗಳವರೆಗೆ ವಿಸ್ತರಣೆ : ಜಿಪಿಎ, ಅಗ್ರೀಮೆಂಟ್ ದಾರರಿಗೂ ಬಿ-ಖಾತಾ ವಿತರಣೆಗೆ ಚಿಂತನೆ

    Court News | ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಬಿ.ಆರ್. ಗವಾಯಿ ಪ್ರಮಾಣವಚನ ಸ್ವೀಕಾರ

    ಆದಾಯ ತೆರಿಗೆ ವಿವರ ಸಲ್ಲಿಕೆಗೆ ಸಿದ್ಧರಾಗಿರಿ : ಎಲ್ಲಾ 7 ನಮೂನೆಗಳ ಅಧಿಸೂಚನೆ ಪ್ರಕಟ

    “ಪಾಕ್ ಅಣ್ವಸ್ತ್ರ ಬೆದರಿಕೆಗಳಿಗೆ ಭಾರತ ಮಣಿಯಲ್ಲ” – “ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ” : ಪ್ರಧಾನಿ ಮೋದಿ ಶತ್ರು ರಾಷ್ಟ್ರಕ್ಕೆ ಖಡಕ್ ಎಚ್ಚರಿಕೆ

    Video News | ಭಾರತದ ಪ್ರಮುಖ ಸಶಸ್ತ್ರ ಬಲ : ಲಕ್ನೋದಲ್ಲಿ ಬ್ರಹ್ಮೋಸ್ ಏರೋಸ್ಪೇಸ್ ಉತ್ಪಾದನಾ ಘಟಕ ಉದ್ಘಾಟನೆ

    ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಗಳ ವಿಜಯ ಯಾತ್ರೆ ಮುಂದೂಡಿಕೆ

    ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನ ವಿರಾಮ ಘೋಷಣೆ

  • Bengaluru Focus

    Gruha Jyothi | ಮನೆ ಬದಲಾಯಿಸಿದವರಿಗೂ ಗೃಹಜ್ಯೋತಿ ಭಾಗ್ಯ! ಡಿ-ಲಿಂಕ್ ಪ್ರಕ್ರಿಯೆ ಇನ್ನಷ್ಟು ಸರಳ

    ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

    ಇಂದಿನಿಂದ ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ : ಜಿಬಿಎ ರಚನೆ ಬಗ್ಗೆ ಕಾಂಗ್ರೆಸ್- ಬಿಜೆಪಿ ಪರ ವಿರೋಧ

    ಬೆಂಗಳೂರು: ಅತ್ತಿಬೆಲೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೊಸ ಹವಾನಿಯಂತ್ರಿತ ಬಿಎಂಟಿಸಿ ಬಸ್ ಸೇವೆ!

    ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

    ನೀರು ಮತ್ತು ವಿದ್ಯುತ್ ಸಂಪರ್ಕ ಪಡೆಯಲು ಬಿಬಿಎಂಪಿಯಿಂದ ಸ್ವಾಧೀನಾನುಭವ ಪ್ರಮಾಣ ಪತ್ರ ಕಡ್ಡಾಯ

    BBMP Head Office Image

    GBA Complete Information | ಇತಿಹಾಸ ಪುಟ ಸೇರಲಿದೆ ಬಿಬಿಎಂಪಿ, ಜಿಬಿಎ ಅಸ್ಥಿತ್ವಕ್ಕೆ : ಮೇ 15ರಿಂದ ಬೆಂಗಳೂರಿನ ಆಡಳಿತದಲ್ಲಿ ಮಹತ್ವದ ಬದಲಾವಣೆ!!

    ಬಿಡಿಎ ಆಯುಕ್ತರ ಸರ್ವಾಧಿಕಾರಿ ಧೋರಣೆ ಆರೋಪ : ಎನ್‌ಪಿಕೆಎಲ್ ಓಪನ್ ಫೋರಂನಿಂದ ಪ್ರಾಧಿಕಾರದ ಸಭೆ ಬಹಿಷ್ಕಾರ

    “ಕದನ ವಿರಾಮ ಸಮಯದಲ್ಲಿ ಕಾಂಗ್ರೆಸ್‌ ನಾಯಕರು ಒಡಕು ಮಾತುಗಳನ್ನಾಡಬಾರದು”

    ಸಂಚಾರಿ ಕಾವೇರಿ : ಬಿಐಎಸ್ ಪ್ರಮಾಣಿತ ಶುದ್ಧ ಕುಡಿಯುವ ನೀರು ನಿಮ್ಮ ಮನೆ ಬಾಗಿಲಿಗೆ

    ಶ್ರೀನಗರದಿಂದ ಶೇರ್ - ಇ -ಕಾಶ್ಮೀರ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ಜನ ವಿದ್ಯಾರ್ಥಿಗಳು ರೈಲಿನಲ್ಲಿ ಸುರಕ್ಷಿತವಾಗಿ ನವದೆಹಲಿ ತಲುಪಿದ್ದಾರೆ.

    ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತವಾಗಿ ನವದೆಹಲಿಗೆ : ಸೋಮವಾರ ಸಂಜೆ ವೇಳೆಗೆ ಬೆಂಗಳೂರಿಗೆ ವಾಪಸ್

  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil
No Result
View All Result

Home Bengaluru Focus

Karnataka Budget | ಕರ್ನಾಟಕ ಬಜೆಟ್ 2025-26 : ಬೆಂಗಳೂರಿನ ನಗರದ ಮೂಲಸೌಲಭ್ಯಗಳ ಅಭಿವೃದ್ಧಿಗೆ 7,000 ಕೋಟಿ ರೂ.

ರಾಜಧಾನಿಗೆ ಸಿಕ್ಕಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

by Bengaluru Wire Desk
March 7, 2025
in Bengaluru Focus, Public interest
Reading Time: 2 mins read
0

ಬೆಂಗಳೂರು, ಮಾ.07 www.bengaluruwire.com : ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು (ಮಾ.07) ರಾಜ್ಯ ಬಜೆಟ್ (Karnataka Budget -2025) ಮಂಡನೆ ಮಾಡಿದ್ದಾರೆ. ಇದು ಸಿದ್ದರಾಮಯ್ಯ ಅವರ ದಾಖಲೆಯ 16ನೇ ಬಜೆಟ್ ಆಗಿದ್ದು, ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.

ಬೆಳಗ್ಗೆ 10.30 ರಾಹುಕಾಲ ಆರಂಭವಾಗುವುದರಿಂದ ಅದಕ್ಕೆ ಮೊದಲೇ ಅಂದರೆ 10.15ಕ್ಕೆ ತಮ್ಮ ಬಜೆಟ್ ಭಾಷಣ ಆರಂಭಿಸಿದರು. ಮಂಡಿನೋವಿನಿಂದ ಬಳಲುತ್ತಿರುವ ಅವರು, ಗಾಲಿಕುರ್ಚಿಯಲ್ಲಿ ಕುಳಿತೇ ಬಜೆಟ್ ಮಂಡಿಸಿದರು. 2025-26ನೇ ಸಾಲಿನ ರಾಜ್ಯ ಬಜೆಟ್​​ನ ಒಟ್ಟು ಗಾತ್ರ 4,09,549 ಕೋಟಿ ರೂ. ಎಂದು ತಿಳಿಸಿದರು. ಈ ಬಾರಿಯೂ ವಲಯವಾರು ವಿಂಗಡಣೆ ಮಾಡಿ ಮುಖ್ಯಮಂತ್ರಿ ಸಿದ್ಜರಾಮಯ್ಯ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ.

ಕಳೆದ ಬಾರಿ ಸಿದ್ದರಾಮಯ್ಯ ಅವರು 3.71 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಿದ್ದರು, ಆದರೆ ಈ ಬಾರಿ ಬಜೆಟ್ ಗಾತ್ರ  4.09 ಲಕ್ಷ ಕೋಟಿ ರೂಪಾಯಿ ಆಗಿದೆ. 2024-25ನೇ ಸಾಲಿನ ಬಜೆಟ್‌ ಗಾತ್ರವು 3.71 ಲಕ್ಷ ಕೋಟಿ ರೂಪಾಯಿಗಳಲ್ಲಿ ಶೇ. 62ರಷ್ಟು ಮಾತ್ರ ಗುರಿ ಸಾಧಿಸಲಾಗಿದೆ ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ಮಂಡಿಸುತ್ತಿರುವ ಬಜೆಟ್ ಭಾಷಣದ ಬಗ್ಗೆ ಕುತೂಹಲದಿಂದ ಆಲಿಸುತ್ತಿರುವ ಸದನದ ಚಿತ್ರ.

ಈ ಬಾರಿ ರಾಜಧಾನಿ ಬೆಂಗಳೂರಿಗೆ ಸಿಕ್ಕಿದ್ದೇನು? ಎಂಬ ಬಗ್ಗೆ ಹಣಕಾಸು ಸಚಿವರೂ ಆದ ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಹೇಳಿರುವ ಮುಖ್ಯಾಂಶಗಳಿವು :

1.     ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು ಡಾ|| ಮನಮೋಹನ್‌ ಸಿಂಗ್‌ ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗುವುದು. ಈ ವಿಶ್ವವಿದ್ಯಾಲಯವನ್ನು ದೇಶದಲ್ಲಿ ಮಾದರಿಯನ್ನಾಗಿಸುವ ಉದ್ದೇಶದಿಂದ, ಸರ್ಕಾರಿ ಕಲಾ ಕಾಲೇಜು ಹಾಗೂ ಸರ್ಕಾರಿ ಆರ್‌.ಸಿ. ಕಾಲೇಜುಗಳನ್ನು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು.

2.     93.50 ಕೋಟಿ ರೂ. ಮೊತ್ತದ ಬೆಂಗಳೂರು ಪೂರ್ವ ತಾಲ್ಲೂಕಿನ 18 ಕೆರೆ ತುಂಬಿಸುವ ಯೋಜನೆ.

3. ರಾಜ್ಯದ ಆರ್ಥಿಕತೆಗೆ ಬಹುಮುಖ್ಯ ಕೊಡುಗೆ ನೀಡುವ ಬೆಂಗಳೂರು ನಗರದ ಮೂಲಸೌಲಭ್ಯಗಳ ಅಭಿವೃದ್ಧಿಗೆ ನಮ್ಮ ಸರ್ಕಾರವು ಆದ್ಯತೆ ನೀಡುತ್ತದೆ. ಪ್ರತಿ ವರ್ಷ ನೀಡುತ್ತಿರುವ 3,000 ಕೋಟಿ ರೂ. ಅನುದಾನವನ್ನು ಪ್ರಸಕ್ತ ವರ್ಷದಲ್ಲಿ 7,000 ಕೋಟಿ ರೂ. ಗೆ ಹೆಚ್ಚಿಸಲಾಗುವುದು. ಈ ಅನುದಾನವನ್ನು ಬಳಸಿ ಬೃಹತ್‌ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಅನುಷ್ಠಾನಗೊಳಿಸಲು ಹೊಸದಾಗಿ ವಿಶೇಷ ಉದ್ದೇಶಿತ ಸಂಸ್ಥೆ (Special Purpose Vehicle) ಸ್ಥಾಪಿಸಲಾಗುವುದು.

4. ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಕೈಗೊಂಡಿರುವ ವಿವಿಧ ಸುಧಾರಣಾ ಕ್ರಮಗಳಿಂದ ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ಗಣನೀಯ ಹೆಚ್ಚಳ ಸಾಧಿಸಲಾಗಿದೆ. ತಂತ್ರಜ್ಞಾನ ಬಳಸಿ ಆನ್‌ಲೈನ್‌ ಮೂಲಕ ಇ-ಖಾತಾ ವ್ಯವಸ್ಥೆಯನ್ನು ಅಳವಡಿಸಿರುವುದರಿಂದ ರಾಜಸ್ವ ಶೇಖರಣೆಯನ್ನು ಹೆಚ್ಚು ಮಾಡುವುದರೊಂದಿಗೆ ನಾಗರೀಕ ಸೇವೆಗಳನ್ನು ಸರಳವಾಗಿ ನೀಡಲು ಸಾಧ್ಯವಾಗಿದೆ. ಅಲ್ಲದೇ ಪಾಲಿಕೆಯ ಸ್ವಂತ ಆಸ್ತಿಗಳ ಉತ್ತಮ ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಸಹಕಾರಿಯಾಗುವಂತೆ ಬಿಬಿಎಂಪಿ (ಎಸ್ಟೇಟ್) ನಿಯಮಗಳು 2024 ಅನ್ನು ಅಧಿಸೂಚಿಸಲಾಗಿದೆ. ಈ ಎಲ್ಲಾ ಸುಧಾರಣಾ ಕ್ರಮಗಳಿಂದ 2024-25ನೇ ಸಾಲಿನಲ್ಲಿ ಈವರೆಗೂ 4,556 ಕೋಟಿ ರೂ. ಸಂಗ್ರಹಣೆ ಮಾಡಲಾಗಿದೆ. ಇದರೊಂದಿಗೆ, ಪಾಲಿಕೆಯ ಜಾಹೀರಾತು ಉಪ-ವಿಧಿಗಳು 2025 ರ ಅನುಷ್ಠಾನದಿಂದ ವರ್ಷಕ್ಕೆ 750 ಕೋಟಿ ರೂ. ಆದಾಯವನ್ನು ಅಂದಾಜಿಸಲಾಗಿದೆ.

5. ಬಿಬಿಎಂಪಿಗೆ ಅಂದಾಜು ಮೊತ್ತ 40,000 ಕೋಟಿ ರೂ. ವೆಚ್ಚದಲ್ಲಿ ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಸುರಂಗ ಮಾರ್ಗದ ಕಾರಿಡಾರ್‌ಗಳನ್ನು (Tunnel) ಕೈಗೊಳ್ಳಲು ಅನುಕೂಲವಾಗುವಂತೆ 19,000 ಕೋಟಿ ರೂ. ಗ್ಯಾರಂಟಿಯನ್ನು ಸರ್ಕಾರದಿಂದ ಒದಗಿಸಲಾಗಿದೆ.

6.     ವಾಹನ ದಟ್ಟಣೆ ಸಮಸ್ಯೆಯನ್ನು ನಿವಾರಿಸಲು ಹಾಗೂ ಸುಗಮ ಸಂಚಾರಕ್ಕಾಗಿ ಬೆಂಗಳೂರು ನಗರದ ಮುಖ್ಯ ರಸ್ತೆಗಳನ್ನು ಸಿಗ್ನಲ್‌ ಮುಕ್ತಗೊಳಿಸುವ (signal-free) ನಿಟ್ಟಿನಲ್ಲಿ ಈ ಕೆಳಕಂಡ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.

i)           ನಮ್ಮ ಮೆಟ್ರೋ ಹಂತ-3 ಯೋಜನೆಯೊಂದಿಗೆ 8,916 ಕೋಟಿ ರೂ. ವೆಚ್ಚದಲ್ಲಿ 4೦.50 ಕಿ.ಮೀ. ಉದ್ದದ Double Decker Flyover ರಸ್ತೆಯನ್ನು ನಿರ್ಮಿಸಲಾಗುವುದು.

ii)         ಕಾಲುವೆಯ ಬಫರ್‌ ಪ್ರದೇಶವನ್ನು ಬಳಸಿಕೊಂಡು 3,000 ಕೋಟಿ ರೂ. ವೆಚ್ಚದಲ್ಲಿ 300 ಕಿ.ಮೀ. ಹೆಚ್ಚುವರಿ ರಸ್ತೆ ಜಾಲವನ್ನು ಅಭಿವೃದ್ಧಿಪಡಿಸಲಾಗುವುದು.

iii)      ಬಿಬಿಎಂಪಿ ವ್ಯಾಪ್ತಿಯಲ್ಲಿರುವ 460 ಕಿ.ಮೀ. ಆರ್ಟಿರಿಯಲ್‌ ಮತ್ತು ಸಬ್‌ ಆರ್ಟಿರಿಯಲ್‌ ರಸ್ತೆ ಜಾಲವನ್ನು 660 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

iv)       ನಗರದಲ್ಲಿ 120 ಕಿ.ಮೀ. ಉದ್ದದ Flyover ಹಾಗೂ Grade Separator ಗಳನ್ನು ನಿರ್ಮಿಸಲಾಗುವುದು.

7. ʻಬ್ರ್ಯಾಂಡ್ ಬೆಂಗಳೂರುʼ ಯೋಜನೆಯಡಿ 2024-25ನೇ ಸಾಲಿನಲ್ಲಿ ಅನುಮೋದನೆಗೊಂಡ 21 ಯೋಜನೆಗಳನ್ನು 1,800 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.  

8. ಬೆಂಗಳೂರನ್ನು ಅಂತಾರಾಷ್ಟ್ರೀಯ ಆರೋಗ್ಯ ಮಾನದಂಡಗಳ ನಗರವನ್ನಾಗಿ ಮಾಡಲು, ʻಬ್ರ್ಯಾಂಡ್ ಬೆಂಗಳೂರುʼ ಅಭಿಯಾನದ ಅಡಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ 413 ಕೋಟಿ ರೂ.  ವೆಚ್ಚದಲ್ಲಿ ʻಸಮಗ್ರ ಆರೋಗ್ಯ ಯೋಜನೆʼಯನ್ನು ಜಾರಿಗೊಳಿಸಲಾಗುವುದು.

9. ಹವಾಮಾನ ವೈಪರೀತ್ಯದ ಪರಿಣಾಮವಾಗಿ ಬೆಂಗಳೂರು ನಗರವು ಎದುರಿಸುತ್ತಿರುವ ಪ್ರವಾಹವನ್ನು ನಿಯಂತ್ರಿಸಲು  ವ್ಯವಸ್ಥಿತ ಒಳಚರಂಡಿ ಜಾಲ ಮತ್ತು ಎಸ್.ಟಿ.ಪಿ ಗಳನ್ನು ನಿರ್ಮಿಸಲು ಸರ್ಕಾರವು BBMP ಹಾಗೂ BWSSB ಗೆ 3,000 ಕೋಟಿ ರೂ. ಆರ್ಥಿಕ ನೆರವು ನೀಡಲು ತೀರ್ಮಾನಿಸಲಾಗಿರುತ್ತದೆ.

10. 2024-25ನೇ ಸಾಲಿನಲ್ಲಿ 5,550 ಕೋಟಿ ರೂ. ಮೊತ್ತದಲ್ಲಿ 775 MLD ಹೆಚ್ಚುವರಿ ನೀರಿನ ಸಾಮರ್ಥ್ಯವನ್ನು ಹೊಂದಿರುವ ಕಾವೇರಿ 5ನೇ ಹಂತದ ಯೋಜನೆಯನ್ನು ಸಾರ್ವಜನಿಕರಿಗೆ ಲೋಕಾರ್ಪಣೆಗೊಳಿಸಲಾಗಿದೆ. ಇದರಿಂದ 110 ಹಳ್ಳಿಗಳಲ್ಲಿರುವ 50 ಲಕ್ಷ ನಿವಾಸಿಗಳಿಗೆ ಜೀವಜಲ ದೊರಕಿಸಲಾಗಿದೆ. 

11.     BWSSB ವತಿಯಿಂದ ಎಸ್‌.ಟಿ.ಪಿ ಘಟಕಗಳ ತ್ಯಾಜ್ಯವನ್ನು ಬಳಸಿ ಬಯೋಗ್ಯಾಸ್-ಆಧಾರಿತ ಆದಾಯ ಮತ್ತು ಕಾರ್ಬನ್ ಕ್ರೆಡಿಟ್‌ಗಳ ಉಪಯೋಗವನ್ನು ಪಡೆಯುವ ನಿಟ್ಟಿನಲ್ಲಿ PPP ಮಾದರಿಯಲ್ಲಿ ಯೋಜನೆಯನ್ನು ರೂಪಿಸಲಾಗುವುದು.

12.  ನೆನೆಗುದಿಗೆ ಬಿದ್ದಿದ್ದ Peripheral Ring Road ಯೋಜನೆಯನ್ನು ಬೆಂಗಳೂರು ಬಿಸ್‌ನೆಸ್‌ ಕಾರಿಡಾರ್‌ ಎಂದು ಮರುನಾಮಕರಣಗೊಳಿಸಿ 73 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಿಸಲು ಹುಡ್ಕೋ ಬ್ಯಾಂಕ್‌ ನೆರವಿನೊಂದಿಗೆ 27,000 ಕೋಟಿ ರೂ. ಯೋಜನೆಯನ್ನು ರೂಪಿಸಲಾಗಿದೆ. ಪ್ರತ್ಯೇಕ ತಂಡಗಳನ್ನು ರಚಿಸಿ ಭೂಸ್ವಾದೀನ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

13.  ʻನಮ್ಮ ಮೆಟ್ರೋʼ ಪ್ರತಿದಿನ ಸರಾಸರಿ 8.5 ಲಕ್ಷ ಪ್ರಯಾಣಿಕರಿಗೆ ಸೇವೆಯನ್ನು ಒದಗಿಸುತ್ತಿದ್ದು, ಪ್ರಸ್ತುತ 68 ನಿಲ್ದಾಣಗಳನ್ನೊಳಗೊಂಡಂತೆ 79.65 ಕಿ.ಮೀ. ಮಾರ್ಗದ ಕಾರ್ಯಾಚರಣೆ ನಡೆಸುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಒಟ್ಟಾರೆ 98.60 ಕಿ.ಮೀ ಹೆಚ್ಚುವರಿ ಮಾರ್ಗಗಳ ಕಾರ್ಯಾಚರಣೆ ಜಾಲವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ. ಮೆಟ್ರೋ ಜಾಲವನ್ನು ದೇವನಹಳ್ಳಿಯವರೆಗೆ ವಿಸ್ತರಿಸಲು ಯೋಜಿಸಲಾಗಿದೆ.

14.  ಕಾವೇರಿ ಹಂತ-6 ಅನುಷ್ಠಾನಕ್ಕಾಗಿ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲಾಗುವುದು.

15.  ಬಿಬಿಎಂಪಿ ವತಿಯಿಂದ ʻಬ್ರ್ಯಾಂಡ್‌ ಬೆಂಗಳೂರು – ಹಸಿರು ಬೆಂಗಳೂರುʼ ಅಡಿಯಲ್ಲಿ 35 ಕೋಟಿ ರೂ. ವೆಚ್ಚದ 16. ಕೆರೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವರ್ತೂರು ಮತ್ತು ಬೆಳ್ಳಂದೂರು ಕೆರೆಗಳ ಪುನರುಜ್ಜೀವನ ಕಾಮಗಾರಿಗಳನ್ನು 234 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ.

17.     ಬೈಯ್ಯಪ್ಪನಹಳ್ಳಿ-ಹೊಸೂರು ಹಾಗೂ ಯಶವಂತಪುರ-ಚನ್ನಸಂದ್ರ ದ್ವಿಪಥೀಕರಣ ಯೋಜನೆಗಳಡಿಯಲ್ಲಿ 70 ಕಿ.ಮೀ ರೈಲ್ವೆ ಲೈನ್‌ಗಳನ್ನು ದ್ವಿಪಥೀಕರಣಗೊಳಿಸಲು ಒಟ್ಟಾರೆ 812 ಕೋಟಿ ರೂ. ಅಂದಾಜಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ವತಿಯಿಂದ 406 ಕೋಟಿ ರೂ. ಒದಗಿಸಲಾಗುತ್ತಿದೆ. ಸದರಿ ಎರಡು ಯೋಜನೆಗಳನ್ನು ಪ್ರಸಕ್ತ ಸಾಲಿನಲ್ಲಿ ಸಾರ್ವಜನಿಕ ಸೇವೆಗೆ ಲೋಕಾರ್ಪಣೆ ಮಾಡಲಾಗುವುದು.

18.     ಬೆಂಗಳೂರು ಉಪನಗರ ರೈಲ್ವೇ ಯೋಜನೆಯನ್ನು 15,767 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯು 58 ರೈಲ್ವೇ ನಿಲ್ದಾಣಗಳು ಹಾಗೂ 148 ಕಿ.ಮೀ ಉದ್ದದ ರೈಲ್ವೇ ಜಾಲವನ್ನು ಹೊಂದಿರುತ್ತದೆ. ನಾಲ್ಕು ಕಾರಿಡಾರ್‌ಗಳನ್ನೊಳಗೊಂಡ ಈ ಯೋಜನೆಯ ಎರಡು ಕಾರಿಡಾರ್‌ಗಳ ಕಾಮಗಾರಿಗಳು ಪ್ರಗತಿಯಲ್ಲಿದೆ. ಇನ್ನುಳಿದ ಎರಡು ಕಾರಿಡಾರ್‌ಗಳ ಟೆಂಡರ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಯೋಜನೆಯನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲಾಗುವುದು.

19.  E.V. ವಾಹನಗಳ ತಯಾರಿಕೆ ಹಾಗೂ ಬಳಕೆಗೆ ಉತ್ತೇಜನ ನೀಡಲು ಬೆಂಗಳೂರು ವಲಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ E.V ಕ್ಲಸ್ಟರ್‌ನ್ನು ನಿರ್ಮಿಸಲಾಗುವುದು. ಈ ಉದ್ದೇಶಕ್ಕಾಗಿ 25 ಕೋಟಿ ರೂ. ಅನುದಾನವನ್ನು ಒದಗಿಸಿದೆ.

20.  ಬೆಂಕಿ ಅನಾಹುತದಲ್ಲಿ ತೀವ್ರ ಹಾನಿ ಸಂಭವಿಸಿದ ಬೆಂಗಳೂರು ಬಯೋ-ಇನ್ನೋವೇಷನ್ ಸೆಂಟರ್‌ನ ಪುನರ್‌ ನಿರ್ಮಾಣಕ್ಕೆ ಒಟ್ಟು 57 ಕೋಟಿ ರೂ. ನೆರವು ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 20 ಕೋಟಿ ರೂ. ಅನುದಾನ ಒದಗಿಸಿದೆ.

21. ಬೆಂಗಳೂರು ನಗರದಲ್ಲಿರುವ 3,000 ಕೊಳಚೆ ನೀರು ಸಂಸ್ಕರಣಾ ಘಟಕಗಳ (STP) ಕಾರ್ಯಾಚರಣೆಯ ಮೇಲುಸ್ತುವಾರಿಯನ್ನು ತಂತ್ರಾಂಶದ ಮೂಲಕ ನಿರ್ವಹಿಸಿ ಸಾರ್ವಜನಿಕರಿಗೆ ದೈನಂದಿನ ಮಾಹಿತಿ ಲಭ್ಯಪಡಿಸಲಾಗುವುದು.

22.  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 2,000 ಕೋಟಿ ರೂ. ವೆಚ್ಚದಲ್ಲಿ ಪ್ರವಾಹ ನಿರ್ವಹಣಾ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು.

23.    ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ 1,070 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಹಾಗೂ ಒಳಚರಂಡಿ ಪಂಪಿಂಗ್ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು.

24.  ಬೆಂಗಳೂರು ನಗರದಲ್ಲಿ 239 ಕೋಟಿ ರೂ. ವೆಚ್ಚದಲ್ಲಿ ಮಳೆ ನೀರು ಚರಂಡಿಗಳ ಪುನರ್ ನಿರ್ಮಾಣ ಮತ್ತು ಕೆರೆಗಳ ಪುನಃಶ್ಚೇತನಗೊಳಿಸುವುದು.

25.  ಬೆಂಗಳೂರು ನಗರದ ಪರಿಣಾಮಕಾರಿ ಪೊಲೀಸ್ ವ್ಯವಸ್ಥೆಗಾಗಿ ಈಗಿರುವ ಎಂಟು ಪೊಲೀಸ್ ವಿಭಾಗಗಳನ್ನು 11 ಕ್ಕೆ ಹೆಚ್ಚಿಸಲಾಗುವುದು.

26.  ಬೆಂಗಳೂರು ಕೇಂದ್ರ ವಲಯಗಳಲ್ಲಿ ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳಗಳನ್ನು ಸ್ಥಾಪಿಸಲಾಗುವುದು.

27.  ಬೆಂಗಳೂರು ಮೆಜೆಸ್ಟಿಕ್‌ ಬಸ್ ನಿಲ್ದಾಣದ ಜಾಗವನ್ನು ʻಪ್ರಾಜೆಕ್ಟ್‌ ಮೆಜೆಸ್ಟಿಕ್‌ʼ ಯೋಜನೆಯಡಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಪುನರ್ ಅಭಿವೃದ್ಧಿಪಡಿಸಿ, ವಾಣಿಜ್ಯ ಸಂಕೀರ್ಣದೊಂದಿಗೆ ಸಾರಿಗೆ ಹಬ್ ನಿರ್ಮಿಸಲು ಉದ್ದೇಶಿಸಲಾಗಿದೆ.

28.  2025-26ನೇ ಸಾಲಿನಲ್ಲಿ ಸ್ವಚ್ಛ ಪರಿಸರದ ಹಿತದೃಷ್ಟಿಯಿಂದ ವಿದ್ಯುತ್‌ ಚಾಲಿತ ಬಸ್ಸುಗಳನ್ನು ಸೇರ್ಪಡೆ ಮಾಡಲು ಆದ್ಯತೆ ನೀಡಲಾಗುತ್ತಿದ್ದು, PM E-DRIVE, PM-eBus Sewa ಮತ್ತು ಬಾಹ್ಯ ನೆರವಿನ ಯೋಜನೆಯಡಿ ಒಟ್ಟಾರೆ 14,750 ಹೊಸ ವಿದ್ಯುತ್‌ ಚಾಲಿತ ಬಸ್ಸುಗಳನ್ನು ಸೇರ್ಪಡೆ ಮಾಡುವ ಗುರಿ ಹೊಂದಿದ್ದು, ಇದರಲ್ಲಿ 9,000 ಬಸ್ಸುಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸೇರ್ಪಡೆ ಮಾಡಲು ಉದ್ದೇಶಿಸಲಾಗಿದೆ.

29.  ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಹಾಗೂ ಸಾರಿಗೆ ನಿಗಮಗಳಲ್ಲಿನ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಸಕ್ತ ವರ್ಷ ಬೆಂಗಳೂರು ಪೂರ್ವ ಭಾಗದ ಕೆ.ಆರ್.ಪುರಂ ನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಆಧಾರದಲ್ಲಿ ಹೊಸ ಸ್ಯಾಟಲೈಟ್‌ ಬಸ್‌ ನಿಲ್ದಾಣವನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

Sharing is Caring

  • Click to share on Follow Us on Google News (Opens in new window) Follow Us on Google News
  • Click to share on WhatsApp (Opens in new window) WhatsApp
  • Click to print (Opens in new window) Print
  • Click to share on X (Opens in new window) X
  • Click to share on Facebook (Opens in new window) Facebook
  • Click to share on Telegram (Opens in new window) Telegram

Like this:

Like Loading...

Previous Post

SSLC Exam News | ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾ.10ರಿಂದ ಸಹಾಯವಾಣಿ ಆರಂಭ

Next Post

ಬೆಂಗಳೂರು ನಗರ ಜಿಲ್ಲೆಯಲ್ಲಿ 60 ಕೋಟಿ ರೂ. ಮೌಲ್ಯದ 10.29 ಎಕರೆ ಸರ್ಕಾರಿ ಭೂ ಒತ್ತುವರಿ ತೆರವು ಮಾಡಿದ ಜಿಲ್ಲಾಡಳಿತ

Next Post

ಬೆಂಗಳೂರು ನಗರ ಜಿಲ್ಲೆಯಲ್ಲಿ 60 ಕೋಟಿ ರೂ. ಮೌಲ್ಯದ 10.29 ಎಕರೆ ಸರ್ಕಾರಿ ಭೂ ಒತ್ತುವರಿ ತೆರವು ಮಾಡಿದ ಜಿಲ್ಲಾಡಳಿತ

Glaucoma | ಗ್ಲುಕೋಮಾ ಎಂಬ "ಸದ್ದಿಲ್ಲದ ದೃಷ್ಟಿಚೋರ" : ಕುರುಡುತನಕ್ಕೆ ಕಾರಣವಾಗಬಹುದು ಈ ಅಂಶಗಳು ಎಚ್ಚರ!! 

Please login to join discussion

Like Us on Facebook

Follow Us on Twitter

Recent News

Gruha Jyothi | ಮನೆ ಬದಲಾಯಿಸಿದವರಿಗೂ ಗೃಹಜ್ಯೋತಿ ಭಾಗ್ಯ! ಡಿ-ಲಿಂಕ್ ಪ್ರಕ್ರಿಯೆ ಇನ್ನಷ್ಟು ಸರಳ

May 16, 2025
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯೂ ಆಗಿರುವ ಡಿ.ಕೆ.ಶಿವಕುಮಾರ್ ತಮ್ಮ 63ನೇ ಹುಟ್ಟುಹಬ್ಬದ ಪ್ರಯುಕ್ತ ಕುಟುಂಬದೊಂದಿಗೆ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಕಾಲಕಳೆದರು.

ಡಿಸಿಎಂ ಡಿ.ಕೆ.ಶಿವಕುಮಾರ್ 63ನೇ ಹುಟ್ಟುಹಬ್ಬ : ಕಬಿನಿ ವನ್ಯ ಪರಿಸರದಲ್ಲಿ ವಿಹಾರ ; ಸಿಂಹ ದತ್ತು ಪಡೆದ ಯುವ ಕಾಂಗ್ರೆಸ್

May 15, 2025
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Gruha Jyothi | ಮನೆ ಬದಲಾಯಿಸಿದವರಿಗೂ ಗೃಹಜ್ಯೋತಿ ಭಾಗ್ಯ! ಡಿ-ಲಿಂಕ್ ಪ್ರಕ್ರಿಯೆ ಇನ್ನಷ್ಟು ಸರಳ

May 16, 2025
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯೂ ಆಗಿರುವ ಡಿ.ಕೆ.ಶಿವಕುಮಾರ್ ತಮ್ಮ 63ನೇ ಹುಟ್ಟುಹಬ್ಬದ ಪ್ರಯುಕ್ತ ಕುಟುಂಬದೊಂದಿಗೆ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಕಾಲಕಳೆದರು.

ಡಿಸಿಎಂ ಡಿ.ಕೆ.ಶಿವಕುಮಾರ್ 63ನೇ ಹುಟ್ಟುಹಬ್ಬ : ಕಬಿನಿ ವನ್ಯ ಪರಿಸರದಲ್ಲಿ ವಿಹಾರ ; ಸಿಂಹ ದತ್ತು ಪಡೆದ ಯುವ ಕಾಂಗ್ರೆಸ್

May 15, 2025
ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

ಇಂದಿನಿಂದ ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ : ಜಿಬಿಎ ರಚನೆ ಬಗ್ಗೆ ಕಾಂಗ್ರೆಸ್- ಬಿಜೆಪಿ ಪರ ವಿರೋಧ

May 15, 2025
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video
  • Change language
    • Kannada
    • English
    • Telugu
    • Hindi
    • Malayalam
    • Tamil

© 2023 All Rights Reserved ಬೆಂಗಳೂರು ವೈರ್‌

Join the Group
%d