ಬೆಂಗಳೂರು, ಮಾ.06 www.bengaluruwire.com : ʼಆಧುನಿಕ ಯುಗದ ಯುವ ಜನರಲ್ಲಿಯೂ ಜನಪದ ಕಲೆ, ಸಾಹಿತ್ಯ ಜೀವಂತವಾಗಿದ್ದು ಅದನ್ನು ಗುರುತಿಸುವ ಕೆಲಸ ಆಗಬೇಕುʼ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಮಂಜುಶ್ರೀ ಅವರು ಆಭಿಪ್ರಾಯಪಟ್ಟರು.
ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಜಾನಪದ ಉತ್ಸವ 2025 ‘ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ’ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದ ಅವರು, ʼವಿದ್ಯಾರ್ಥಿಗಳು ಜೀವನದಲ್ಲಿ ಜನಪದ ಕಲೆ-ಸಾಹಿತ್ಯದ ಚಟುಟವಿಕೆಯಲ್ಲಿ ತೊಡಗಿಕೊಂಡರೆ ಜೀವನದಲ್ಲಿ ಸಹನೆ, ಸೌಹರ್ದತೆ ಮತ್ತು ಸಮರಸ್ಯದೊಂದಿಗೆ ಸಹಜೀವನ ನಡೆಸಬಹುದುʼ ಎಂದು ತಿಳಿಸಿದರು.
ಹಾಡು, ಕುಣಿತ ಜೊತೆಗೆ ಒಗಟ್ಟುಗಳು ಸಹ ಜನಪದದ ಒಂದು ಭಾಗವಾಗಿವೆ. ಇಂದಿನ ಯುವ ಜನತೆ ಭವಿಷ್ಯದ ಸಂಸ್ಕೃತಿ ಸಂವಾಹಕರು. ಇಂತಹ ಉತ್ಸವಗಳ ಮೂಲಕ ಯುವಕರಲ್ಲಿರರುವ ಪತ್ರಿಭೆಯನ್ನು ಹೊರ ತೆಗೆಯಬಹುದು. ಉನ್ನತ ಶಿಕ್ಷಣ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ. ಸಾಂಸ್ಕೃತಿಕ ಚಟುವಟಿಕೆಯ ಪರಂಪರೆಯನ್ನು ಉಳಿಸಿ ಬೆಳಸಲು ವೇದಿಕೆಯಾಗಬೇಕು ಎಂದರು.
ವಿದ್ಯಾರ್ಥಿಗಳು ಡೊಳ್ಳುಕುಣಿತ, ಪೂಜಾ ಕುಣಿತ, ಜನಪದ ಕಲೆ ಪ್ರಕಾರದ ನೃತ್ಯ, ಹಾಡುಗಳನ್ನು ಹಾಡಿ ಕುಣಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಡಾ. ಜೀವನಸಾಬ್ ವಾಲಿಕಾರ್ ನಾಡೋಜ ಡಾ. ಕಮಲಾ ಹಂಪನಾ ಕನ್ನಡ ಸಂಘಟದ ಸಂಚಾಲಕರಾದ ಡಾ. ದೇವಿಕ ಎಸ್., ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಸ್ಮೀತಾ ಭಾವಿಕಟ್ಟೆ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮಂಜುಳ, ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ವಿಶ್ವನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.