ಬೆಂಗಳೂರು, ಡಿ.23 www.bengaluruwire.com : ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಪೂರೈಸಲು, ನೈಋತ್ಯ ರೈಲ್ವೆಯು ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ತಿರುವನಂತಪುರಂ ಉತ್ತರ ನಿಲ್ದಾಣಗಳ ನಡುವೆ ಪ್ರತಿ ದಿಕ್ಕಿನಲ್ಲಿ ಒಂದು ಟ್ರಿಪ್ ವಿಶೇಷ ರೈಲುಗಳ ಕಾರ್ಯಾಚರಣೆ ನಿಯೋಜನೆ ಮಾಡಿದೆ.
ರೈಲಿನ ವಿವರಗಳು :
– ರೈಲು ಸಂಖ್ಯೆ. 06557/06558 SMVT ಬೆಂಗಳೂರು-ತಿರುವನಂತಪುರಂ ಉತ್ತರ-SMVT ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ (ಪ್ರತಿ ದಿಕ್ಕಿನಲ್ಲಿ 1 ಟ್ರಿಪ್)
– SMVT ಬೆಂಗಳೂರಿನಿಂದ ನಿರ್ಗಮನ : ಡಿಸೆಂಬರ್ 24, 2024 ರಂದು ಮಧ್ಯಾಹ್ನ 03:50
– ತಿರುವನಂತಪುರಂ ಉತ್ತರಕ್ಕೆ ಆಗಮನ : ಡಿಸೆಂಬರ್ 25, 2024 ರಂದು 10:05 ಬೆಳಗ್ಗೆ
– ತಿರುವನಂತಪುರಂ ಉತ್ತರದಿಂದ ನಿರ್ಗಮನ: ಡಿಸೆಂಬರ್ 25, 2024 ರಂದು ಮಧ್ಯಾಹ್ನ 12:35
– SMVT ಬೆಂಗಳೂರಿಗೆ ಆಗಮನ: ಡಿಸೆಂಬರ್ 26, 2024 ರಂದು ಬೆಳಗ್ಗೆ 05:00
ಈ ಮಾರ್ಗದಲ್ಲಿ ರೈಲು ನಿಲ್ಲಲಿದೆ :
ರೈಲಿಗೆ ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಪೊದನೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಿಂಗವನಂ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕಾರ, ಕಾಯಂಕುಲಂ ಮತ್ತು ಕೊಲ್ಲಂ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆ ಇರುತ್ತದೆ.
ಪ್ರಯಾಣಿಕರಿಗೆ ಪ್ರಮುಖ ಮಾಹಿತಿ :
ಪ್ರಯಾಣಿಕರು ಭಾರತೀಯ ರೈಲ್ವೆ https://www.indianrail.gov.in/enquiry/ವೆಬ್‌ಸೈಟ್‌ಗೆ ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಬಹುದು , 139 ಅನ್ನು ಡಯಲ್ ಮಾಡಿ ಅಥವಾ ಈ ರೈಲುಗಳಿಗೆ ಪ್ರತಿ ನಿಲ್ದಾಣದಲ್ಲಿ ಆಗಮನ ಮತ್ತು ನಿರ್ಗಮನ ಸಮಯವನ್ನು ತಿಳಿಯಲು ಎನ್ ಟಿಇಎಸ್ (NTES) ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸುವಂತೆ ಮತ್ತು ಕೊನೆಯ ಕ್ಷಣದ ದಟ್ಟಣೆಯನ್ನು ತಪ್ಪಿಸಲು ಮುಂಚಿತವಾಗಿ ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.