ಬೆಂಗಳೂರು, ಡಿ.21 www.bengaluruwire.com : ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆ (Bengaluru Traffic Police) ರಸ್ತೆಯಲ್ಲಿ ಸಾರ್ವಜನಿಕರ ಸಂಚಾರದ ಅನುಕೂಲಕ್ಕಾಗಿ ಹಳೆ ವೆಬ್‌ಸೈಟ್ ಅನ್ನು ಹೊಸದಾಗಿ ಪ್ರಸ್ತುತಪಡಿಸಿದೆ.
ನೂತನ ವೆಬ್ಸೈಟ್ನಿಂದ ನಿಮ್ಮ ಬೆರಳ ತುದಿಯಲ್ಲಿ ಒಂದೇ ಕ್ಲಿಕ್‌ನಲ್ಲಿ ಸಂಚಾರ ಉಲ್ಲಂಘನೆಗಳನ್ನು ವರದಿ ಮಾಡುವುದು, ದೂರುಗಳನ್ನು ದಾಖಲಿಸುವುದು ಮತ್ತು ನೈಜ ಸಮಯದ ಸಂಚಾರ ದಟ್ಟಣೆಯ ಅಪ್‌ಡೇಟ್‌ಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು.
ಹೈಟೆಕ್ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿರುವ ಈ ವೆಬ್‌ಸೈಟ್ ಸಂಚಾರ ನಿರ್ವಹಣೆ, ನಿಯಮ ಜಾರಿ ಮತ್ತು ರಸ್ತೆ ಸುರಕ್ಷತೆಗೆ ಸಹಾಯ ಮಾಡುತ್ತದೆ. ಇದಲ್ಲದೆ ಸಂಚಾರ ದಂಡ ಪಾವತಿಯನ್ನು ಸುಲಭವಾಗಿ ಹುಡುಕಲು ಅನುಕೂಲಕರವಾಗುವಂತೆ ಸಿದ್ಧಪಡಿಸಲಾಗಿದೆ. ನೂತನ ವೆಬ್ ಸೈಟ್ ಲಿಂಕ್ ಇಲ್ಲಿದೆ : https://btp.karnataka.gov.in/
ನೂತನ ವೆಬ್ ಸೈಟ್ ಬಗ್ಗೆ ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆ ಜಂಟಿ ಆಯುಕ್ತ ಎಂ.ಎನ್.ಅನುಚೇತ್ (M N Anucheth) ಸಾರ್ವಜನಿಕ ಇನ್ ಸ್ಟಾಗ್ರಾಂ ಮೂಲಕ ವಿಡಿಯೋದಲ್ಲಿ ತಿಳಿಸಿದ್ದಾರೆ.