ಬೆಳಗಾವಿ, ಡಿ.09 www.bengaluruwire.com : ರಾಜ್ಯದಲ್ಲಿ ಸುಮಾರು ಶೇಕಡ 65 ರಿಂದ 75 ರಷ್ಟು ಜನಸಂಖ್ಯೆಗೆ ಬಿಪಿಎಲ್ ಕಾರ್ಡ್ (BPL Card) ಗಳನ್ನು ನೀಡಲಾಗಿದ್ದು ಅದನ್ನು ಪರಿಷ್ಕರಿಸಿಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣ ಗೊಂಡ ನಂತರ ನಿಜವಾದ ಕುಟುಂಬಕ್ಕೆ ಕಾರ್ಡ್ ವಿತರಿಸಲಾಗುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್ ಮುನಿಯಪ್ಪ ಹೇಳಿದ್ದಾರೆ.
ಬೆಳಗಾವಿ (Belagavi)ಯ ಸುವರ್ಣ ವಿಧಾನ ಸೌಧ ಸೋಮವಾರ, ವಿಧಾನ ಪರಿಷತ್ (Legislative Council) ನಲ್ಲಿ ವಿರೋದ ಪಕ್ಷದ ಸದಸ್ಯರು ರಾಜ್ಯದಲ್ಲಿನ ಬಿಪಿಎಲ್ ಪಡಿತರ ಕಾರ್ಡ್ ರದ್ದು ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಬಿಪಿಎಲ್ ಪಡಿತರ ಕಾರ್ಡ್ ಗಳಲ್ಲಿ ಅನರ್ಹ ಫಲಾನುಭವಿಗಳ ಪತ್ತೆಹಚ್ಚಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ನಮ್ಮ ಅಧಿಕಾರಿಗಳು ಪರಿಪಕ್ವವಾದ ಅಂಕಿ ಅಂಶಗಳನ್ನು ಗುರುತಿಸಿ ನಂತರ ಅರ್ಹರಿಗೆ ಬಿಪಿಎಲ್ ಪಡಿತರ ಕಾರ್ಡ್ ವಿತರಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಪ್ರಸ್ತುತ ಈಗಿರುವ ಬಿಪಿಎಲ್ ಕಾರ್ಡ್ ಗಳಲ್ಲಿ ಶೇಕಡಾ 20 ರಷ್ಟು ಕಾರ್ಡ್ ಗಳು ಎಪಿಎಲ್ (APL) ನವರು ಸೇರಿದ್ದಾರೆ ಎಂದು ಅಂದಾಜಿಸಲಾಗಿದ್ದು ಇದನ್ನು ಅತಿ ಶೀಘ್ರದಲ್ಲಿ ಪರಿಷ್ಕರಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕೇಂದ್ರ ಸರ್ಕಾರದ ಮಾನದಂಡಗಳ ಅಡಿಯಲ್ಲಿ ಪಡಿತರ ಕಾರ್ಡ್ ಗಳನ್ನು ನಾವು ಪರಿಷ್ಕರಣೆ ಮಾಡಲು ಮುಂದಾದಾಗ ಕೆಲವು ಗೊಂದಲಗಳಿಂದ ನಾವು ಅದನ್ನು ತಡೆಹಿಡಿದಿದ್ದೇವೆ. ಅರ್ಹರ ಬಿಪಿಎಲ್ ಪಡಿತರ ಕಾರ್ಡ್ ದಾರರ ಯಾವುದೇ ಕಾರ್ಡ್ ಗಳು ರದ್ದಾಗದಂತೆ ಅಧಿಕಾರಿಗಳಿಗೆ ಸೂಚಿಸಿ, ರದ್ದಾದ ಬಿಪಿಎಲ್ ಕಾರ್ಡ್ ಗಳನ್ನು ಪುನರ್ ಸ್ಥಾಪಿಸಲಾಯಿತು. ನೈಜ ಹಾಗೂ ಅರ್ಹರಿಗೆ ಇಲಾಖೆಯ ಪ್ರಕ್ರಿಯೆ ಪೂರ್ಣ ಗೊಂಡ ನಂತರ ನಿಜವಾದ ಅರ್ಹತೆ ಹೊಂದಿದ ಕುಟುಂಬಕ್ಕೆ ಪಡಿತರ ಚೀಟಿ ವಿತರಿಸಲಾಗುತ್ತದೆ. ಅರ್ಹರಿಗೆ ತೊಂದರೆಯಾಗದಂತೆ ಜಾಗ್ರತೆ ವಹಿಸಿ ನೀಡಲಾಗುವುದು ಎಂದು ಸದನದಲ್ಲಿ ಉತ್ತರಿಸಿದರು.
![](https://i0.wp.com/bengaluruwire.com/wp-content/uploads/2024/01/WIRE.jpeg?fit=1280%2C901&ssl=1)
Key words : BPL Cardholders, Eligibility Criteria, Welfare Benefits, Application Process, What are the eligibility criteria for a BPL card in Karnataka?