ಬೆಳಗಾವಿ ಸುವರ್ಣಸೌಧ, ಡಿ.18 www.bengaluruwire.com : ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ (Under the Control of Corruption Act) ಆರೋಪ ಪಟ್ಟಿ ಸಲ್ಲಿಸಲು ಅನುಮತಿ ಕೋರಿ ಲೋಕಾಯುಕ್ತ ಪೊಲೀಸರಿಂದ 2022 ರ ಆ.10ರಿಂದ ಈ ವರ್ಷದ ನ.30ರ ರನಕದ ಎರಡು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಒಟ್ಟು 623 ಪ್ರಕರಣಗಳಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಹೇಳಿದ್ದಾರೆ.
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ (Yelahanka MLA S.R. Vishwanath) ಕೇಳಿದ ಚುಕ್ಕೆಗುರುತಿಲ್ಲದ ಪ್ರಶ್ನೆಗೆ ವಿಧಾಸಭೆಯಲ್ಲಿ ಉತ್ತರಿಸಿರುವ ಅವರು, ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಪ್ರಸ್ತಾವನೆಗಳ ಪೈಕಿ 472 ಪ್ರಸ್ತಾವನೆಗಳಿಗೆ ಆರೋಪ ಪಟ್ಟಿ ಸಲ್ಲಿಸಲು ಸರ್ಕಾರ ಅನುಮತಿ ನೀಡಿರುತ್ತದೆ ಎಂದು ಅವರು ಉತ್ತರಿಸಿದ್ದಾರೆ.
ಅನುಮತಿ ನೀಡಲು ಬಾಕಿ ಇರುವ 146 ಪ್ರಕರಣಗಳಲ್ಲಿ, ಇತ್ತೀಚಿನ 53 ಪ್ರಕರಣಗಳು ವಿವಿಧ ಸಕ್ಷಮ ಪರಿಶೀಲನೆಯಲ್ಲಿರುತ್ತವೆ. ಪ್ರಕರಣಗಳಲ್ಲಿ ಅಭಿಪ್ರಾಯ ಅಥವಾ ಪ್ರಾಧಿಕಾರಗಳಲ್ಲಿ ಉಳಿದ 93 ಇಲಾಖಾ ಮುಖ್ಯಸ್ಥರ ಕಾನೂನು ಇಲಾಖೆಯ ಅಭಿಪ್ರಾಯ ಪಡೆಯಬೇಕಾಗುವುದರಿಂದ ಹಾಗೂ ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದ ತಡೆಯಾಜ್ಞೆ ಇರುವ ಕಾರಣ ಅನುಮತಿ ನೀಡಲು ವಿಳಂಬವಾಗಿರುತ್ತದೆ.
ಸಕ್ಷಮ ಪ್ರಾಧಿಕಾರಗಳು ಅಭಿಯೋಜನಾ ಮಂಜೂರಾತಿ (Prosecution sanction) ನೀಡಲು ಕ್ರಮವಹಿಸುವಂತೆ ಸರ್ಕಾರದಿಂದ ಕಾಲಕಾಲಕ್ಕೆ ಸುತ್ತೋಲೆ ಗಳನ್ನು ಹೊರಡಿಸಿ ಸೂಚನೆ ಗಳನ್ನು ನೀಡಲಾಗುತ್ತಿದೆ ಹಾಗೂ ಬಾಕಿಯಿರುವ ಅಭಿಯೋಜನಾ ಮಂಜೂರಾತಿ ಪ್ರಕರಣಗಳ ಪರಾಮರ್ಶೆಯನ್ನು ಸಹ ಆಗಿಂದಾಗ್ಗೆ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಸದನಕ್ಕೆ ತಿಳಿಸಿದ್ದಾರೆ.