ಬೆಂಗಳೂರು, ಮಾ.05 www.bengaluruwire.com : ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC – ಕೆ ಎಸ್ ಆರ್ ಟಿ ಸಿ) ಪ್ರಯಾಣಿಕ ಕಾರ್ಮಿಕ ಸ್ನೇಹಿ ಹಾಗೂ ಪ್ರಯಾಣಿಕ ಸ್ನೇಹಿ ಉಪಕ್ರಮಗಳು ಹಾಗೂ ಸಾರಿಗೆಯೇತರ ಆದಾಯದ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಸಾರಿಗೆ ನಿಗಮಕ್ಕೆ ಬುಧವಾರ ಭೇಟಿ ನೀಡಿದ್ದರು.
ಕೆ ಎಸ್ ಆರ್ ಟಿ ಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರಿಂದ ಐ.ಒ.ಎಫ್.ಎಸ್. ಅಧ್ಯಕ್ಷರಾದ ಪಿ.ಎಸ್.ಪ್ರಮೋಜ್ ಸಂಕರ್ ಹಾಗೂ ವ್ಯವಸ್ಥಾಪಕ ನಿರ್ದೇಶಕರು ವಿವರವಾಗಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ನಿಗಮದ, ಘಟಕ, ಕಾರ್ಯಾಗಾರ ಹಾಗೂ ಕೇಂದ್ರ ಕಛೇರಿಗೆ ಭೇಟಿ ನೀಡಿದರು. ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ಕ್ಕೆ ಭೇಟಿ ನೀಡಿದ ತಂಡವು ವಿವಿಧ ಮಾದರಿಯ ಬಸ್ ಬ್ರಾಂಡಿಂಗ್ ಮತ್ತು ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು.

ಬಸ್ಸುಗಳ ಕಾರ್ಯ ನಿರ್ವಹಣೆ, ಪುನಶ್ಚೇತನ ಕಾರ್ಯ, ರೂ.1 ಕೋಟಿ ವಿಮಾ ಯೋಜನೆ (On duty / Off duty accident insurance), ಕೆ ಎಸ್ ಆರ್ ಟಿ ಸಿ ಆರೋಗ್ಯ (KSRTC AROGYA) ಯೋಜನೆ, ವಿದ್ಯಾ ಚೇತನ ಯೋಜನೆ, ಮಾಹಿತಿ ತಂತ್ರಜ್ಞಾನ ಉಪಕ್ರಮಗಳಾದ ಎಚ್ ಆರ್ ಎಂಎಸ್ (HRMS), ಆನ್ ಲೈನ್ ಜಿಯೋ ಟ್ಯಾಗ್ ಹಾಜರಾತಿ, ಬ್ಯುಸಿನೆಸ್ ಇಂಟೆಲಿಜೆಂಟ್ ಡ್ಯಾಷ್ ಬೋರ್ಡ್ (Business Intelligent Dashboard), ಅವತಾರ್ 4.0 (AWATAR 4.0), ಯುಪಿಐ (UPI) ಉಪಕ್ರಮಗಳ ಕುರಿತು ನಿಗಮದ ಕಾರ್ಯವೈಖರಿಯು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಯೋಗದ ಹುಬ್ಬೇರುವಂತೆ ಮಾಡಿತು.
ಈ ಸಂದರ್ಭದಲ್ಲಿ ಕೆ ಎಸ್ ಆರ್ ಟಿ ಸಿ ಹಾಗೂ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.