ಬೆಂಗಳೂರು, ಸೆ.28 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ವು ಶನಿವಾರ ನಾಗರಬಾವಿಯಲ್ಲಿನ ಎರಡು ಸರ್ವೆ ನಂಬರ್ ಗಳಲ್ಲಿ ತನಗೆ ಸೇರಿದ್ದ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಗೋದಾಮು, ಶೆಡ್ ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಒಟ್ಟಾರೆ 460 ಕೋಟಿ ರೂ. ಮೊತ್ತದ ಆಸ್ತಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಇಂದು ನಡೆದ ಕಾರ್ಯಾಚರಣೆಯಲ್ಲಿ ನಾಗರಬಾವಿ ಗ್ರಾಮದ ಸರ್ವೆ ನಂ. 78 ರಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ 40 ಶೆಡ್ ಗಳನ್ನು ಇಂದು ನಡೆಸಿದ ಕಾರ್ಯಾಚರಣೆಯಲ್ಲಿ ಜೆಸಿಬಿಯನ್ನು ನೆಲಕ್ಕುರುಳಿಸಿದೆ. ಆ ಮೂಲಕ ಪ್ರಾಧಿಕಾರಕ್ಕೆ ಸೇರಿದ 6 ಎಕರೆ ಪ್ರದೇಶದ ಸುಮಾರು ರೂ. 430 ಕೋಟಿ ಆಸ್ತಿಯನ್ನು ಪ್ರಾಧಿಕಾರವು ತನ್ನ ವಶಕ್ಕೆ ತೆಗೆದುಕೊಂಡಿತು.
ಇನ್ನೊಂದೆಡೆ ನಾಗರಬಾವಿಯ ಒಂದನೇ ಹಂತದ ಸರ್ವೆ ನಂಬರ್ 129ರಲ್ಲಿ ಮೂಲೆ ನಿವೇಶನ, ಮಧ್ಯಂತರ ನಿವೇಶನ ಹಾಗೂ ಸಿಎ ನಿವೇಶನಗಳನ್ನು ಒತ್ತುವರಿ ಮಾಡಿಕೊಂಡು ಅನಧಿಕೃತ ಶೆಡ್, ಗ್ಯಾರೇಜ್ ಮತ್ತು ನರ್ಸರಿ ಗಾರ್ಡನ್ ಮಾಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರು. ಇದನ್ನು ಬಿಡಿಎ ಕಾರ್ಯಪಡೆಯ ಪೊಲೀಸರ ಭದ್ರತೆ ಪೆಡೆದು ಎಂಜಿನಿಯರ್ ಸದಸ್ಯರು ಹಾಗೂ ಪಶ್ಚಿಮ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರವಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಈ ಜಾಗಗಳನ್ನು ಬಿಡಿಎ ತನ್ನ ವಶಕ್ಕೆ ಮರು ಪಡೆದುಕೊಂಡಿದೆ.