ಬೆಂಗಳೂರು, ನ.15 www.bengaluruwire.com : ಸಭೆ ಸಮಾರಂಭ, ಜಾತ್ರೆ ಹಾಗೂ ಜನಸಂದಣಿ ಇರುವ ಕಡೆಗಳಲ್ಲಿ ಮೊಬೈಲ್ ಫೋನ್‌ಗಳನ್ನು ಕಳವು ಮಾಡುತ್ತಿದ್ದ ಹಾಗೂ ಅದನ್ನು ಪಡೆಯುತ್ತಿದ್ದವರ ಪೈಕಿ ಇಬ್ಬರನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 10.50 ಲಕ್ಷ ಮೌಲ್ಯದ 52 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಗುಡ್‌ವಿಲ್ ಅಪಾರ್ಟ್ ಮೆಂಟ್ ವೊಂದರಲ್ಲಿ ಡಿ.ಟಿ.ಡಿ.ಸಿ ಕೊರಿಯರ್ ಶಾಖೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುವ ವ್ಯಕ್ತಿ, ತಮ್ಮ ಸಂಸ್ಥೆಯ ಕೊರಿಯರ್ ಮೂಲಕ ಅಪರಿಚಿತ ವ್ಯಕ್ತಿಯೊಬ್ಬರು ಕೇರಳಕ್ಕೆ ಪಾರ್ಸೆಲ್ ಮಾಡಿದ್ದರು. ಆ ಬಾಕ್ಸ್ ಅನ್ನು ಯಾರೂ ಸ್ವೀಕರಿಸದೆ ಪುನಃ ಡಿ.ಟಿ.ಡಿ.ಸಿ ಕಚೇರಿಗೆ ವಾಪಸ್ ಬಂದಿತ್ತು. ವಾಪಸ್ ಬಂದ ಪಾರ್ಸಲ್ ಅನ್ನು ಯಾರೂ ಸ್ವೀಕರಿಸಿದ ಕಾರಣ ಡಿಟಿಡಿಸಿ ಸಂಸ್ಥೆಯ ಮ್ಯಾನೇಜರ್ ಬಾಕ್ಸ್ ತೆಗೆದು ನೋಡಿದಾಗ ಅದರಲ್ಲಿ 12 ಮೊಬೈಲ್ ಫೋನ್ ಇರುವುದು ಪತ್ತೆಯಾಗಿತ್ತು. ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಗೆ ಅ.24ರಂದು ದೂರು ನೀಡಿದ್ದರು.
ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ ಅ.30 ರಂದು ಭದ್ರಾವತಿಯಲ್ಲಿರುವ ಬಸವೇಶ್ವರ ಸರ್ಕಲ್ ಬಳಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಮೊಬೈಲ್ ಫೋನ್‌ಗಳನ್ನು ಡಿ.ಟಿ.ಡಿ.ಸಿ ಕೊರಿಯರ್ ಕೇರಳ ಮಾಡಿರುವುದಾಗಿ ಮೂಲಕ ಕೇರಳ ರಾಜ್ಯಕ್ಕೆ ಪಾರ್ಸಲ್ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ.
ಆರೋಪಿಯ ನಾಲ್ವರು ಸಹಚರರು ಸಭೆ ಸಮಾರಂಭ, ಜಾತ್ರೆ ಹಾಗೂ ಹೆಚ್ಚಿನ ಜನಸಂದಣಿ ಇರುವ ಕಡೆಗಳಲ್ಲಿ ಮೊಬೈಲ್ ಫೋನ್‌ಗಳನ್ನು ಕಳವು ಮಾಡಿಕೊಂಡು ಬಂದು ಆರೋಪಿಗೆ ನೀಡುತ್ತಿದ್ದು, ಆರೋಪಿಯು ಹೊರರಾಜ್ಯಗಳಿಗೆ ಮಾರಾಟ ಮಾಡುವ ಸಲುವಾಗಿ ಕೊರಿಯರ್ ಮೂಲಕ ಪಾರ್ಸಲ್ ಮಾಡುತ್ತಿದ್ದುದ್ದಾಗಿ ತಿಳಿಸಿರುತ್ತಾನೆ. ಹಾಗೂ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡಿದ್ದ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ನೀಡಿರುತ್ತಾನೆ.
ನ.03 ರಂದು ಮೊದಲ ಆರೋಪಿಯು ವಾಸವಿದ್ದ ಭದ್ರಾವತಿಯ ಭೋವಿ ಕಾಲೋನಿಯ ವಾಸದ ಮನೆಯಿಂದ 10 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಯಿತು. ಮೊಬೈಲ್ ಮಾರಾಟ ಮಾಡುತ್ತಿದ್ದ ಆರೋಪಿಯು ನೀಡಿದ ಮಾಹಿತಿ ಮೇರೆಗೆ ನ.07 ರಂದು ಕೇರಳ ರಾಜ್ಯದ ಕೊಂಡುಪರಂಬಿಲ್ ನಲ್ಲಿ ಮೊಬೈಲ್ ಫೋನ್‌ಗಳನ್ನು ಸ್ವೀಕರಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಆತನು ಹೊಂದಿದ್ದ ಮೊಬೈಲ್ ಅಂಗಡಿಯಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು. ಆ ವ್ಯಕ್ತಿಯು ಮೊಬೈಲ್ ಫೋನ್‌ಗಳನ್ನು ಸ್ವೀಕರಿಸುತ್ತಿದ್ದುದ್ದಾಗಿ ತಫ್ಪೊಪ್ಪಿಕೊಂಡಿರುತ್ತಾನೆ. ಹಾಗೂ ಸ್ವೀಕರಿಸಿದ ಮೊಬೈಲ್ ಫೋನ್‌ಗಳು ತನ್ನ ಅಂಗಡಿಯಲ್ಲಿರುವುದಾಗಿ ತಿಳಿಸಿದ್ದು, ಆತನಿಂದ 30 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣದ ಆರೋಪಿಗಳಿಬ್ಬರ ವಶದಿಂದ ಒಟ್ಟಾರೆ ₹ 10,50,000 ರೂಮ ಮೌಲ್ಯದ 52 ವಿವಿಧ ಕಂಪನಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಮೊಬೈಲ್ ಫೋನ್ ಗಳನ್ನು ಕಳವು ಮಾಡಿಕೊಂಡು ಬಂದು ಕೊಡುತ್ತಿದ್ದ ಸಹಚರರು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರೆದಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.