ಬೆಂಗಳೂರು, ನ.05 www.bengaluruwire.com : ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ತಾರಕಕ್ಕೇರಿದೆ. ರೈತರು, ಸಾರ್ವಜನಿಕರು ಮಠಾಧೀಶರುಗಳು, ವಿಪಕ್ಷಗಳು ಸರ್ಕಾರದ ಕ್ರಮವನ್ನು ತೀಕ್ಷ್ಣವಾಗಿ ವಿರೋಧಿಸುತ್ತಿರುವ ಮಧ್ಯೆಯೇ ವಕ್ಫ್ ಜಂಟಿ ಸಂಸದೀಯ ಸಮಿತಿ (Joint Parlimentary Committee) ಅಧ್ಯಕ್ಷ ಜಗದಾಂಬಿಕ ಪಾಲ್ (Jagdambika Pal) ಅವರು ನ.7 ರಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.
ಜಗದಾಂಬಿಕ ಪಾಲ್ ಅವರು ಹುಬ್ಬಳ್ಳಿ ಮತ್ತು ಬಿಜಾಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಜೆಪಿಸಿಗೆ ವಕ್ಫ್ ಆಸ್ತಿ ವಿಚಾರದ ಬಗ್ಗೆ ಪತ್ರ ಬರೆದಿದ್ದರು. ಈ ಹಿನ್ನಲೆಯಲ್ಲಿ ರೈತರ ಅಹವಾಲು ಆಲಿಸಲು, ರೈತರನ್ನು ವಕ್ಫ್ ನಿಯಮಗಳ ತಿದ್ದುಪಡಿಗೆ ಸಾಕ್ಷ್ಯ ಮಾಡುವಂತೆ ಮನವಿ ಮಾಡಿದ್ದರು. ಹೀಗಾಗಿ ಅಧ್ಯಕ್ಷ ಜಗದಾಂಬಿಕ ಪಾಲ್ ನ.7 ರಂದು ವಕ್ಫ್ ಬೋರ್ಡ್‌ನಿಂದ ತೊಂದರೆಗೆ ಸಿಲುಕಿದ ರೈತರು, ಮಠ, ದೇವಸ್ಥಾನಗಳ ಪ್ರಮುಖರ ಜೊತೆ ಸಭೆ ನಡೆಸಲಿದ್ದಾರೆ.
ಜೆಪಿಸಿ ಅಧ್ಯಕ್ಷರ ಭೇಟಿ ಕುರಿತಂತೆ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕುರಿತಂತೆ ಅಧಿಕೃತ ಪೋಸ್ಟ್ ಮಾಡಿದ್ದು, ವಕ್ಫ್‌ನ ಕ್ರಮದಿಂದ ಸಂತ್ರಸ್ತರಾದ ರೈತರೊಂದಿಗೆ ಸಂವಾದ ನಡೆಸಲು ನವೆಂಬರ್ 7 ರಂದು ಹುಬ್ಬಳ್ಳಿ ಮತ್ತು ಬಿಜಾಪುರಕ್ಕೆ ಭೇಟಿ ನೀಡಬೇಕೆಂಬ ನನ್ನ ಮನವಿಗೆ ವಕ್ಫ್‌ನ ಜೆಪಿಸಿ ಅಧ್ಯಕ್ಷರು ಒಪ್ಪಿಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಕ್ಷರು ರೈತ ಸಂಘಟನೆಗಳು ಹಾಗೂ ಮಠಾಧೀಶರೊಂದಿಗೆ ಸಂವಾದ ನಡೆಸಲಿದ್ದು, ಅವರಿಗೆ ನೀಡಿದ ಮನವಿಗಳನ್ನು ಜೆಪಿಸಿ ಮುಂದೆ ಇಡಲಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ವಿಜಯಪುರದಲ್ಲಿ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿದಾಗಿನಿಂದ ರಾಜ್ಯದಲ್ಲಿ ವಕ್ಫ್ ವಿವಾದದ ಕಿಡಿ ಹೊತ್ತಿಕೊಂಡಿದೆ. ಇದೇ ರೀತಿ ರಾಜ್ಯದ ಕೆಲವು ಭಾಗಗಳಲ್ಲಿ ವಕ್ಫ್ ಜಾಗವೆಂದು ವಕ್ಫ್ ಬೋರ್ಡ್ ನೋಟಿಸ್ ನೀಡಿರುವ ಪ್ರಕರಣಗಳು ಕೇಳಿಬಂದಿದೆ. ರಾಜ್ಯ ಸರ್ಕಾರದ ಈ ಧೋರಣೆ ಖಂಡಿಸಿ ಬಿಜೆಪಿಯು ಬಹಿರಂಗ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ, ಕೇಂದ್ರ ಸರ್ಕಾರಕ್ಕೆ ರಾಜ್ಯದಲ್ಲಿ ಎಲ್ಲಾ ರೀತಿಯ ವಕ್ಫ್ ಆಸ್ತಿ ನೋಂದಣಿ ಸ್ಥಗಿತಗೊಳಿಸುವಂತೆ ಪತ್ರ ಬರೆದಿದೆ. ವಕ್ಫ್ ಆಸ್ತಿ ವಿವಾದ ದಿನೇ ದಿನೇ ಎಲ್ಲೆಡೆ ವ್ಯಾಪಿಸಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಂಗ್ರೆಸ್ ಸರ್ಕಾರ ವಕ್ಫ್ ಬೋರ್ಡ್ ರೈತರು ಮತ್ತಿತರರಿಗೆ ನೀಡಿದ್ದ ನೋಟಿಸ್ ಹಿಂಪಡೆಯಲು ನಿರ್ಧರಿಸಿದೆ. ಆದರೆ ಅದಾಗಲೇ ಕಾಂಗ್ರೆಸ್ ಸರ್ಕಾರದ ನಡೆಯ ವಿರುದ್ಧ ಲಕ್ಷಾಂತರ ಜನರು ವ್ಯಾಪಕವಾಗಿ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ : ವಕ್ಫ್ ಮಂಡಳಿ ಕುರಿತ ಎಲ್ಲಾ ಬಗೆಯ ಜಮೀನು ನೋಂದಣಿ ಸ್ಥಗಿತಕ್ಕೆ ಪಟ್ಟು : ಕೇಂದ್ರ ಜಂಟಿ ಸಮಿತಿಗೆ ಆರ್.ಅಶೋಕ್ ಪತ್ರ
ದೇವಾಲಯಗಳ ಆಸ್ತಿಯನ್ನು ದೇವರ ಹೆಸರಲ್ಲಿ ನೋಂದಣಿಗೆ ಪೇಜಾವರ ಶ್ರೀ ಆಗ್ರಹ :
ರಾಜ್ಯದಲ್ಲಿ ಏಕಾಏಕಿ ದೇವಾಲಯಗಳು ಇದ್ದಕ್ಕಿದ್ದಂತೆ ವಕ್ಫ್ ಆಸ್ತಿಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Pejavara Vishwaprasanna Tirtha Swamiji), ರೈತರ ಜಮೀನು, ಮಠಗಳ ಆಸ್ತಿಯಲ್ಲಿ ವಕ್ಫ್ ಹೆಸರು ಕಾಣಿಸಿಕೊಳ್ಳುತ್ತಿದೆ. ನಮ್ಮಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅಡಿ ಅನೇಕ ದೇವಾಲಯಗಳಿವೆ. ಮೊದಲು ಅವುಗಳ ಆಸ್ತಿ ರಕ್ಷಣೆಗೆ ಮುಂದಾಗಬೇಕು. ದೇವಸ್ಥಾನದ ಆಸ್ತಿಗಳನ್ನು ದೇವರ ಹೆಸರಿನಲ್ಲಿ ನೋಂದಣಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ದಾವಣಗೆರೆಯಲ್ಲಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಶ್ರೀಗಳು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ದೇವಾಲಯಗಳು ಇದ್ದಕ್ಕಿದ್ದಂತೆ ವಕ್ಫ್ ಆಸ್ತಿಯಾಗುತ್ತಿವೆ. ಜನರಿಗೆ ಇಷ್ಟು ಭಯ ಹಾಗೂ ಗೊಂದಲ ಉಂಟುಮಾಡುವ ಕೆಲಸ ಆಗಬಾರದು. ಜನರಿಗಾಗಿ ಆದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಸರ್ಕಾರಕ್ಕೆ ಬುದ್ದಿವಾದ ಹೇಳಿದ್ದಾರೆ. ಇದನ್ನೂ ಓದಿ : BW EXCLUSIVE | ರಾಜ್ಯ ಸರ್ಕಾರ- ಬೆಂಗಳೂರು ವಿವಿ ನಿಯಮ ಉಲ್ಲಂಘನೆ : ಜ್ಞಾನಭಾರತಿ ಕ್ಯಾಂಪಸ್ 673 ಎಕರೆ ಜೀವ ವೈವಿಧ್ಯತಾ ವನಕ್ಕೆ ಗಂಡಾಂತರ!!
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.