ಬೆಂಗಳೂರು, ಜ.07 www.bengaluruwire.com : ಬಾಹ್ಯಾಕಾಶ ವಿಜ್ಞಾನಕ್ಕೆ ಸದಾ ಬೆಂಬಲ ನೀಡುವ ಬೆಂಗಳೂರಿನ ನೆಹರು ತಾರಾಲಯ (Neharu Planetarium) 13 ವರ್ಷ ವಯಸ್ಸಿಗೂ ಹೆಚ್ಚಿನ ವಯೋಮಾನದವರಿಗಾಗಿ ಜ.10ರಂದು ರಾತ್ರಿ 10ರಿಂದ ಬೆಳಗಿನ ಜಾವ 4.30ರ ತನಕ ಚಳಿಗಾಲದ ರಾತ್ರಿಯಲ್ಲಿ ಬಾಹ್ಯಾಕಾಶ ವೀಕ್ಷಿಸುವ ಅವಕಾಶ ಕಲ್ಪಿಸಿದೆ.
ಅಸೋಸಿಯೇಷನ್ ಆಫ್ ಬೆಂಗಳೂರು ಅಮೆಚೂರ್ ಆಸ್ಟ್ರಾನೋಮರ್ಸ್ (ABAA) ಹಾಗೂ ನೆಹರು ಪ್ಲಾನಿಟೋರಿಯಮ್ ಜಂಟಿ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ರಾತ್ರಿ ಆಕಾಶ ಬಗ್ಗೆ ತಿಳುವಳಿಕೆ, ಬರಿಗಣ್ಣಿನಲ್ಲಿ ಆಕಾಶ ವೀಕ್ಷಣೆ ಹಾಗೂ ಆಧುನಿಕ ಬೈನಾಕ್ಯುಲರ್ ಹಾಗೂ ಟಿಲಿಸ್ಕೋಪ್ ಮೂಲಕ ಅಂತರಿಕ್ಷ ವೀಕ್ಷಣೆ ಮಾಡಬಹುದು.
ತಾರಾಯಲದಲ್ಲಿ ರಾತ್ರಿಆಕಾಶ ವೀಕ್ಷಣೆಗೆ ಪ್ರತಿಯೊಬ್ಬರಿಗೂ 750 ರೂ. ಶುಲ್ಕ ನಿಗದಿಪಡಿಸಲಾಗಿದೆ. ಆಸಕ್ತರು ಕೂಡಲೇ [email protected] ಗೆ ಇಮೇಲ್ ಮಾಡಿ ಈ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಈ ಮುಂದಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ : 080-22379725/ 22266084.