ಶ್ರೀನಗರ, ನ.10 www.bengaluruwire.com : ಹಿಮಾಲಯದ ತಪ್ಪಲಿನ ಕಾಶ್ಮೀರ (Kashmir) ದ ಕಣಿವೆ ಪ್ರದೇಶದಲ್ಲಿ ಈಗ ಕೇಸರಿ ಹೂವಿ (Saffron Flower) ನ ಅರಳುವ ಕಾಲವಾದ್ದರಿಂದ, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿರುವ ಪಾಂಪೋರ್ (Pampore) ಪ್ರದೇಶ ಅಕ್ಷರಶಃ ಕಡುಗೆಂಪು, ಹಳದಿ ಮತ್ತು ನೇರಳೆ ವರ್ಣದ ಕೇಸರಿ ಬಣ್ಣದ ಹೂಗಳನ್ನು ಹೊದ್ದು ನಿಂತಿದೆ. ಇಲ್ಲಿನ ಕಣ್ಮನ ಸೆಳೆಯುವ ಭೂದೃಶ್ಯ ಪ್ರವಾಸಿಗರನ್ನು ಸೆಳೆಯುತ್ತಿವೆ.
ಕೇಸರಿಯ ಹೂವು ಅರಳುತ್ತಿದ್ದಂತೆ ಪಾಂಪೋರ್‌ನ ಕೇಸರಿ ಹೂ ಬೆಳೆಯುವ ಕೃಷಿಭೂಮಿಯತ್ತ ನೂರಾರು ಪ್ರವಾಸಿಗರು ಬರಲಾರಂಭಿಸಿದ್ದಾರೆ ಎಂದು ಕೆಎನ್ ಒ ಮಾಧ್ಯಮ ಸಂಸ್ಥೆ ವರದಿ ಮಾಡಿದೆ. “ಕಳೆದ ವಾರದಿಂದ ಪ್ರವಾಸಿಗರು ಹೊಲಗಳಿಗೆ ಬರಲು ಪ್ರಾರಂಭಿಸಿದ್ದಾರೆ, ಲೆಕ್ಕವಿಲ್ಲದಷ್ಟು ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ಮಳೆಯು ರೋಮಾಂಚಕ ರೀತಿಯಲ್ಲಿ ಕೇಸರಿ ಹೂ ಬಿಡಲು ಕೊಡುಗೆ ನೀಡಿದೆ ಮತ್ತು ಪ್ರವಾಸಿಗರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ” ಎಂದು ಸ್ಥಳೀಯರಾದ ಮನ್ಸೂರ್ ಅಹ್ಮದ್ ತಿಳಿಸಿದ್ದಾರೆ.
ಪ್ರವಾಸಿಗರು ದಾಲ್ ಸರೋವರ, ಪಹಲ್ಗಾಮ್ ಮತ್ತು ಗುಲ್ಮಾರ್ಗ್ ನಲ್ಲಿ ನೆನಪುಗಳನ್ನು ಸೆರೆಹಿಡಿಯುವಂತೆಯೇ, ಕೇಸರಿ ಕ್ಷೇತ್ರಗಳ ಸೌಂದರ್ಯ ಮತ್ತು ಪರಿಮಳಕ್ಕೆ ಅನೇಕರು ಮಾರು ಹೋಗಿದ್ದಾರೆ. ಈ ಬಗ್ಗೆ ಮತ್ತೊಬ್ಬ ಸ್ಥಳೀಯ ಅಬ್ದುಲ್ ಹಮೀದ್, “ಕೇಸರಿ ಹೂವಿನ ಆಹ್ಲಾದಕರವಾದ ಪರಿಮಳವು ಪ್ರವಾಸಿಗರು ಸ್ಥಳದಲ್ಲೇ ಕೇಸರಿ ಖರೀದಿಸಲು ಪ್ರೋತ್ಸಾಹಿಸುತ್ತದೆ ಎಂದು ಹೇಳಿದ್ದಾರೆ.
ಕಾಶ್ಮೀರಕ್ಕೆ ಭೇಟಿ ನೀಡುವುದು ಮತ್ತು ಕೇಸರಿ ಗದ್ದೆಗಳಲ್ಲಿ ಕಾಲ ಕಳೆಯುವುದು ಕನಸಿನ ಮಾತಾಗಿದೆ ಎಂದು ಗುಜರಾತ್‌ನ ಪ್ರವಾಸಿ ಹಿತೇಶ್ ಹೇಳಿದರು. ಇತರ ಪ್ರವಾಸಿಗರು ಪ್ರಪಂಚದ ಅತ್ಯಂತ ದುಬಾರಿ ಮಸಾಲೆ ಹೂವುಗಳನ್ನು ವೀಕ್ಷಿಸುವುದು ಅಪರೂಪದ ಅನುಭವ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಕೇಸರಿ ಗದ್ದೆಗಳಲ್ಲಿ ಹೂವುಗಳು ಅರಳಿ ನಿಂತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೂ ಬಿಡುವ ನಿರೀಕ್ಷೆ ಇದೆ ಎನ್ನುತ್ತಾರೆ ಸ್ಥಳೀಯ ಬೆಳೆಗಾರರು. ರೈತರು ಬೆಳೆ ಇಳುವರಿಯನ್ನು ಹೆಚ್ಚಿಸಲು ಸುಧಾರಿತ ನೀರಾವರಿ ಸೌಲಭ್ಯಗಳನ್ನು ಮುಂದುವರೆಸಿದ್ದಾರೆ. ಸಾವಿರಾರು ಪ್ರವಾಸಿಗರ ಆಗಮನದ ಮಧ್ಯೆ, ಹಲವಾರು ಸ್ಥಳೀಯ ಯುವಕರು ಹೊಲಗಳಿಂದ ನೇರವಾಗಿ ಶುದ್ಧ ಕೇಸರಿಯನ್ನು ಮಾರಾಟ ಮಾಡುತ್ತಾರೆ.
ಪ್ರವಾಸಿಗರು ಕೇಸರಿ ಖರೀದಿಸಲು ಆಸಕ್ತಿ ವ್ಯಕ್ತಪಡಿಸಲು ಹೂವುಗಳನ್ನು ಸೂಕ್ತ ರೀತಿ ಒಣಗಿಸುವುದು ಸೇರಿದಂತೆ ಸರಿಯಾದ ಸಂಸ್ಕರಣೆ ಅಗತ್ಯವಿದೆ ಎಂದು ಸ್ಥಳೀಯ ಮಾರಾಟಗಾರ ಮೊಹಮ್ಮದ್ ಅಬ್ಬಾಸ್ ಹೇಳಿದ್ದಾರೆ. ಅಲ್ಲದೆ ಪ್ರವಾಸಿಗರಿಗೆ ಸ್ಥಳಾವಕಾಶ ಕಲ್ಪಿಸಲು, ಸುಲಭವಾಗಿ ಸ್ಥಳಕ್ಕೆ ಪ್ರವೇಶಿಸಲು ಅನುವಾಗುವಂತೆ, ಶುದ್ಧ ಕೇಸರಿಯನ್ನು ಮುಂಚಿತವಾಗಿ ಸಿದ್ಧಪಡಿಸಿಟ್ಟುಕೊಂಡಿರುತ್ತಾರೆ.
ಕೇಸರಿ ಹೂ ಬಿಡುವ ಗದ್ದೆಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದನ್ನೇ ಬಂಡವಾಳ ಮಾಡಿಕೊಂಡು, ಕೇಸರಿ ಮಾರಾಟ ಮಾಡಲು ವಿದ್ಯಾವಂತ ಯುವಕರು ಆಸಕ್ತಿ ತೋರುತ್ತಿದ್ದಾರೆ. ಅಂತಹ ಅನೇಕ ವಿದ್ಯಾವಂತ ಯುವಕರಲ್ಲಿ ಅಬ್ಬಾಸ್ ಕೂಡ ಸೇರಿದ್ದಾರೆ.