ನವದೆಹಲಿ, ನ.24 www.bengaluruwire.com : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ನಾಗರೀಕರನ್ನು ಉದ್ದೇಶಿಸಿ ತಮ್ಮ ಮನ್ ರಿ ಬಾತ್ 116ನೇ ಸಂಚಿಕೆಯಲ್ಲಿ, ಭಾರತದಲ್ಲಿ ಕ್ಷೀಣಿಸುತ್ತಿರುವ ಗುಬ್ಬಚ್ಚಿಗಳ ಸಂತತಿಯನ್ನು ಉದ್ದೇಶಿಸಿ ಭಾನುವಾರ ಮಾತನಾಡಿ, ಪಕ್ಷಿಗಳ ಸಂತತಿಯನ್ನು ಪುನರುಜ್ಜೀವನಗೊಳಿಸಲು ಕೈಗೊಂಡಿರುವ ವಿಶಿಷ್ಟ ಪ್ರಯತ್ನಗಳ ಬಗ್ಗೆ ಅವರು ಬೆಳಕು ಚೆಲ್ಲಿದರು.
“ಬಾಲ್ಯದಲ್ಲಿ ನಾವು ನಮ್ಮ ಮನೆಯ ಛಾವಣಿಯ ಮೇಲೆ ಗುಬ್ಬಚ್ಚಿಗಳನ್ನು ನೋಡುತ್ತಿದ್ದೆವು, ಅವು ಜೀವವೈವಿಧ್ಯತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ, ನಗರೀಕರಣದ ಹೆಚ್ಚಳದಿಂದಾಗಿ ನಾವು ನಗರಗಳಲ್ಲಿ ಗುಬ್ಬಚ್ಚಿಯನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಇಂದಿನ ಪೀಳಿಗೆಯ ಅನೇಕ ಮಕ್ಕಳು ಗುಬ್ಬಚ್ಚಿಗಳನ್ನು ನೋಡಿದ್ದಾರೆ. ಅಂತಹ ಮಕ್ಕಳ ಜೀವನದಲ್ಲಿ ಈ ಸುಂದರ ಪಕ್ಷಿಯನ್ನು ಮರಳಿ ತರಲು ಕೆಲವು ವಿಶಿಷ್ಟ ಪ್ರಯತ್ನಗಳನ್ನು ಮಾಡಲಾಗುತ್ತಿದೆ” ಎಂದು ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಗುಬ್ಬಚ್ಚಿಗಳಿಗಾಗಿ 10 ಸಾವಿರ ಮರದ ಗೂಡು :
ಚೆನ್ನೈನ ಕುಡುಗಲ್ ಟ್ರಸ್ಟ್‌ನ ಉದಾಹರಣೆಯನ್ನು ಉಲ್ಲೇಖಿಸಿದ ಪ್ರಧಾನಿ, ಈ ಸಂಸ್ಥೆಯು ತನ್ನ ಪ್ರಯತ್ನಗಳ ಮೂಲಕ ಈ ಪ್ರದೇಶದಲ್ಲಿ ಗುಬ್ಬಚ್ಚಿಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಈ ಸಂಸ್ಥೆಯು ಗುಬ್ಬಚ್ಚಿಗಳಿಗೆ ಸಣ್ಣ ಮರದ ಮನೆಯನ್ನು ಮಾಡಲು ಮಕ್ಕಳಿಗೆ ತರಬೇತಿ ನೀಡುತ್ತಿದೆ ಮತ್ತು ಕಳೆದ 4 ವರ್ಷಗಳಲ್ಲಿ ಆ ಟ್ರಸ್ಟ್ ನಲ್ಲಿ ತರಬೇತಿ ಪಡೆದ ಮಕ್ಕಳು ಅಂತಹ 10,000 ಗೂಡುಗಳನ್ನು ಮಾಡಿದ್ದಾರೆ ಎಂಬ ಮಾಹಿತಿ ತಿಳಿಸಿದರು.
ಗುಬ್ಬಚ್ಚಿಗಳ ಸಂಖ್ಯೆಯನ್ನು ಹೆಚ್ಚಿಸಲು ಚೆನ್ನೈನ ಕುಡುಗಲ್ ಟ್ರಸ್ಟ್ ತನ್ನ ಅಭಿಯಾನದಲ್ಲಿ ಶಾಲಾ ಮಕ್ಕಳನ್ನು ತೊಡಗಿಸಿಕೊಂಡಿದೆ. ಗುಬ್ಬಚ್ಚಿಗಳು ದೈನಂದಿನ ಜೀವನದಲ್ಲಿ ಬಹಳ ಮುಖ್ಯ ಎಂದು ಸಂಸ್ಥೆಯ ಜನರು ಶಾಲೆಯ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಈ ಸಂಸ್ಥೆಯು ಗುಬ್ಬಚ್ಚಿಗಳ ಗೂಡು ಮಾಡಲು ಮಕ್ಕಳಿಗೆ ತರಬೇತಿ ನೀಡುತ್ತಿದೆ. ಚಿಕ್ಕ ಮರದ ಮನೆಯನ್ನು ಮಾಡಲು ಮಕ್ಕಳಿಗೆ ಕಲಿಸಿದರು. ಇದಲ್ಲದೆ ಗುಬ್ಬಚ್ಚಿಗಳ ಜೀವನ ಮತ್ತು ಆಹಾರ ನೀಡುವ ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ಇದರಿಂದಾಗಿ 4 ವರ್ಷಗಳಲ್ಲಿ ಅಂತಹ 10,000 ಗೂಡುಗಳನ್ನು ನಿರ್ಮಿಸಲಾಗಿದೆ. ಹೀಗಾಗಿ ಗುಬ್ಬಚ್ಚಿಗಳ ಸಂಖ್ಯೆಯು ಈ ಪ್ರದೇಶದಲ್ಲಿ ಗಮನಾರ್ಹವಾಗಿ ಹೆಚ್ಚುತ್ತಿದೆ” ಎಂದರು.
ಮೈಸೂರಿನಲ್ಲಿ ಮಕ್ಕಳಿಗಾಗಿ ಪಕ್ಷಿಗಳ ಬಗ್ಗೆ ಜಾಗೃತಿ ಅಭಿಯಾನ :
ಕರ್ನಾಟಕದ ಮೈಸೂರಿನಲ್ಲಿರುವ ಸಂಸ್ಥೆಯೊಂದು ಮಕ್ಕಳಿಗಾಗಿ ‘ಅರ್ಲಿ ಬರ್ಡ್’ ಎಂಬ ಅಭಿಯಾನ ಆರಂಭಿಸಿದೆ. ಈ ಸಂಸ್ಥೆಯು ಮಕ್ಕಳಿಗೆ ಪಕ್ಷಿಗಳ ಬಗ್ಗೆ ತಿಳಿಸಲು ವಿಶೇಷ ರೀತಿಯ ಗ್ರಂಥಾಲಯವನ್ನು ನಡೆಸುತ್ತಿದೆ. ಇಷ್ಟು ಮಾತ್ರವಲ್ಲದೆ ಮಕ್ಕಳಲ್ಲಿ ನಿಸರ್ಗದ ಬಗೆಗಿನ ಜವಾಬ್ದಾರಿ ಪ್ರಜ್ಞೆ ಮೂಡಿಸಲು ‘ನೇಚರ್ ಎಜುಕೇಶನ್ ಕಿಟ್’ ಸಿದ್ಧಪಡಿಸಲಾಗಿದೆ. ಅಂತಹ ಜವಾಬ್ದಾರಿಗಳನ್ನು ಮತ್ತು ಮಾಹಿತಿಯನ್ನು ಮಕ್ಕಳಲ್ಲಿ ತುಂಬಲು ನೀವು ಅಂತಹ ಪ್ರಯತ್ನಗಳನ್ನು ಮಾಡಬಹುದು” ಎಂದು ಗುಬ್ಬಚ್ಚಿಗಳ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ನಾಗರೀಕರು ಕೈಗೊಳ್ಳಲು ಪ್ರಧಾನಿ ಹುರಿದುಂಬಿಸಿದರು.
‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನದಡಿ 100 ಕೋಟಿ ಗಿಡ :
‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನದ ಯಶಸ್ಸನ್ನು ಎತ್ತಿ ಹಿಡಿದ ಅವರು, ಈ ಅಭಿಯಾನದ ಅಡಿಯಲ್ಲಿ ಕೇವಲ ಐದು ತಿಂಗಳಲ್ಲಿ ದೇಶವು ಸುಮಾರು 100 ಕೋಟಿ ಗಿಡಗಳನ್ನು ನೆಟ್ಟಿದೆ ಎಂದು ಹೇಳಿದರು.
ಗಯಾನಾದಲ್ಲಿ ಜನರು ಈ ಅಭಿಯಾನದಲ್ಲಿ ಭಾಗವಹಿಸುತ್ತಿರುವುದನ್ನು ಕಂಡು ‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನವು ಜಾಗತಿಕ ಮಟ್ಟದಲ್ಲಿ ಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ ಹೇಳಿದರು. ಗಯಾನಾ ಅಧ್ಯಕ್ಷ ಇರ್ಫಾನ್ ಅಲಿ, ಅವರ ಅತ್ತೆ ಮತ್ತು ಇತರ ಕುಟುಂಬ ಸದಸ್ಯರು ಈ ಅಭಿಯಾನದಲ್ಲಿ ಭಾಗವಹಿಸಿದ್ದರು ಎಂದು ಅವರು ಹೇಳಿದರು.
ಗಯಾನಾ ರಾಷ್ಟ್ರದಲ್ಲೂ ಸದ್ದು ಮಾಡಿದ ಅಭಿಯಾನ :
“ಕೆಲವು ತಿಂಗಳ ಹಿಂದೆ, ನಾವು ‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಮತ್ತು ರಾಷ್ಟ್ರದಾದ್ಯಂತ ಜನರು ಉತ್ಸಾಹದಲ್ಲಿ ಇದರಲ್ಲಿ ಪಾಲ್ಗೊಂಡರು. ಈ ಯೋಜನೆಯಡಿ ನಾವು 100 ಕೋಟಿ ಗಿಡಗಳನ್ನು ನೆಟ್ಟಿದ್ದೇವೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ, ಕೇವಲ 5 ತಿಂಗಳಲ್ಲಿ ಇದು ಸಾಧ್ಯವಾಗಿದೆ. ಗಯಾನಾ ಅಧ್ಯಕ್ಷ ರಲ್ಲೂ ಇರ್ಫಾನ್ ಅಲಿ, ಅವರ ಅತ್ತೆ ಮತ್ತು ಕುಟುಂಬದ ಇತರ ಸದಸ್ಯರು ಈ ಅಭಿಯಾನದಲ್ಲಿ ಭಾಗವಹಿಸಿದ್ದರು. ‘ಏಕ್ ಪೆಡ್ ಮಾ ಕೆ ನಾಮ್’ ಸಾಕಷ್ಟು ಪ್ರಚಾರವಾಗುತ್ತಿದೆ ಎಂದು ನೀವು ತಿಳಿದಾಗ ಹೆಮ್ಮೆ ಪಡುತ್ತೀರಿ” ಎಂದು ‘ಮನ್ ಕಿ ಬಾತ್’ ನ 116 ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.
ಈ ಅಭಿಯಾನದಡಿಯಲ್ಲಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ಒಂದೇ ದಿನದಲ್ಲಿ 12 ಲಕ್ಷ ಗಿಡಗಳನ್ನು ಮತ್ತು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಕೇವಲ 1 ಗಂಟೆಯಲ್ಲಿ 25,000 ಗಿಡಗಳನ್ನು ನೆಡುವುದು ಸೇರಿದಂತೆ ಹಲವಾರು ದಾಖಲೆಗಳನ್ನು ರಚಿಸಲಾಗಿದೆ ಎಂದು ಪ್ರಧಾನಿ ವಿವರಿಸಿದರು. ವಿವಿಧ ಸಾಮಾಜಿಕ ಸಂಘಟನೆಗಳ ಉದಾಹರಣೆಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಈ ಅಭಿಯಾನವು ರಾಷ್ಟ್ರದ ಹಲವಾರು ಭಾಗಗಳಲ್ಲಿ ನಡೆಯುತ್ತಿದೆ. ಬಿಹಾರದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಸ್ವಸಹಾಯ ಗುಂಪು ಜೀವಿಕಾ, ಭವಿಷ್ಯದಲ್ಲಿ ಆರ್ಥಿಕ ಚಟುವಟಿಕೆಗೆ ಕಾರಣವಾಗುವ ನಿಟ್ಟಿನಲ್ಲಿ 75 ಲಕ್ಷ ಫಲ ನೀಡುವ ಗಿಡಗಳನ್ನು ನೆಡುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಇಂದೋರ್ ನಲ್ಲಿ 24 ಗಂಟೆಗಳಲ್ಲಿ 12 ಲಕ್ಷ ಗಿಡ ನೆಟ್ಟು ದಾಖಲೆ ನಿರ್ಮಾಣ :
ಈ ಅಭಿಯಾನದ ಅಡಿಯಲ್ಲಿ ಒಬ್ಬ ವ್ಯಕ್ತಿಯು ತನ್ನ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡಬಹುದು. ರಾಷ್ಟ್ರದ ವಿವಿಧ ಭಾಗಗಳಲ್ಲಿ ಈ ಅಭಿಯಾನ ನಡೆಯುತ್ತಿದೆ, ಮಧ್ಯಪ್ರದೇಶದ ಇಂದೋರ್‌ನಲ್ಲಿ ಕೇವಲ 24 ಗಂಟೆಗಳಲ್ಲಿ 12 ಲಕ್ಷ ಗಿಡಗಳನ್ನು ನೆಟ್ಟು ದಾಖಲೆ ನಿರ್ಮಿಸಲಾಗಿದೆ. ಈ ಅಭಿಯಾನದಿಂದಾಗಿ ಮಧ್ಯಪ್ರದೇಶದ ಇಂದೋರ್‌ನ ರೇವತಿ ಬೆಟ್ಟಗಳ ಬರಡು ಭೂಮಿ ಮುಂದೆ ಹಸಿರು ಹೊದಿಕೆಯ ಪ್ರದೇಶವಾಗಿ ಬದಲಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನದ ಅಡಿಯಲ್ಲಿ ಜೈಸಲ್ಮೇರ್‌ನಲ್ಲಿ 25,000 ಗಿಡಗಳನ್ನು ನೆಟ್ಟು ಇಲ್ಲಿನವರು ಬೇರೆಯವರಿಗೂ ಪ್ರೇರಣೆಯಾಗಿದ್ದಾರೆ. ‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನದಡಿ ಹಲವಾರು ಸ್ಥಳಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ವಿವಿಧ ಸಾಮಾಜಿಕ ಸಂಸ್ಥೆಗಳು, ಗಿಡಗಳನ್ನು ನೆಡುತ್ತಿವೆ, ಈ ಮೂಲಕ ಅವರು ಪರಿಸರಕ್ಕೆ ಅನುಗುಣವಾಗಿ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗೆಯೇ ಬಿಹಾರದಲ್ಲಿ ಜೀವಿಕಾ ಸ್ವಸಹಾಯ ಗುಂಪಿನ ಮಹಿಳೆಯರು 75 ಲಕ್ಷ ಫಲ ನೀಡುವ ಗಿಡಗಳನ್ನು ನೆಡಲು ಪ್ರಚಾರ ಮಾಡುತ್ತಿದ್ದಾರೆ” ಎಂದು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು.
ಇದಲ್ಲದೆ, ಸ್ವಚ್ಛ ಭಾರತ ಅಭಿಯಾನದಲ್ಲಿ ಯುವಕರ ಕೊಡುಗೆಯ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಅವರು ನಿಷ್ಪ್ರಯೋಜಕವೆಂದು ಪರಿಗಣಿಸಿದ ವಸ್ತುಗಳಿಂದ ಉಪಯುಕ್ತ ವಸ್ತುಗಳನ್ನು ತಯಾರಿಸುತ್ತಿರುವುದರಿಂದ ಅವರು “ತ್ಯಾಜ್ಯವನ್ನು ಚಿನ್ನವಾಗಿ ಪರಿವರ್ತಿಸುತ್ತಿದ್ದಾರೆ” ಎಂದು ಹೇಳಿದರು.