ನವದೆಹಲಿ, ಡಿ.13 www.bengaluruwire.com : ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನದ ಗಗನ್‌ಯಾನ್ (Gaganayaan)ಗೆ ಇಂದು ಮಹತ್ವದ ಮೈಲಿಗಲ್ಲಿನ ದಿನವಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶುಕ್ರವಾರ ಉತ್ಪಾದನಾ ಕೇಂದ್ರದಿಂದ ಮೊದಲ ಘನ ಮೋಟಾರು ವಿಭಾಗವನ್ನು (Solid motor segment) ಉಡಾವಣಾ ಸಂಕೀರ್ಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದೆ.
2026 ಕ್ಕೆ ನಿಗದಿಪಡಿಸಲಾದ ಭಾರತದ ಪ್ರಥಮ ಮಾನವ ಸಹಿತ ಉಡಾವಣೆಯ ಪ್ರಮುಖ ಹೆಜ್ಜೆಯಲ್ಲಿ, ಘನ ಮೋಟಾರು ಸೆಗ್ಮೆಂಟನ್ನು ಉತ್ಪಾದನಾ ಘಟಕದಿಂದ ಸ್ಥಳಾಂತರಿಸಿದೆ, “ಗಗನ್‌ಯಾನ್ ಕಾರ್ಯಕ್ರಮಕ್ಕೆ ಮಹತ್ವದ ಮೈಲಿಗಲ್ಲು! ಮೊದಲ ಘನ ಮೋಟಾರು ವಿಭಾಗವನ್ನು ಉತ್ಪಾದನಾ ಘಟಕದಿಂದ ಉಡಾವಣಾ ಸಂಕೀರ್ಣಕ್ಕೆ ಸ್ಥಳಾಂತರಿಸಲಾಗಿದೆ, ಇದು ಎಚ್ ಎಲ್ ವಿಎಮ್3 (Human launch vehicle Mark-III- HLVM3 G1) ಹಾರಾಟದ ಕಡೆಗೆ ಪ್ರಮುಖ ಹೆಜ್ಜೆಯಾಗಿದೆ. ಭಾರತದ ಮಾನವ ಬಾಹ್ಯಾಕಾಶ ಹಾರಾಟದ ಕನಸುಗಳು ರೂಪುಗೊಳ್ಳುತ್ತಿವೆ! ಎಂದು ಇಸ್ರೋ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಈ ವಾರದ ಆರಂಭದಲ್ಲಿ, ಭಾರತೀಯ ನೌಕಾಪಡೆ ಮತ್ತು ಇಸ್ರೋ ಕೂಡ ಗಗನ್‌ಯಾನ್ ಗಗನಯಾತ್ರಿಗ ಕ್ಯಾಪ್ಸುಲ್ ಬಗ್ಗೆ ಸಮುದ್ರದಲ್ಲಿ ಅಭ್ಯಾಸ ಕೈಗೊಂಡಿತ್ತು. ತಜ್ಞರು ವಿಶಾಖಪಟ್ಟಣಂ ಕರಾವಳಿಯಲ್ಲಿ “ವೆಲ್ ಡೆಕ್” ಚೇತರಿಕೆಯ ಪ್ರಯೋಗಗಳನ್ನು ನಡೆಸಿದರು. ಹಡಗಿನ ವೆಲ್-ಡೆಕ್ ಅನ್ನು ನೀರಿನಿಂದ ತುಂಬಿಸಿ ಇದರಿಂದ ದೋಣಿಗಳು, ಲ್ಯಾಂಡಿಂಗ್ ಕ್ರಾಫ್ಟ್‌ಗಳು ಮತ್ತು ಆಕಾಶದಿಂದ ಸಮುದ್ರಕ್ಕೆ ಬಂದಿಳಿಯುವ ಬಾಹ್ಯಾಕಾಶ ನೌಕೆಗಳನ್ನು ಹಡಗಿನೊಳಗೆ ತರಬಹುದು ಎಂದು ಇಸ್ರೋ ಸಂಸ್ಥೆ ಹೇಳಿದೆ.
“ಈ ಪ್ರಯೋಗಗಳು ಭಾರತೀಯ ನೌಕಾಪಡೆ ಮತ್ತು ಇಸ್ರೋ ನಡೆಸುತ್ತಿರುವ ಮರುಪ್ರಾಪ್ತಿ ಪ್ರಯೋಗ (Recovery trials) ಗಳ ಸರಣಿಯ ಭಾಗವಾಗಿದೆ. ಸಾಮಾನ್ಯ ಮತ್ತು ಅಸಮಾನ್ಯ ಪರಿಸ್ಥಿತಿಗಳ ಸಂದರ್ಭದಲ್ಲಿ ನೌಕೆಯನ್ನು ಮರುಪಡೆಯುವಿಕೆ ಕಾರ್ಯಾಚರಣೆಗಳಿಗಾಗಿ ಉನ್ನತ ಕಾರ್ಯಾಚರಣೆ ವ್ಯವಸ್ಥೆಯನ್ನು ಅಂತಿಮಗೊಳಿಸಲು ಈ ಪ್ರಯೋಗಗಳನ್ನು ನಡೆಸಲಾಗುತ್ತಿದೆ” ಎಂದು ಇಸ್ರೋ ತಿಳಿಸಿದೆ. ಇಸ್ರೋ ನೇತೃತ್ವದ ಗಗನ್ ಯಾನ್ ಮೂಲಕ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ನಡೆಸುವ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವಲ್ಲಿ ಈ ಕಾರ್ಯವು ಸಹ ಮಹತ್ವದ ಯೋಜನೆಯಾಗಿದೆ. ಮಾನವ ಗಗನನೌಕೆಯಲ್ಲಿ ಗಗನಯಾತ್ರಿಗಳನ್ನು ಕಡಿಮೆ ಭೂಮಿಯ ಕಕ್ಷೆಗೆ ಕೊಂಡೊಯ್ಯುವಲ್ಲಿ ಈ ನೌಕೆಯು ಪ್ರಮುಖ ಪಾತ್ರ ವಹಿಸುತ್ತದೆ.
ಗಗನ್ಯಾನ್ ಬಾಹ್ಯಾಕಾಶ ನೌಕೆಯು ಒಟ್ಟು ಮೂರು ಗಗನಯಾತ್ರಿಗಳನ್ನು ಗಗನಯಾತ್ರಿಗಳ ಕ್ಯಾಪ್ಸುಲ್ ಬಗ್ಗೆ ಸಮುದ್ರದಲ್ಲಿಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದ್ದು, ಕಡಿಮೆ ಭೂಕಕ್ಷೆ ಮಟ್ಟ ಅಂದರೆ ನೆಲಮಟ್ಟದಿಂದ 400 ಕಿಲೋಮೀಟರ್ ಎತ್ತರದಲ್ಲಿ ಭೂಮಿಯನ್ನು ಸುತ್ತುತ್ತದೆ. ಈ ಮಧ್ಯೆ, ಸಿಇ20 ಕ್ರಯೋಜೆನಿಕ್ ಎಂಜಿನ್ (CE20 Cryogenic Engine) ಸಮುದ್ರ ಮಟ್ಟದ ಬಿಸಿ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿದೆ. ಚಂದ್ರಯಾನ-2 ಮತ್ತು ಚಂದ್ರಯಾನ-3 ನಂತಹ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಸಿಇ20 ಎಂಜಿನ್ ಇಸ್ರೋದ ಎಲ್ ವಿಎಮ್ 3 (Launch Vehicle Mark-III -LVM3) ಉಡಾವಣಾ ವಾಹನದ ಮೇಲಿನ ಹಂತಕ್ಕೆ ಶಕ್ತಿಯನ್ನು ನೀಡುತ್ತದೆ. ಹೀಗಾಗಿ ಮುಂಬರುವ ಗಗನ್ಯಾನ್ ಮಾನವ ಸಹಿತ ಬಾಹ್ಯಾಕಾಶಯಾನ ಯೋಜನೆಗೆ ಸಿಇ20 ಎಂಜಿನ್ ಅರ್ಹತೆ ಪಡೆದಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.