ಬೆಂಗಳೂರು, ಡಿ.2 www.bengaluruwire.com : ಶಬರಿಮಲೆ ದೇವಸ್ಥಾನ (Sabarimala Temple) ಯಾತ್ರಾರ್ಥಿಗಳ ಅನುಕೂಲಕ್ಕಾಗಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನ.29 ರಿಂದಲೇ ಬೆಂಗಳೂರು ಮತ್ತು ಕೇರಳದ ಪಂಪಾ ನಡುವೆ ಐರಾವತ ವೋಲ್ವೋ (Airavata Volvo) ಬಸ್ ಸೇವೆಯನ್ನು ಆರಂಭಿಸಿದೆ.
ಬೆಂಗಳೂರಿನಿಂದ ಐರಾವತ ವೋಲ್ವೋ ಸೇವೆಯು ಶಾಂತಿನಗರ ಬಸ್ ನಿಲ್ದಾಣ ಮತ್ತು ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮಧ್ಯಾಹ್ನ 01.50 ಮತ್ತು ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ 2.20 ಕ್ಕೆ ಹೊರಟು ಮರುದಿನ ಬೆಳಿಗ್ಗೆ 6.45 ಕ್ಕೆ ನಿಲಕ್ಕಲ್ ಬಸ್ ನಿಲ್ದಾಣವನ್ನು ತಲುಪುತ್ತದೆ.
ಈ ಸೇವೆಗಾಗಿ ಪ್ರಯಾಣಿಕರು ಮೈಸೂರಿನಿಂದಲೂ ಟಿಕೆಟ್ ಕಾಯ್ದಿರಿಸಬಹುದು. ಮೈಸೂರಿನಿಂದ ಮೇಲೆ ತಿಳಿಸಿದ ಸೇವೆಗಳ ವಿವರಗಳು ಈ ಕೆಳಕಂಡಂತಿದೆ :
* ಐರಾವತ್ ವೋಲ್ವೋ ಮೈಸೂರಿನಿಂದ ಕೇರಳದ ನಿಲಕ್ಕಲ್ ನತ್ತ ಹೊರಡುವ ಸಮಯ – ಸಂಜೆ 05.10
* ನಿಲಕ್ಕಲ್ನಿಂದ (ಪಂಪಾ ಶಬರಿಮಲೆ) ಐರಾವತ್ ವೋಲ್ವೋ ಸೇವೆಯು ಪ್ರತಿದಿನ ಸಂಜೆ 06.00 ಗಂಟೆಗೆ ಹೊರಡುತ್ತದೆ ಮತ್ತು ಮರುದಿನ 10.00 ಗಂಟೆಗೆ ಬೆಂಗಳೂರನ್ನು ತಲುಪುತ್ತದೆ.
ನೆರೆಯ ರಾಜ್ಯಗಳಲ್ಲಿನ ಖಾಸಗಿ ಬುಕಿಂಗ್ ಕೌಂಟರ್ಗಳಲ್ಲದೆ, ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಬುಕಿಂಗ್ ಕೌಂಟರ್ಗಳಲ್ಲಿ ಟಿಕೆಟ್ಗಳನ್ನು ಬುಕ್ ಮಾಡಬಹುದು. ವೆಬ್ಸೈಟ್:-https://www.ksrtc.in/ ಹಾಗೂ ಹೆಚ್ಚಿನ ಮಾಹಿತಿಗೆ ಕೇರಳದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ ಸಂಪರ್ಕ ಅಧಿಕಾರಿ ಪ್ರಶಾಂತ್.ಜಿ ಅವರ ಮೊಬೈಲ್ ನಂಬರ್ 09539037179 ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.