Saturday, March 7, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಸಾಂದರ್ಭಿಕ ಚಿತ್ರ

    LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

  • Bengaluru Focus

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಡೈರಿ ವೃತ್ತದಿಂದ ನಾಗವಾರ ಫೇಸ್-2 ಸುರಂಗಮಾರ್ಗ ಸಿವಿಲ್ ಕಾಮಗಾರಿ ಬಹುತೇಕ ಪೂರ್ಣ : ಟನಲ್ ನಿರ್ಮಾಣಕ್ಕೆ 15000 ಸಲ ಬ್ಲಾಸ್ಟಿಂಗ್!!

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ | ಈ ವರ್ಷಾಂತ್ಯ ಅಥವಾ 2026ರ ಆರಂಭದಲ್ಲಿ ಪಿಂಕ್ ಮಾರ್ಗ ಸಾರ್ವಜನಿಕರ ಸೇವೆಗೆ ಲಭ್ಯ

by Bengaluru Wire Desk
February 17, 2025
in Bengaluru Focus, Public interest
Reading Time: 1 min read
0

ಬೆಂಗಳೂರು, ಫೆ.17 www.bengaluruwire.com : ನಮ್ಮ ಮೆಟ್ರೋ ಬೆಲೆ ಏರಿಕೆಗೆ ಸಾರ್ವಜನಿಕ ತೀವ್ರ ವಿರೋಧದ ನಡುವೆ ಮಾಧ್ಯಮದವರ ಪ್ರಶ್ನೆಗಳ ಸುರಿಮಳೆ ತಪ್ಪಿಸಿಕೊಳ್ಳಲು ಹಾಗೂ ನಗರದ ಜನತೆಗೆ ಫೇಸ್-2 ಪಿಂಕ್ ಮಾರ್ಗದಲ್ಲಿನ ಸಿವಿಎಲ್ ಕಾಮಗಾರಿ ಮುಗಿದ ಸುರಂಗ ಮಾರ್ಗದ ಕಾಮಗಾರಿ ಸ್ಥಳಕ್ಕೆ ಬಿಎಂಆರ್ ಸಿಎಲ್ ಉನ್ನತ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಇಂದು ಮೆಟ್ರೋ ಎಂಜಿನಿಯರ್ ಗಳು ಮಾಧ್ಯಮದವರನ್ನು ಕರೆದೊಯ್ದರು.

ನಮ್ಮ ಮೆಟ್ರೋ ಅಧಿಕಾರಿಗಳ ಪ್ರಕಾರ ಫೇಸ್-2 ನಲ್ಲಿನ ಪಿಂಕ್ ಮಾರ್ಗ ಈ ವರ್ಷದ ಡಿಸಿಂಬರ್ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಫೇಸ್-1 ನಲ್ಲಿ ಮೆಜಿಸ್ಟಿಕ್ ನಲ್ಲಿ ಇಂಟರ್ ಚೇಂಜ್ ನಿಲ್ದಾಣವಾಗಿದ್ದರೆ, ಫೇಸ್-2 ನಲ್ಲಿ ಎಂ.ಜಿ.ರಸ್ತೆ ಮೆಟ್ರೋ ಸ್ಟೇಷನ್ ನಲ್ಲಿ ಎಲಿವೇಟೆಡ್ ನೇರಳೆ ಮಾರ್ಗ ಹಾಗೂ ಪಿಂಕ್ ಸುರಂಗ ಮಾರ್ಗದ ನಿಲ್ದಾಣಗಳ ಇಂಟರ್ ಚೇಂಜ್ ಸ್ಟೇಷನ್ ತಲೆ ಎತ್ತಿದೆ. ಈ 13.89 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಅಡ್ಡಲಾಗಿದ್ದ ನೂರಾರು ಟನ್ ಗಟ್ಟಿಬಂಡೆಗಳನ್ನು ಒಡೆಯಲು 15,000ಕ್ಕೂ ಅಧಿಕ ಸ್ಪೋಟಕಗಳನ್ನು ಮಾಡಲಾಗಿತ್ತು ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ಟಿಲು ನಿರ್ಮಾಣ.

ಎಂ.ಜಿ.ರಸ್ತೆಯಲ್ಲಿ ಪಿಂಕ್ ಸುರಂಗ ಮಾರ್ಗದ ನಿಲ್ದಾಣದಲ್ಲಿ ಎಲಿವೇಟರ್,  ರೈಲ್ವೇ ಹಳಿ ಜೋಡಣೆ ಕಾರ್ಯ, ವಿದ್ಯುತ್ ಸಂಪರ್ಕ, ಎಲಿವೇಟರ್, ಎಸಿ ಡಕ್ಟ್, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆ ಸೇರಿದಂತೆ ಸಕಲ‌ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯ ಭರದಿಂದ ಸಾಗಿದೆ.

ಎಂಜಿ ರಸ್ತೆ ಸುರಂಗ ಮಾರ್ಗದ ನೂತನ ಸ್ಟೇಷನ್ ನಲ್ಲಿ ಎಲಿವೇಟರ್ ಹಾಕುವ ಕಾರ್ಯ ನಡೆಯುತ್ತಿದೆ.

ಕಾಳೇನ ಅಗ್ರಹಾರ (ಹಿಂದಿನ ಹೆಸರು ಗೊಟ್ಟಗೆರೆ)ಯಿಂದ ನಾಗವಾರದ ತನಕದ ಪಿಂಕ್ ಎತ್ತರಿಸಿದ ರೈಲು ಮಾರ್ಗ, ಒಟ್ಟು 18 ಸ್ಟೇಷನ್, ಸುರಂಗ ಮಾರ್ಗ ಸೇರಿದಂತೆ ಒಟ್ಟಾರೆ 21.25 ಕಿ.ಮೀ ಮಾರ್ಗದ ನಿರ್ಮಾಣಕ್ಕೆ ಅಂದಾಜು 12 ಸಾವಿರ ಕೋಟಿ ವೆಚ್ಚವಾಗಲಿದೆ. ಆ ಪೈಕಿ ಡೈರಿ ವೃತ್ತದಿಂದ ನಾಗವಾರ ತನಕದ 13.89 ಕಿ.ಮೀ ರೈಲು ಸುರಂಗ ಮಾರ್ಗಕ್ಕೆ ಅಂದಾಜು ವೆಚ್ಚ ಒಟ್ಟು 5000 ಕೋಟಿ ರೂ.ಗಳಾಗಿದೆ. ಇಲ್ಲಿ ಶೇ.90 ಕ್ಕೂ ಹೆಚ್ಚು ಸಿವಿಎಲ್ ಕಾಮಗಾರಿ ಪೂರ್ಣಗೊಂಡಿದೆ.

ಪಿಂಕ್ ಲೈನ್ ನಲ್ಲಿ ಮೆಟ್ರೋ ರೈಲು ಹೋಗಿ ಬರುವ ಎರಡು ಸುರಂಗ ಮಾರ್ಗದ ಒಟ್ಟು ಉದ್ದ 21 ಕಿ.ಮೀ ಆಗಿದ್ದು ಆ ಪೈಕಿ ಎರಡು ಬದಿಗಳಲ್ಲಿ 13.89 ಕಿ.ಮೀ ರೈಲ್ವೇ ಹಳಿ ಮಾರ್ಗವನ್ನು ನಮ್ಮ ಮೆಟ್ರೋ ಅಳವಡಿಸುತ್ತಿದೆ. ಈ ಸುರಂಗ ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳಿದ್ದು, 12 ನಿಲ್ದಾಣಗಳು ಭೂಮಟ್ಟದ ಸರಾಸರಿಯಾಗಿ 58-60 ಅಡಿ ಆಳದಲ್ಲಿ ಸ್ಥಾಪನೆಯಾಗಿದೆ.

ಮಾಧ್ಯಮದವರೊಂದಿಗೆ ಮೆಟ್ರೋ ಎಂಜಿನಿಯರ್ ಗಳು ಸುರಂಗ ಮಾರ್ಗದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.

“ಫೇಸ್-2ನಲ್ಲಿ 9 ಸುರಂಗ ಕೊರೆಯುವ ಯಂತ್ರ ಬಳಸಿ ಸುರಂಗ ಕೊರೆಯುವ ಕಾರ್ಯ 2020ರ ಇಸವಿಯಲ್ಲಿ ಆಗಸ್ಟ್ 22ರಂದು ಪ್ರಾರಂಭವಾಗಿ, 2024ರ ಅಕ್ಟೋಬರ್ 30ರಂದು ಪೂರ್ಣಗೊಂಡು ಆನಂತರ ಸಿವಿಎಲ್ ಕಾಮಗಾರಿ ನಡೆಯುತ್ತಿತ್ತು. ಇದೀಗ ಆ ಸಿವಿಎಲ್ ಕಾಮಗಾರಿಯೂ ಬಹುತೇಕ ಪೂರ್ಣಗೊಂಡಿದೆ” ಎಂದು  ನಮ್ಮ‌ ಮೆಟ್ರೋ ಫೇಸ್-2 ಸುರಂಗ ಮಾರ್ಗದ ಪ್ರಧಾನ ಎಂಜಿನಿಯರ್ ಸುಬ್ರಮಣ್ಯ ಗುಡಿಗೆ ಸುದ್ದಿಗಾರರಿಗೆ ಮಾತನಾಡುತ್ತಾ ಟನಲ್ ಕಾಮಗಾರಿ ಬಗ್ಗೆ ವಿವರಿಸಿದರು.

“ನಮ್ಮ ಮೆಟ್ರೋ ಎರಡನೇ ಹಂತದ ಸುರಂಗ ಮಾರ್ಗದ ಕಾಮಗಾರಿಯನ್ನು ಡೈರಿ ವೃತ್ತದಿಂದ ವೆಲ್ಲಾರ ಜಂಕ್ಷನ್, ಅಲ್ಲಿಂದ ಶಿವಾಜಿನಗರ, ನಂತರ ಶಿವಾಜಿನಗರದಿಂದ ಪಾಟರಿಟೌನ್ ತನಕ ಆಮೇಲೆ ಟ್ಯಾನರಿ ರೋಡ್ ನಿಂದ ನಾಗವಾರ ತನಕ ಒಟ್ಟು 4 ಪ್ಯಾಕೇಜ್ ಗಳಲ್ಲಿ ಟೆಂಡರ್ ಗುತ್ತಿಗೆ ನೀಡಲಾಗಿತ್ತು. ಆ ಪೈಕಿ ಶೇ.90ಕ್ಕೂ ಹೆಚ್ಚು ಸಿವಿಎಲ್ ಕಾಮಗಾರಿ ಪೂರ್ಣಗೊಂಡಿದೆ” ಎಂದು ಸುಬ್ರಮಣ್ಯ ಗುಡಿಗೆ ಹೇಳಿದರು.

ಗಟ್ಟಿ ಬಂಡೆಗಳನ್ನು ಒಡೆಯಲು ನಿಯಂತ್ರಿತ ಸ್ಪೋಟಕಗಳನ್ನು ಬಳಸುತ್ತಿರುವ ನಮ್ಮ ಮೆಟ್ರೋ (ಸಂಗ್ರಹ ಚಿತ್ರ).

“ಎಂ.ಜಿ.ರಸ್ತೆ ಈ ಮೆಟ್ರೋ ರೈಲ್ವೇ ಸ್ಟೇಷನ್ ನಲ್ಲಿ ಒಟ್ಟು ನಾಲ್ಕು ಪ್ರವೇಶ ಹಾಗೂ ನಿರ್ಗಮ ದ್ವಾರಗಳಿವೆ. ಟನಲ್ ಮಾರ್ಗದಲ್ಲಿ ಅಕಸ್ಮಾತ್ ರೈಲು ಕೆಟ್ಟಾಗ, ಇನ್ನಿತರ ಅವಘಡಗಳಾದಾಗ ಸುರಕ್ಷತೆಯ ದೃಷ್ಟಿಯಿಂದ ವಾಯು ಪೂರೈಕೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಫೇಸ್-1 ಟನಕಿಂಗ್ ಕಾಮಗಾರಿ ಸಾಕಷ್ಟು ಸವಾಲಿನಿಂದ ಕೂಡಿತ್ತು, ಮಣ್ಣಿಗಿಂತ ಗಟ್ಟಿ ಕಲ್ಲುಬಂಡೆಗಳೇ ಈ ಮಾರ್ಗದಲ್ಲಿ ಹೆಚ್ಚಾಗಿತ್ತು”.

“ಸರಿ ಸುಮಾರು 15,000 ಕ್ಕೂ ನಿಯಂತ್ರಿತ ಸ್ಪೋಟಕಗಳನ್ನು ನಡೆಸಿ 9 ಟಿಬಿಎಂಗಳ ಮೂಲಕ ದಿನಕ್ಕೆ ಸರಾಸರಿಯಾಗಿ 1200 ಕಾರ್ಮಿಕರನ್ನು ಬಳಸಿ ಈ ಪಿಂಕ್ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಮಾಡಲಾಗಿದೆ. ಈ ರೀತಿ ಅತಿಹೆಚ್ಚು ಗಟ್ಟಿ ಬಂಡೆಗಳು ಎದುರಾಗಿದ್ದರೂ ಧೃತಿಗೆಡದೆ ಸುರಕ್ಷಿತ ರೀತಿಯಲ್ಲಿ ಕಾಮಗಾರಿನ್ನು ಮಾಡಿ ಮುಗಿಸಿದ್ದೇವೆ. ಈ ಬಗ್ಗೆ ಹೆಮ್ಮೆಯಿದೆ. ಈ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಪಿಂಕ್ ಮಾರ್ಗ ಸಾರ್ವಜನಿಕ ಸೇವೆಗೆ ಲಭ್ಯವಾಗಬಹುದು”ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ನಮ್ಮ‌ ಮೆಟ್ರೋ ಫೇಸ್-2 ಸುರಂಗ ಮಾರ್ಗದ ಉಪ ಪ್ರಧಾನ ಎಂಜಿನಿಯರ್ ರಾಘವೇಂದ್ರ ಶಾನ್ ಭಾಗ್, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀನಿವಾಸ್ ರಾಜಗೋಪಾಲನ್ ಸೇರಿದಂತೆ ಇನ್ನಿತರ ಮೆಟ್ರೋ ಅಧಿಕಾರಿಗಳು ಉಪಸ್ಥಿತರಿದ್ದರು.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

ಡಿಸಿಎಂ ಡಿಕೆ ಶಿವಕುಮಾರ್ ಒಂದು ದಿನದ ವೈಟ್ ಟಾಪಿಂಗ್ ಕಾಮಗಾರಿಗಳ ಪರಿಶೀಲನೆ ಶಾಸ್ತ್ರ = ಮೌಲ್ಯ 1700 ಕೋಟಿ ರೂ.!!

Next Post

Linemen Recruitment | ಏಪ್ರಿಲ್‌ನೊಳಗೆ 3,000 ಲೈನ್‌ಮನ್‌ಗಳ ನೇಮಕ ಪ್ರಕ್ರಿಯೆ ಪೂರ್ಣ : ಸಚಿವ ಕೆ.ಜೆ.ಜಾರ್ಜ್‌

Next Post

Linemen Recruitment | ಏಪ್ರಿಲ್‌ನೊಳಗೆ 3,000 ಲೈನ್‌ಮನ್‌ಗಳ ನೇಮಕ ಪ್ರಕ್ರಿಯೆ ಪೂರ್ಣ : ಸಚಿವ ಕೆ.ಜೆ.ಜಾರ್ಜ್‌

E-Khata Campaign | ರಾಜ್ಯದಲ್ಲಿ ಇ-ಖಾತಾ ಅಭಿಯಾನಕ್ಕೆ ಸಿಎಂರಿಂದ ಚಾಲನೆ : ಅನಧಿಕೃತ ಸ್ವತ್ತು (ಬಿ-ಖಾತಾ)ಗಳಿಗೂ ಇ-ಖಾತಾ ಅವಕಾಶ

Please login to join discussion

Like Us on Facebook

Follow Us on Twitter

Recent News

ಸಾಂದರ್ಭಿಕ ಚಿತ್ರ

LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

March 7, 2026

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ಸಾಂದರ್ಭಿಕ ಚಿತ್ರ

LPG Gas Price Hike | ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ: ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

March 7, 2026

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026

Karnataka Budget 2026-27 | ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ: 4.48 ಲಕ್ಷ ಕೋಟಿ ಮೊತ್ತದ ‘ಸರ್ವೋದಯ’ ಆಯವ್ಯಯದ ಕಂಪು

March 6, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d