ಬೆಂಗಳೂರು, ಡಿ.11 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ವು ಮೈಸೂರು ರಸ್ತೆಯಲ್ಲಿರುವ ಕಣಿಮಿಣಿಕೆ ಬಡಾವಣೆ ಯಲ್ಲಿ ಡಿ.14ರಂದು ನಗರದ ನಾಗರೀಕರಿಗಾಗಿ ಫ್ಲ್ಯಾಟ್ ಗಳ ಮೇಳ ಆಯೋಜಿಸಿದೆ.
ಬೆಂಗಳೂರು- ಮೈಸೂರು ಹೆದ್ದಾರಿಯಿಂದ 1 ಕಿ.ಮೀ ದೂರವಿರುವ ಕಣಿಮಿಣಿಕೆ ವಸತಿ ಯೋಜನೆಗಳಲ್ಲಿ ಲಭ್ಯವಿರುವ 2 ಮತ್ತು 3 ಬಿಎಚ್‌ಕೆ ಫ್ಲ್ಯಾಟ್ ಗಳನ್ನು ಮತ್ತು ಜೆಪಿ ನಗರ ಒಂಭತ್ತನೇ ಹಂತದಲ್ಲಿರುವ ತಿಪ್ಪಸಂದ್ರ ವಸತಿ ಯೋಜನೆಗಳಲ್ಲಿ ಒಂದು ಬಿಎಚ್ ಕೆ ಫ್ಲಾಟ್ ಹಂಚಿಕೆ ಮಾಡಲು ಈ ಮೇಳವನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 9 ರಿಂದ 5ರವರೆಗೆ ಮೇಳ ನಡೆಯಲಿದೆ ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ.
ಕಣ್ ಮಿಣಿಕೆ ವಸತಿ ಯೋಜನೆಯು 1, 2, 3, 4 ಮತ್ತು 5ನೇ ಹಂತವನ್ನು ಒಳಗೊಂಡಿದೆ. ಫ್ಲ್ಯಾಟ್ ಖರೀದಿಸಲು ಬಯಸುವವರು ಠೇವಣಿ ಮೊತ್ತವನ್ನು ಡಿಡಿ ಅಥವಾ ಆನ್‌ಲೈನ್ ಮೂಲಕ ಪಾವತಿಸಿ ಸ್ಥಳದಲ್ಲಿಯೇ ತಾತ್ಕಾಲಿಕವಾದ ಹಂಚಿಕೆ ಪತ್ರವನ್ನು ಪಡೆಯಬಹುದು. ಮೇಳ ನಡೆಯುವ ಸ್ಥಳದಲ್ಲಿ ನಾನಾ ಬ್ಯಾಂಕ್‌ಗಳು ಸಾಲ ಸೌಲಭ್ಯ ನೀಡಲಿವೆ. ಗ್ರಾಹಕರು ಖಾಲಿಯಿರುವ ಫ್ಲ್ಯಾಟ್ ಗಳನ್ನು ಖರೀದಿ ಮಾಡಬಹುದು.
ಫ್ಲ್ಯಾಟ್‌ನ ಮಾರಾಟ ಮೊತ್ತದ ಮೇಲೆ ಮುಂಗಡವಾಗಿ ಶೇಕಡ 1 ರಷ್ಟು ನಿರ್ವಹಣಾ ಶುಲ್ಕ ಪಡೆಯಲಾಗುತ್ತದೆ. ಕಣಿಮಿಣಿಕೆ ವಸತಿ ಯೋಜನೆಗಳಲ್ಲಿ ಲಭ್ಯವಿರುವ 2 ಫ್ಲಾಟ್ ಬೆಲೆ ಅಳತೆಗೆ ಅನುಗುಣವಾಗಿ 25 ರಿಂದ 30 ಲಕ್ಷ ರೂ.ದರವಿದೆ ಮತ್ತು 3 ಬಿಎಚ್‌ಕೆ ಫ್ಲ್ಯಾಟ್ ಬೆಲೆ ಅಳತೆಗೆ ಅನುಗುಣವಾಗಿ 40 ರಿಂದ 64 ಲಕ್ಷ ರೂ. ದರ ನಿಗದಿಪಡಿಸಲಾಗಿದೆ. ತಿಪ್ಪಸಂದ್ರ ವಸತಿ ಯೋಜನೆಗಳಲ್ಲಿ ಒಂದು ಬಿಎಚ್ ಕೆ ಫ್ಲಾಟ್ ಬೆಲೆಯು 14.50 ರೂ. ದರದಲ್ಲಿ ಲಭ್ಯವಿರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಬೆಂಗಳೂರು ವೈರ್ ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ.