ಬೆಂಗಳೂರು, ಜ.18 www.bengaluruwire.com : ನಗರದ ಅತಿ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಎಪಿಎಸ್ ಸಮೂಹ ಶಿಕ್ಷಣ ಸಂಸ್ಥೆಯ ಹಳೇ ವಿದ್ಯಾರ್ಥಿಗಳ ಮೆಗಾ ಮಿಲನ ಕಾರ್ಯಕ್ರಮ ಇದೇ 26ನೇ ತಾರೀಖು ಜರುಗಲಿದೆ.
ಎನ್.ಆರ್.ಕಾಲೋನಿಯಲ್ಲಿರುವ ಎಪಿಎಸ್ ಕಾಲೇಜಿನ ಮೈದಾನದಲ್ಲಿ ಇದೇ ಜನವರಿ 26ರಂದು ಸಂಜೆ 4 ಗಂಟೆಯಿಂದ ಹಳೆಯ ವಿದ್ಯಾರ್ಥಿಗಳ ಮೆಗಾ ಅಲ್ಯುಮ್ನಿ ಮೀಟ್ ಅಪ್ (Mega Alumini Meet UP) ಕಾರ್ಯಕ್ರಮವನ್ನು ಎಪಿಎಸ್ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಡಾ.ವಿಷ್ಣುಭರತ್ ಅಲಮ್ ಪಲ್ಲಿ ನೇತೃತ್ವದಲ್ಲಿ ಆಯೋಜಿಸಲಾಗಿದೆ. ಹಳೇ ವಿದ್ಯಾರ್ಥಿಗಳ ಅಪೂರ್ವ ಸಮಾಗಮ ಕಾರ್ಯಕ್ರಮ ಇದಾಗಿದ್ದು, ಈಗಾಗಲೇ ಸಾವಿರಾರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೋಂದಾಯಿಸಿಕೊಂಡಿದ್ದಾರೆ. ಇದಕ್ಕಾಗಿ ಎಪಿಎಸ್ ಸಂಸ್ಥೆಯು ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದೆ.
1934ರಲ್ಲಿ ಪ್ರಾರಂಭವಾದ ಎಪಿಎಸ್ ಶಿಕ್ಷಣ ಟ್ರಸ್ಟ್ (Acharya Pathasala Educational Trust) 90 ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ. ಎನ್.ಆರ್.ಕಾಲೋನಿ, ಸೋಮನಹಳ್ಳಿ ಈ ಎರಡೂ ಕ್ಯಾಂಪಸ್ ಗಳಲ್ಲಿ ಪ್ರಾಥಮಿಕ ಶಾಲೆಯಿಂದ ಹಿಡಿದು ಕಾಲೇಜಿನ ತನಕ ಒಟ್ಟು 14 ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು ಒಟ್ಟಾರೆ ಆರು ಸಾವಿರ ವಿದ್ಯಾರ್ಥಿಗಳು ಪ್ರಸ್ತುತ ಶಿಕ್ಷಣ ಪಡೆಯುತ್ತಿದ್ದಾರೆ. ಪ್ರೊಫೆಸರ್ ಎನ್. ಅನಂತ್ ಆಚಾರ್ (Prof. N Ananthachar) ಈ ಎಪಿಎಸ್ ಶಿಕ್ಷಣ ಟ್ರಸ್ಟ್ ಪ್ರಾರಂಭಿಸಿದ ಮಹನೀಯರು.
ಒಂಭತ್ತು ದಶಕಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಸಾವಿರಾರು ಜನರು ಕಲೆ, ವಿಙ್ಞನ- ತಂತ್ರಙ್ಞನ, ಕ್ರೀಡೆ, ಸಿನಿಮಾ ಸೇರಿದಂತೆ ವಿವಿಧ ರಂಗಗಳಲ್ಲಿ ಖ್ಯಾತಿಗಳಿಸಿದ್ದಾರೆ. ಖ್ಯಾತ ನಟರಾದ ಸೂಪರ್ ಸ್ಟಾರ್ ರಜನಿಕಾಂತ್, ಉಪೇಂದ್ರ ಇವರೆಲ್ಲರೂ ಎಪಿಎಸ್ ನಲ್ಲಿ ಓದಿದವರೇ.
ಸೂಪರ್ ಸ್ಟಾರ್ ರಜನಿಕಾಂತ್ ಬೆಂಗಳೂರಿನ ಎನ್.ಆರ್.ಕಾಲೋನಿಯ ಎಪಿಎಸ್ ಶಾಲೆ ಹಾಗೂ ಕಾಲೇಜಿನಲ್ಲಿ ಓದಿದರು. ಆದರೆ ಕಾರಣಾಂತರಗಳಿಂದ ತಮ್ಮ ಶಿಕ್ಷಣವನ್ನು ಮುಂದುವರೆಸಿರಲಿಲ್ಲ. ತಾವು ಓದಿದ ಎಪಿಎಸ್ ವಿದ್ಯಾಸಂಸ್ಥೆಯ ಬಗ್ಗೆ ಖ್ಯಾತ ನಟ ರಜನಿಕಾಂತ್ ಮನಬಿಚ್ಚಿ ಮಾತನಾಡಿದ್ದಾರೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.