ಬೆಂಗಳೂರಿನ ಕುಮಾರಕೃಪಾ ರಸ್ತೆಯ ತುಂಬಾ ವರ್ಣಮಯ ಚಿತ್ರಗಳದ್ದೇ ಕಾರುಬಾರು. ಒಂದಾ ಎರಡಾ…? ವೈವಿಧ್ಯಮಯ ತೈಲವರ್ಣ, ಚಾರ್ಕೋಲ್, ವಾಟರ್ ಪೈಂಟ್, ಕಾಫಿ ಪೈಟಿಂಗ್, ಗಾಜಿನ ಬಳೆ ಕಲೆ, ಉಬ್ಬುಚಿತ್ರ ಹೀಗೆ ವಿವಿಧ ಮಾಧ್ಯಮಗಳ ಚಿತ್ರಕಲೆಗಳು ಕಲಾವಿದರ ಕೈಯಲ್ಲಿ ಅರಳಿ ನಿಂತಿತ್ತು. ಈ ಚಿತ್ರಸಂತೆಯ ಝಲಕ್ ಇಲ್ಲಿದೆ.
ಸಾವಿರಾರು ಸಂಖ್ಯೆಯಲ್ಲಿ ಚಿತ್ರಸಂತೆಗೆ ಆಗಮಿಸಿ ತಮಗಿಷ್ಟವಾದ ವರಗಣಚಿತ್ರಗಳನ್ನು ಖರೀದಿಸಿ ಮನೆಗೆ ಕೊಂಡೊಯ್ದರೆ, ಕೆಲವರು ತಮಗೆ ಹಿಡಿಸಿದ ವರ್ಣಚಿತ್ರಗಳ ಫೊಟೊ ಕ್ಲಿಕ್ಕಿಸುತ್ತಾ ಮುಂದೆ ಸಾಗುತ್ತಿದ್ದರು. ಸ್ಥಳದಲ್ಲೇ ಚಿತ್ತ ಬಿಡಿಸುವ ಕಲಾವಿದರಿಗೆ ಬೇಡಿಕೆಯೋ ಬೇಡಿಕೆ. ಅವೆ ಕೈಗೆ ಬಿಡುವಿಲ್ಲದಂತೆ ಅಬಾಲವೃದ್ಧರಾದಿಯಾಗಿ ಎಲ್ಲರೂ ತಾಮುಂದು- ನಾಮುಂದು ಎಂದು ಪೋರ್ಟ್ ರೈಟ್, ವ್ಯಂಗ್ಯಚಿತ್ರಗಳನ್ನು ಬರೆಸಿಕೊಂಡು ತಮ್ಮೊಂದಿಗೆ ತೆಗೆದುಕೊಂಡು ಹೋದರು.
ಈ ಬಾರಿಯ 22ನೇ ಆವೃತ್ತಿಯ ಚಿತ್ರಸಂತೆಯನ್ನು ಮಹಿಳಾ ಸಾಧಕಿಯರು ಸೇರಿದಂತೆ ಸ್ತ್ರೀಯರಿಗಾಗಿ ಮೀಸಲಿಡಲಾಗಿತ್ತು. ನೂರು ಇನ್ನೂರು ರೂಪಾಯಿಯಿಂದ ಹಿಡಿದು 40-50 ಲಕ್ಷದ ವರೆಗೂ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿತ್ತು.