ಬೆಂಗಳೂರು, ಅ.22 www.bengaluruwire.com : ಭಾರತೀಯ ವಾಯುಪಡೆ (IAF)ಯ ಯೋಧರಿಗೆ ಯುದ್ಧ ವಿಮಾನ ತರಬೇತಿ, ಸಮರ ವಿಮಾನಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಅಳವಡಿಕೆಗೆ ಸೂಕ್ತ ಸಾಫ್ಟ್ ವೇರ್ ಗಳನ್ನು ನಿರ್ಮಿಸುವ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ (Software Development Institute – SDI) ವಾಯುಪಡೆಯಲ್ಲಿನ ರಕ್ಷಣಾ ವ್ಯವಸ್ಥೆಯಲ್ಲಿ ಸಾಫ್ಟ್ ವೇರ್ ಉತ್ಕೃಷ್ಟತೆಯ ಪ್ರಗತಿ ಸಾಧಿಸಿದ ವಿಶ್ವದ ಮೊದಲ ಏರ್ ಫೋರ್ಸ್ ಇನ್ಸ್ಟಿಟ್ಯೂಟ್ ಎಂಬ ಖ್ಯಾತಿಗೆ ಈಗ ಪಾತ್ರವಾಗಿದೆ.
ವಾಯುಪಡೆಯ ಯುದ್ಧವಿಮಾನಕ್ಕೆ ಸಾಫ್ಟ್ ವೇರ್ ನಿರ್ಮಾಣದಲ್ಲಿ ಉತ್ಕೃಷ್ಟತೆಯ ಅನ್ವೇಷಣೆಯಲ್ಲಿ, ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ ಸಂಸ್ಥೆಯ ಹೊಸ ಸಿಎಂಎಂಐ (Capability Maturity Model Integration- CMMI) ಆವೃತ್ತಿ 3.0 ಗೆ ಮರು ಊರ್ಜಿತಗೊಳಿಸುವಿಕೆಗಾಗಿ ಸೆಪ್ಟೆಂಬರ್ 24ರಲ್ಲಿ ತನಗೇ ತಾನೇ ಪ್ರಾಮಾಣಿಕರಣ ನೀಡಿದೆ. ಈ ರೀತಿ ವಾಯುಪಡೆಯಲ್ಲಿನ ರಕ್ಷಣಾ ವ್ಯವಸ್ಥೆಯಲ್ಲಿ ಸಾಫ್ಟ್ ವೇರ್ ಉತ್ಕೃಷ್ಟತೆಯ ಪ್ರಗತಿ ಸಾಧಿಸಿದ ವಿಶ್ವದ ಮೊದಲ ಏರ್ ಫೋರ್ಸ್ ಇನ್ಸ್ಟಿಟ್ಯೂಟ್ ಆಗಿದೆ. ಇದು ಸಾಫ್ಟ್ ವೇರ್ ಉನ್ನತ ಗುಣಮಟ್ಟವನ್ನು ಸಮರ್ಥಿಸುತ್ತದೆ. ಇದಲ್ಲದೆ ಎಸ್‌ಡಿಐನಲ್ಲಿ ಮಿಷನ್ ಕ್ರಿಟಿಕಲ್ ಏವಿಯಾನಿಕ್ಸ್ ಸಾಫ್ಟ್‌ವೇರ್‌ನ ವಿನ್ಯಾಸ ಮತ್ತು ಅಭಿವೃದ್ಧಿಗಾಗಿ ಅಶ್ಯೂರೆನ್ಸ್ ಪ್ರಕ್ರಿಯೆಗಳನ್ನು ಅಳವಡಿಸಲಾಗಿದೆ.
ಬೆಂಗಳೂರಿನಲ್ಲಿ ನೆಲೆಗೊಂಡಿರುವ ಈ ಎಸ್ ಡಿಐ, ಐಎಎಫ್‌ನ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಹೆಚ್ಚಿಸುವ ಪ್ರಮುಖ ಪಾತ್ರವನ್ನು ವಹಿಸುವ ಸಂಸ್ಥೆಯಾಗಿದೆ. ಈ ಕಾರ್ಯವು ಐಎಎಫ್‌ನ ಮುಂಚೂಣಿಯ ಫೈಟರ್ ಪ್ಲಾಟ್‌ಫಾರ್ಮ್‌ಗಳಾದ ಸುಖೋಯ್-30 (Su30), ಹಗುರ ಯುದ್ಧ ವಿಮಾನ (LCA), ಮಿಗ್ 29 (MiG29) ಮತ್ತು ಜಾಗ್ವಾರ್ ವಿಮಾನಗಳಲ್ಲಿ ಉನ್ನತ ತಂತ್ರಜ್ಞಾನದ ಸ್ಮಾರ್ಟ್ ಶಸ್ತ್ರಾಸ್ತ್ರಗಳು ಮತ್ತು ಸಂವೇದಕಗಳ ಏಕೀಕರಣಕ್ಕಾಗಿ ಮಿಷನ್ ಕ್ರಿಟಿಕಲ್ ಏವಿಯಾನಿಕ್ಸ್ ಸಾಫ್ಟ್‌ವೇರ್‌ನ ವಿನ್ಯಾಸ ಮತ್ತು ಅಭಿವೃದ್ಧಿ (D&D) ಕಾರ್ಯವನ್ನು ಎಸ್ ಡಿಐ ಸಂಸ್ಥೆಯು ನಿರ್ವಹಿಸುತ್ತದೆ. ಯುದ್ಧ ವಿಮಾನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ನೆಟ್‌ವರ್ಕ್ ಸೆಂಟ್ರಿಕ್ ಕಾರ್ಯಾಚರಣೆಗಳು, ಸುಖೋಯ್-30 ಸಮರ ವಿಮಾನದಲ್ಲಿ ಅಪ್‌ಗ್ರೇಡ್ ಪ್ರೋಗ್ರಾಂಗಳು ಮತ್ತು ಏರ್‌ಬೋರ್ನ್ ಪ್ಲಾಟ್‌ಫಾರ್ಮ್‌ಗಳಿಗಾಗಿ ಎಐ (AI) ಆಧಾರಿತ ಅಪ್ಲಿಕೇಶನ್‌ಗಳ ಅಭಿವೃದ್ಧಿಯಲ್ಲಿ ಎಸ್ ಡಿಐ ಸಂಸ್ಥೆ ಉತ್ಕೃಷ್ಟತೆಯನ್ನು ಕಾಯ್ದುಕೊಂಡಿದೆ.
ಈ ಕಾರ್ಯಗಳಲ್ಲದೆ ಎಸ್ ಡಿಐ ಸಂಸ್ಥೆಯು, ವಾಯು ಯುದ್ಧ, ವಾಯು ರಕ್ಷಣೆ, ವಾಯು ಸಂಚಾರ ನಿಯಂತ್ರಣ ಮತ್ತು ನ್ಯಾವಿಗೇಷನ್ ಕುರಿತು ಐಎಎಫ್ ಯೋಧರಿಗೆ ತರಬೇತಿ ನೀಡಲು ಅತ್ಯಾಧುನಿಕ ಸಿಮ್ಯುಲೇಶನ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತದೆ. ಈ ವ್ಯವಸ್ಥೆಗಳು ಐಎಎಫ್ ಸಿಬ್ಬಂದಿಗೆ ಅತ್ಯಂತ ವಾಸ್ತವಿಕ ಕಾರ್ಯಾಚರಣೆಯ ತರಬೇತಿಗಾಗಿ ಅತ್ಯುತ್ತಮವಾದ ಹೈಟೆಕ್ ಸಿಮ್ಯುಲೇಶನ್ ಸಿಸ್ಟಮ್‌ಗಳನ್ನು ಒದಗಿಸುವ ಕಾರ್ಯವನ್ನು ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ ಮಾಡುತ್ತದೆ.
ಏರ್ ಕಾಂಬ್ಯಾಟ್‌ನ ಮುಂಚೂಣಿಯಲ್ಲಿರುವ ಮಿಷನ್ ಕ್ರಿಟಿಕಲ್ ಏವಿಯಾನಿಕ್ಸ್ ಮತ್ತು ಸಿಮ್ಯುಲೇಶನ್ ಸಾಫ್ಟ್‌ವೇರ್‌ನ ವಿನ್ಯಾಸ ಮತ್ತು ಅಭಿವೃದ್ಧಿಗೆ ಉತ್ತಮ ಜ್ಞಾನ ಮತ್ತು ಅನುಭವದ ಅಗತ್ಯವಿರುತ್ತದೆ. ಇದಲ್ಲದೆ ಅತ್ಯುತ್ತಮ ಸಾಫ್ಟ್ ವೇರ್ ಗುಣಮಟ್ಟ ಭರವಸೆ ಅಭ್ಯಾಸಗಳ ಕಟ್ಟುನಿಟ್ಟಾದ ಅನುಷ್ಠಾನದ ಅಗತ್ಯವಿರುತ್ತದೆ. ಸವಾಲಿನ ಕಾರ್ಯಾಚರಣೆಯ ಅಗತ್ಯತೆಗಳ ಹೊರತಾಗಿಯೂ, ಉತ್ತಮ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳುವಾಗ ಸಂಪನ್ಮೂಲಗಳು ಮತ್ತು ಸಮಯದ ಅತ್ಯುತ್ತಮ ಬಳಕೆಯನ್ನು ಇದು ಖಾತ್ರಿಗೊಳಿಸುತ್ತದೆ.
2012 ರಲ್ಲಿ ಉದ್ಯಮದ ಅತ್ಯುತ್ತಮ ಅಭ್ಯಾಸಗಳ ಗೋಲ್ಡ್ ಸ್ಟ್ಯಾಂಡರ್ಡ್, ಕೆಪಾಬಿಲಿಟಿ ಮೆಚ್ಯೂರಿಟಿ ಮಾಡೆಲ್ ಇಂಟಿಗ್ರೇಷನ್ ಡೆವಲಪ್ ಮೆಂಟ್ ಲೆವೆಲ್ 3ರ ಆವೃತ್ತಿ 1.3 ಪ್ರಮಾಣೀಕರಣವನ್ನು ಎಸ್ ಡಿಐ ಸಂಸ್ಥೆಯು ಸಾಧಿಸಿದ ದೇಶದ ಮೊದಲ ರಕ್ಷಣಾ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು. ಅದಾದ ಬಳಿಕ ಒಂದು ದಶಕದಲ್ಲಿ, ಸಿಎಂಎಂಐ ಮಾನದಂಡಗಳಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಹೊಸ ಸಿಎಂಎಂಐ ಆವೃತ್ತಿ 3.0 ನಲ್ಲಿ ಹೆಚ್ಚು ಕಠಿಣ ಮತ್ತು ಹೊಸ ಪ್ರಕ್ರಿಯೆಗಳನ್ನು ಸೇರಿಸಲಾಗಿದೆ ಎಂದು ರಕ್ಷಣಾ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.