Friday, March 6, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

    #IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    KUWJ News | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಿ: ಸಿಎಂ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲ್ಯುಜೆ ಮನವಿ

    ಕೇಂದ್ರ-ರಾಜ್ಯ ಸಂಬಂಧಗಳ ಪುನರ್ ವಿಮರ್ಶೆ: ಎಂ.ಕೆ. ಸ್ಟಾಲಿನ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನಾ ಪತ್ರ

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

    #Iranwar | ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕನ್ನಡಿಗರ ರಕ್ಷಣೆಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

    #IranWar | ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ದುಬೈ ಹಾಗೂ ಬಹ್ರೇನ್ ನಲ್ಲಿ 109 ಕನ್ನಡಿಗರಿಗೆ ಸಂಕಷ್ಟ ; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ

    Video News | ದೇವರಿಗೆ ಕೈಮುಗಿದು ‘ಕೈಕೊಟ್ಟ’ ಕಳ್ಳರು: ದೇವಸ್ಥಾನದ ಹುಂಡಿ ಹೊತ್ತೊಯ್ದ ಖದೀಮರ ವಿಚಿತ್ರ ಭಕ್ತಿ

  • Bengaluru Focus

    ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

    ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಪೋರ್ಟಲ್‌ನಲ್ಲೇ ವಿದ್ಯುತ್ ಸಂಪರ್ಕದ ಮಾಹಿತಿ ಲಭ್ಯ

    ಪತ್ರಿಕೋದ್ಯಮದಲ್ಲಿ ಯಶಸ್ಸಿಗೆ ಅಧ್ಯಯನಶೀಲತೆ ಅತ್ಯಗತ್ಯ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕರೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    BESCOM News | ವಿದ್ಯುತ್ ಸಮಸ್ಯೆ ಇದೆಯೇ? ಇನ್ನು ಮುಂದೆ ಬೆಸ್ಕಾಂಗೆ ವಾಟ್ಸ್‌ಆಪ್ ಮೂಲಕ ಫೊಟೊ, ವಿಡಿಯೋ ಜೊತೆಯೂ  ದೂರು ನೀಡಬಹುದು

    #IranWarUpdates | ಯುದ್ಧಪೀಡಿತ ನಾಡಿನಿಂದ ತಾಯಿನಾಡಿಗೆ ಮರಳಿದ 703 ಕನ್ನಡಿಗರು: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾವನಾತ್ಮಕ ಕ್ಷಣಗಳು

    ವಾಹನ ತಪಾಸಣೆ ನಡೆಸದೆ ಫಿಟ್ನೆಸ್ ಸರ್ಟಿಫಿಕೇಟ್ ಹಂಚಿಕೆ ಹಗರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ನಮ್ಮ ಮೆಟ್ರೋ 3ನೇ ಹಂತ: ನಾಗರಭಾವಿಯಲ್ಲಿ ಪರಿಸರವಾದಿಗಳ ಮೌನ ಪ್ರತಿಭಟನೆ – 200 ವರ್ಷ ಹಳೆಯ ಪಾರಂಪರಿಕ ಮರ ಉಳಿಸಲು ಆಗ್ರಹ

    GBA News | ಬೆಂಗಳೂರಿನ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ರಾಜಕಾಲುವೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

    Passport Body-worn Cameras | ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ಕ್ಯಾಮೆರಾ ಕಡ್ಡಾಯ: ಭ್ರಷ್ಟಾಚಾರಕ್ಕೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ನಗರದ ಜಲಮೂಲಗಳ ಬಫರ್ ವಲಯ ಉಲ್ಲಂಘನೆಗೆ ಅವಕಾಶ : ಬಿಬಿಎಂಪಿ- ಬಿಡಿಎ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು

ಮಲ್ಲಸಂದ್ರ ಗ್ರಾಮದ ಕನಕಪುರ ರಸ್ತೆ ಮತ್ತು ನೈಸ್ ರಸ್ತೆಯ ಜಂಕ್ಷನ್ ಬಳಿ ಕಾಸಗ್ರಾಂಡ್ ಲೋಟಸ್ ಪ್ರೈವೇಟ್ ಲಿಮಿಟೆಡ್ ಗೆ ಕಾಲುವೆ ಬಫರ್ ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಲು ಅನುಮತಿ ನೀಡಿದ ಪ್ರಕರಣ.

by Bengaluru Wire Desk
February 13, 2025
in Bengaluru Focus
Reading Time: 1 min read
0
ಬೆಳ್ಳಂದೂರು ಕೆರೆಯ ಪಕ್ಷಿನೋಟ.

ಬೆಳ್ಳಂದೂರು ಕೆರೆಯ ಪಕ್ಷಿನೋಟ.

ಬೆಂಗಳೂರು, ಫೆ.13 www.bengaluruwire.com : ಇತ್ತೀಚಿಗೆ ಬಾಬುಸಾಪಾಳ್ಯದಲ್ಲಿ ಸಂಭವಿಸಿದ ಭೀಕರ ದುರಂತದ ಹಿನ್ನೆಲೆಯಲ್ಲಿ ಜನಾಧಿಕಾರ ಸಂಘರ್ಷ ಪರಿಷತ್ತು ಕೆರೆಗಳ ಬಫರ್ ಝೋನ್, ರಾಜಕಾಲುವೆ, ನಾಲಾಗಳಿಗೆ ಹಾನಿ ಉಂಟು ಮಾಡುವ ಯೋಜನೆಗಳಿಗೆ ಉದ್ದೇಶಪೂರ್ವಕವಾಗಿ ಅನುಮೋದನೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ, ಬಿಡಿಎ ಆಯುಕ್ತರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದೆ. 

ಅಪಾರ್ಟ್‌ಮೆಂಟ್ ಖರೀದಿದಾರರು ಭಾರೀ ಮಳೆ ಮತ್ತು ಪ್ರವಾಹದ ಸಂದರ್ಭದಲ್ಲಿ ನಮ್ಮ ಪರಿಸರಕ್ಕೆ ಹಾನಿಯಾಗುವುದರ ಜೊತೆಗೆ ಜೀವಹಾನಿ, ವಾಹನಗಳಿಗೆ, ಆಸ್ತಿಪಾಸ್ತಿ ಹಾನಿಗೆ ಕಾರಣವಾಗುತ್ತದೆ. ಇದು ಆಯ್ದ ಬಿಲ್ಡರ್‌ಗಳಿಗೆ ಒಲವು, ನಿಯಮಗಳ ಉಲ್ಲಂಘನೆ, ಉದ್ದೇಶಪೂರ್ವಕ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ಎಸಗಲಾಗುತ್ತಿದೆ ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಪರಿಷತ್ತಿನ ಸಹ ಅಧ್ಯಕ್ಷ ಬಿ.ಕೆ.ಪ್ರಕಾಶ್ ಬಾಬು ಲೋಕಾಯುಕ್ತದದಲ್ಲಿ ದೂರು ದಾಖಲಿಸಿದ್ದಾರೆ.

ರಾಜಧಾನಿಯಲ್ಲಿ ಉಳಿದಿರುವ ಜಲಮೂಲಗಳನ್ನು ಅತಿಕ್ರಮಿಸಲು ಮತ್ತು ಹಾನಿ ಮಾಡಲು ಬಿಲ್ಡರ್‌ಗಳಿಗೆ ಬಿಬಿಎಂಪಿ ಮತ್ತು ಬಿಡಿಎ ಕ್ರಮಗಳು ದಾರಿ ಮಾಡಿಕೊಡುತ್ತಿದೆ. ಮಳೆಗಾಲದಲ್ಲಿ ಭಾರೀ ಮಳೆ, ಪ್ರವಾಹದ ಸಮಯದಲ್ಲಿ ಸಾಮಾನ್ಯ ಜನರಿಗೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ.

ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳು ಹಾಗೂ ಬಿಲ್ಡರ್‌ಗಳ ನಡುವಿನ ಅಪವಿತ್ರ ಸಂಬಂಧದಿಂದ ಬೆಂಗಳೂರು ಇತರ ಸ್ಥಳಗಳ ಮಧ್ಯಮ ವರ್ಗದ ನಾಗರಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳು ಕಾನೂನಿನ ಪ್ರತಿಯೊಂದು ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ ಮತ್ತು ಪರಿಸರಕ್ಕೆ ಮತ್ತು ಅಪಾರ್ಟ್‌ಮೆಂಟ್, ಸೈಟ್‌ಗಳು, ವಿಲ್ಲಾಗಳನ್ನು ಖರೀದಿಸುವವರಿಗೆ ತೊಂದರೆ ಮಾಡುತ್ತಿದ್ದಾರೆ. ಇದರಿಂದಾಗಿ  ಜನಸಾಮಾನ್ಯರು ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಸಂಸ್ಥೆಯ ಸಹ ಅಧ್ಯಕ್ಷ ಆರ್.ಆದರ್ಶ್ ಅಯ್ಯರ್ ಬೇಸರ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಜನಾಧಿಕಾರ ಸಂಘರ್ಷ ಪರಿಷತ್ ನಿಂದ ಲೋಕಾಯುಕ್ತದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರ ಯೋಜನೆ ಹೆಚ್ಚುವರಿ ನಿರ್ದೇಶಕ ಬಿ.ಎನ್ ಗಿರೀಶ್, ಪಾಲಿಕೆ ನಗರ ಯೋಜನೆ ದಕ್ಷಿಣ ಜೆಡಿಟಿಪಿ ಸಾವಿತ್ರಿ ಪಾಟೀಲ್, ಬಿಡಿಎ ಆಯುಕ್ತ ಎನ್.ಜಯರಾಮ್, ಪ್ರಾಧಿಕಾರದ ಎಂಜಿನಿಯರ್ ಸದಸ್ಯ ಎನ್.ವಿ.ಧನಂಜಯ ರೆಡ್ಡಿ, ಜಂಟಿ ನಿರ್ದೇಶಕ ಹನುಮಂತ ರೆಡ್ಡಿ ಸೇರಿದಂತೆ ಆರು ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ.

“ಮಲ್ಲಸಂದ್ರ ಗ್ರಾಮದ ಕನಕಪುರ ರಸ್ತೆ ಮತ್ತು ನೈಸ್ ರಸ್ತೆಯ ಜಂಕ್ಷನ್ ಬಳಿ ಕಾಸಗ್ರಾಂಡ್ ಲೋಟಸ್ ಪ್ರೈವೇಟ್ ಲಿಮಿಟೆಡ್ ಎಂಬ ಬಿಲ್ಡರ್ ನಿಂದ ಕಟ್ಟಲಾಗುತ್ತಿರುವ 800+ ಯೂನಿಟ್ಟಿನ ಅಪಾರ್ಟ್ಮೆಂಟ್ ಸಂಕೀರ್ಣದ ಒಂದು ಪ್ರಕರಣದಲ್ಲಿ, ಕಂದಾಯ ದಾಖಲೆಗಳ ಪ್ರಕಾರ ನದಿ ಎಂದು ಗೊತ್ತುಪಡಿಸಿದ ಕಾಲುವೆಯು, ದಕ್ಷಿಣ ಬೆಂಗಳೂರಿನ ಹೆಚ್ಚಿನ ಪ್ರದೇಶದಿಂದ ನೀರನ್ನು ಸಂಗ್ರಹಿಸುತ್ತದೆ. ಈ ನೀರನ್ನು ಎರಡು ದೊಡ್ಡ ಕೆರೆಗಳಾದ ವಡೇರಹಳ್ಳಿ ಕೆರೆ, ಒ ಬಿ ಚೂಡನಹಳ್ಳಿ ಕೆರೆಗಳನ್ನು ಸಂಪರ್ಕಿಸುತ್ತದೆ. ಇದು ಕನಕಪುರ ಗ್ರಾಮದ ಬಳಿ ಹರಿಯುವ ಉಪನದಿಗೆ ನೀರನ್ನು ಪೂರೈಸುತ್ತದೆ. ಈ ಕಾಲುವೆಯು ವಿಶಾಲವಾಗಿದ್ದು ಸುಮಾರು 80+ ಮೀಟರ್‌ಗಳಷ್ಟು ಅಗಲವಾಗಿದೆ”.

“ಆದರೆ, ಬಿಡಿಎ ಹಾಗೂ ಬಿಬಿಎಂಪಿ ಅಧಿಕಾರಿಗಳ ದುರುದ್ದೇಶಿತ ಅದೇಶದಂತೆ ಈ ಕಾಲುವೆಯ ಮಧ್ಯಭಾಗದಿಂದ ಕೇವಲ 25 ಮೀಟರ್‌ಗಳ ಬಫರ್ ಅನ್ನು ಬಿಟ್ಟು ಕಟ್ಟಡ ನಿರ್ಮಿಸಲು ಅನುಮತಿ ನೀಡಲಾಗಿದೆ. ಅದರಂತೆ ಬಫರ್ ವಲಯವು ಈ ಕಾಲುವೆಯ ಒಳಗೆ ಅಂತ್ಯವಾಗಿ ಕಾಲುವೆಯಲ್ಲಿಯೇ ಕಟ್ಟಡ ಕಟ್ಟಲು ಅನುಮತಿಸಿದಂತಾಗುತ್ತದೆ. ಇದರರ್ಥ ಬಿಲ್ಡರ್ ಕಾಲುವೆಯೊಳಗೇ ಕಟ್ಟಡಗಳನ್ನು ನಿರ್ಮಿಸಬಹುದು. ಹೀಗಾಗಿ ಪರಿಸರಕ್ಕೆ ಗಂಭೀರ ಹಾನಿಯಾಗುತ್ತದೆ ಮತ್ತು ಈಗಾಗಲೇ ಕುಸಿದಿರುವ ಬೆಂಗಳೂರಿನ ಅಂತರ್ಜಲದ ಮರುಪೂರಣಕ್ಕೆ ಮಾರಕವಾಗುವುದು ಹಾಗೂ ಜಲಮೂಲಗಳ ಶಾಶ್ವತ ನಷ್ಟವಾಗುವುದು” ಎಂದು ಪರಿಷತ್ ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.

“ನಮ್ಮ ಜನಾಧಿಕಾರ ಸಂಘರ್ಷ ಸಮಿತಿ ಸಂಘಟನೆಯು ಬಿಡಿಎ ಮತ್ತು ಬಿಬಿಎಂಪಿ ಅನುಮೋದಿಸಿದ ಇತರ ಇತ್ತೀಚಿನ ಯೋಜನೆಗಳ ಕುರಿತು ಹೆಚ್ಚಿನ ವಿವರವಾದ ಅಧ್ಯಯನವನ್ನು ಮಾಡಿದಾಗ ಈ ತರಹದ ಹಲವು ಭ್ರಷ್ಟ, ಸ್ವಾರ್ಥ, ಬೇಜವಾಬ್ದಾರಿ ಮತ್ತು ಹೊಣೆಗಾರಿಕೆಯಿಲ್ಲದ ಸರ್ಕಾರಿ ಅಧಿಕಾರಿಗಳಿಂದ ಇಂತಹುದೇ ಹಲವಾರು ಉಲ್ಲಂಘನೆಗಳು ಕಂಡುಬಂದಿರುತ್ತದೆ. ಹಾಗಾಗಿ ಈ ಅಧಿಕಾರಿಗಳ ಇಂತಹ ಅಕ್ರಮದ ವಿರುದ್ಧ ನಮ್ಮ ಸಂಘಟನೆಯು ತೀವ್ರತರನಾದ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದೆ” ಎಂದು ಸಮಿತಿ ಸಹ ಅಧ್ಯಕ್ಷರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಇಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಬಿಬಿಎಂಪಿ ಮತ್ತು ಬಿಡಿಎನ ಈ ಉನ್ನತ ಅಧಿಕಾರಿಗಳು ನಡೆಸಿರುವ ಅಕ್ರಮಗಳಿಂದ ಜನಸಾಮಾನ್ಯರಿಗೆ ಆಗುವ ಸಮಸ್ಯೆಗಳ ಗಂಭೀರತೆಯನ್ನು ಅರಿತು, ಸದರಿ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ, ಅವರ ಅಕ್ರಮ ಹಾಗೂ ಕಾನೂನು ಉಲ್ಲಂಘನೆಗಳ ಬಗ್ಗೆ ತನಿಖೆಗೆ ಆದೇಶಿಸಬೇಕು. ಈ ಕೂಡಲೇ ಅವರನ್ನು ಈ ಹುದ್ದೆಯಿಂದ ಇಳಿಸಿ ಅವರ ಬದಲಿಗೆ ಕಾನೂನು ಪಾಲಿಸುವ ಜವಾಬ್ದಾರಿಯುತ ಅಧಿಕಾರಿಗಳನ್ನು ನೇಮಿಸಬೇಕೆಂದು ಪರಿಷತ್ ಬಿ.ಕೆ.ಪ್ರಕಾಶ್ ಬಾಬು ಹಾಗೂ ಆರ್.ಆದರ್ಶ್ ಅಯ್ಯರ್  ಆಗ್ರಹಿಸಿದ್ದಾರೆ. (ಚಿತ್ರದಲ್ಲಿ ಬಳಸಿದ ಚಿತ್ರ ಸಾಂದರ್ಭಿಕ)

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading...
WhatsApp Join our WhatsApp Channel
Previous Post

Big Breaking | ನಮ್ಮ ಮೆಟ್ರೋ ಪ್ರಯಾಣ ಅಸಹಜ ದರ ಏರಿಕೆಯಾದ ಕಡೆ ಕಡಿಮೆ ಮಾಡಲು ಬಿಎಂಆರ್ ಸಿಎಲ್ ಗೆ ಸಿಎಂ ಸೂಚನೆ

Next Post

ನಮ್ಮ ಮೆಟ್ರೋ ಪ್ರಯಾಣದ ನೂತನ ಪರಿಷ್ಕೃತ ದರದ ಗರಿಷ್ಠ ಮಿತಿ ಶೇ.70ಕ್ಕೆ ನಿಗದಿ : ಅತಿ ಹೆಚ್ಚು ದುಬಾರಿಯಾದ ಟಿಕೆಟ್ ದರಗಳಲ್ಲಿ ಇಳಿಕೆ : ನಾಳೆಯಿಂದ ಜಾರಿ

Next Post

ನಮ್ಮ ಮೆಟ್ರೋ ಪ್ರಯಾಣದ ನೂತನ ಪರಿಷ್ಕೃತ ದರದ ಗರಿಷ್ಠ ಮಿತಿ ಶೇ.70ಕ್ಕೆ ನಿಗದಿ : ಅತಿ ಹೆಚ್ಚು ದುಬಾರಿಯಾದ ಟಿಕೆಟ್ ದರಗಳಲ್ಲಿ ಇಳಿಕೆ : ನಾಳೆಯಿಂದ ಜಾರಿ

ಬೆಂಗಳೂರು : ಸಾರಕ್ಕಿ ಕೆರೆಯ 20 ಕೋಟಿ ರೂ. ಮೌಲ್ಯದ ಒತ್ತುವರಿ ಭೂಮಿ ವಶಪಡಿಸಿಕೊಂಡ ಬಿಬಿಎಂಪಿ

Please login to join discussion

Like Us on Facebook

Follow Us on Twitter

Recent News

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026

Karnataka Budget 2026-27 | ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ: 4.48 ಲಕ್ಷ ಕೋಟಿ ಮೊತ್ತದ ‘ಸರ್ವೋದಯ’ ಆಯವ್ಯಯದ ಕಂಪು

March 6, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಆಸರೆ: 35 ಮೃತ ನೌಕರರ ಅವಲಂಬಿತರಿಗೆ ₹8.22 ಕೋಟಿ ಪರಿಹಾರ ವಿತರಣೆ

March 6, 2026

Karnataka Budget 2026-27 | ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ: 4.48 ಲಕ್ಷ ಕೋಟಿ ಮೊತ್ತದ ‘ಸರ್ವೋದಯ’ ಆಯವ್ಯಯದ ಕಂಪು

March 6, 2026

AB PMJAY | ದಂತ ಭಾಗ್ಯ ಯೋಜನೆ ಇನ್ನು ಆಯುಷ್ಮಾನ್ ಭಾರತ್ ಅಡಿ: ಉಚಿತ ಹಲ್ಲು ಸೆಟ್ ಪಡೆಯುವುದು ಈಗ ಮತ್ತಷ್ಟು ಸುಲಭ

March 5, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d