ತಮಿಳುನಾಡಿನ ಕೊಯಮತ್ತೂರಿನ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ 37 ವರ್ಷದ ಟ್ಯಾಕ್ಸಿ ಚಾಲಕನೊಬ್ಬ ತನ್ನ ಪತ್ನಿಯ ಜೀವನಾಂಶವನ್ನು ನಾಣ್ಯಗಳಲ್ಲಿ ಪಾವತಿಸಿದ ಆಘಾತಕಾರಿ ಘಟನೆ ಸಂಭವಿಸಿದೆ. ಆತ ಪತ್ನಿಯ ಮಧ್ಯಂತರ ಜೀವನಾಂಶವಾಗಿ ಕೋರ್ಟ್ ₹ 2 ಲಕ್ಷ ನೀಡುವಂತೆ ಆದೇಶಿಸಿತ್ತು. ಆಗ ಆ ವ್ಯಕ್ತಿ ₹ 1 ಮತ್ತು ₹ 2 ನಾಣ್ಯಗಳ ₹ 80,000 ಇರುವ ಎರಡು ಬಿಳಿ ಚೀಲಗಳೊಂದಿಗೆ ನ್ಯಾಯಾಲಯಕ್ಕೆ ಬಂದರು. ಆತ ಎರಡು ಬಿಳಿ ಚೀಲದಲ್ಲಿ ನಾಣ್ಯಗಳನ್ನು ಕೊಂಡೊಯ್ಯುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ವರದಿಗಳ ಪ್ರಕಾರ, ಟ್ಯಾಕ್ಸಿ ಚಾಲಕನ ಪತ್ನಿ ಒಂದು ವರ್ಷದ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಜೀವನಾಂಶವನ್ನು ಪಾವತಿಸಲು ನ್ಯಾಯಾಲಯವು ಆದೇಶಿಸಿತ್ತು. ಆದರೆ ಆತನು ನೋಡಿನ ಬದಲಾಗಿ ಸೇಡಿನ ಕ್ರಮವಾಗಿ ನಾಣ್ಯಗಳಲ್ಲಿ ಹಣ ಪಾವತಿಸಲು ಮುಂದಾದರೂ ಆತನ ಪ್ಲಾನ್ ವರ್ಕೌಟ್ ಆಗಿಲ್ಲ.
ವ್ಯಕ್ತಿಯ ನಡೆಯಿಂದ ನ್ಯಾಯಾಲಯವು ದಿಗ್ಭ್ರಮೆಗೊಂಡಿತು, ಆದರೆ ನ್ಯಾಯಾಧೀಶರು ಅಂತಿಮವಾಗಿ ನೋಟುಗಳಲ್ಲಿ ಮೊತ್ತವನ್ನು ಹಿಂತಿರುಗಿಸುವಂತೆ ಕೇಳಿದರು. ನಾಣ್ಯಗಳ ಅಗತ್ಯಕ್ಕಿಂತ ₹1.2 ಲಕ್ಷದ ಕೊರತೆ ಇದ್ದ ಕಾರಣ, ಉಳಿದ ಹಣವನ್ನು ನಿಗದಿತ ಕಾಲಮಿತಿಯೊಳಗೆ ಪಾವತಿಸುವಂತೆ ನ್ಯಾಯಾಲಯವು ವ್ಯಕ್ತಿಗೆ ಆದೇಶಿಸಿದೆ.
ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವೃರಲ್ಆಗಿದೆ. ಹಾಗೂ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅನೇಕ ಬಳಕೆದಾರರು ಟ್ಯಾಕ್ಸಿ ಚಾಲಕನ ಬೆಂಬಲಕ್ಕೆ ನಿಂತಿದ್ದಾರೆ. ಕೆಲವು ಬಳಕೆದಾರರು ನಾಣ್ಯಗಳನ್ನು ನಿರಾಕರಿಸುವ ನ್ಯಾಯಾಧೀಶರ ನಿರ್ಧಾರವನ್ನು ಪ್ರಶ್ನಿಸಿದರು, ನಾಣ್ಯಗಳಲ್ಲಿ ಪರಿಹಾರ ನೀಡುವುದು ಕಾನೂನುಬದ್ಧವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಆದಾಗ್ಯೂ, ವಿಶೇಷವಾಗಿ ವಿಚ್ಛೇದನ ಮತ್ತು ಜೀವನಾಂಶ ಪಾವತಿ ವಿಷಯಕ್ಕೆ ಬಂದಾಗ, ಟ್ಯಾಕ್ಸಿ ಚಾಲಕನ ನಡೆ ಬಾಲಿಶ ಮತ್ತು ಅನಗತ್ಯ ಎಂದು ಭಾವಿಸಿದರು. ಈ ಘಟನೆಯು ಕಾನೂನಿನ ಬಗ್ಗೆ ಹೆಚ್ಚಿನ ಅರಿವು ಮತ್ತು ತಿಳುವಳಿಕೆಯ ಅಗತ್ಯವನ್ನು ಎತ್ತಿ ತೋರಿಸಿದೆ.
ಅಚ್ಚರಿಯ ವಿಷಯ ಏನಂದ್ರೆ, ಟ್ಯಾಕ್ಸಿ ಚಾಲಕ ಮರುದಿನ ನ್ಯಾಯಾಲಯಕ್ಕೆ ಕರೆನ್ಸಿ ನೋಟುಗಳೊಂದಿಗೆ ಬಂದು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ನಾಟಕೀಯ ಬೆಳವಣಿಗೆ ಕೊನೆಗೊಂಡಿತು.
ಇಲ್ಲಿದೆ ಆ ವೈರಲ್ ವಿಡಿಯೋ :