ಮುಂಬೈ, ಸೆ.27 www.bengaluruwire.com : ನಕಲಿ ದಾಖಲೆಗಳನ್ನು ಬಳಸಿಕೊಂಡು ಭಾರತೀಯ ಪಾಸ್ ಪೋರ್ಟ್ ಪಡೆದ ಆರೋಪದ ಮೇಲೆ ಬಾಂಗ್ಲಾದೇಶದ ನೀಲಿ ಚಲನಚಿತ್ರ ತಾರೆ (Porn Star ರಿಯಾ ಬಾರ್ಡೆ (Riya Barde) ಅಲಿಯಾಸ್ ಆರೋಹಿ ಬಾರ್ಡೆ (Arohi Barde)ಅವರನ್ನು ಮಹಾರಾಷ್ಟ್ರದ ಮುಂಬೈನಿಂದ 50 ಕಿ.ಮೀ ದೂರದ ಉಲ್ಲಾಸ್ ನಗರದ ಹಿಲ್ ಲೈನ್ ಪೊಲೀಸರು (Hill Line Police) ಬಂಧಿಸಿದ್ದಾರೆ.
ಬಾಂಗ್ಲಾದೇಶದ ಪ್ರಜೆಯಾಗಿರುವ ಈಕೆ ತನ್ನ ತಾಯಿ ಮತ್ತು ಒಡಹುಟ್ಟಿದವರೊಂದಿಗೆ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಬಾಂಗ್ಲಾದೇಶದ ಕುಟುಂಬವೊಂದು ನೆವಾಲಿಯ ಅಂಬರ್ನಾಥ್ನಲ್ಲಿ ನಕಲಿ ದಾಖಲೆಗಳನ್ನು ಬಳಸಿ ವಾಸಿಸುತ್ತಿದೆ ಎಂದು ಪೊಲೀಸರಿಗೆ ಸುಳಿವು ಸಿಕ್ಕಿತ್ತು. ತನಿಖೆಯನ್ನು ಪ್ರಾರಂಭಿಸಿದ ಪೊಲೀಸರಿಗೆ ಆಕೆ ಮತ್ತು ಆಕೆಯ ಕುಟುಂಬದ ಮೋಸದ ಚಟುವಟಿಕೆಗಳನ್ನು ಪತ್ತೆ ಹಚ್ಚಿದರು.
ಮಾಧ್ಯಮ ವರದಿಗಳ ಪ್ರಕಾರ, ರಿಯಾ ಅವರ ತಾಯಿ ಈ ಉದ್ದೇಶಕ್ಕಾಗಿ ಅಮರಾವತಿಯ ವ್ಯಕ್ತಿಯನ್ನು ಮದುವೆಯಾಗಿದ್ದಾರೆ ಎಂದು ಹೇಳಲಾಗಿದೆ. ರಿಯಾ ಅವರ ತಾಯಿ ಅಂಜಲಿ ಬಾರ್ಡೆ ಅಲಿಯಾಸ್ ರೂಬಿ ಶೇಖ್, ತಂದೆ ಅರವಿಂದ್ ಬಾರ್ಡೆ, ಸಹೋದರ ರವೀಂದ್ರ, ಅಲಿಯಾಸ್ ರಿಯಾಜ್ ಶೇಖ್ ಮತ್ತು ಸಹೋದರಿ ರಿತು ಅಲಿಯಾಸ್ ಮೋನಿ ಶೇಖ್ ವಿರುದ್ಧವೂ ಪೊಲೀಸರು ಐಪಿಸಿ ವಿವಿಧ ಸೆಕ್ಷನ್ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹಿಲ್ ಲೈನ್ ಪೊಲೀಸರು ರಿಯಾ ಮತ್ತು ಇತರ ನಾಲ್ವರ ವಿರುದ್ಧ ವಿದೇಶಿ ಕಾಯಿದೆ, 1946 ರ ಸೆಕ್ಷನ್ 14 (ಎ) ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇಡೀ ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂಗ್ರಾಮ್ ಮಲ್ಕರ್ ಅವರ ಪ್ರಕಾರ, “ತನಿಖೆಯಲ್ಲಿ, ರಿಯಾ ಅವರ ತಾಯಿ ಅಂಜಲಿ ಬಾಂಗ್ಲಾದೇಶದ ನಿವಾಸಿಯಾಗಿದ್ದು, ರಿಯಾ ಸೇರಿದಂತೆ ತನ್ನ ಇಬ್ಬರು ಹೆಣ್ಣುಮಕ್ಕಳು ಮತ್ತು ಮಗನೊಂದಿಗೆ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂಬ ವಿಷಯ ನಮ್ಮ ತನಿಖೆಯಿಂದ ತಿಳಿದುಬಂದಿದೆ.
ರಿಯಾ ಅವರ ತಾಯಿ ಪಶ್ಚಿಮ ಬಂಗಾಳ ಮೂಲದವರು ಎಂದು ಹೇಳಿಕೊಂಡು ಅಮರಾವತಿ ನಿವಾಸಿ ಅರವಿಂದ್ ಬಾರ್ಡೆ ಅವರನ್ನು ವಿವಾಹವಾದರು. ನಂತರ ಆಕೆ ತನ್ನ ಭಾರತೀಯ ಗುರುತನ್ನು ಸಾಬೀತುಪಡಿಸಲು ತನಗೆ ಮತ್ತು ಮಕ್ಕಳಿಗೆ ನಕಲಿ ಜನನ ಪ್ರಮಾಣಪತ್ರಗಳು ಮತ್ತು ಇತರ ನಕಲಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಭಾರತೀಯ ಪಾಸ್ ಪೋರ್ಟ್ ಪಡೆದಿದ್ದಾಳೆ.
ಪ್ರಕರಣದಲ್ಲಿ ಭಾಗಿಯಾಗಿರುವ ಇತರ ನಾಲ್ವರಿಗಾಗಿ ಶೋಧ ನಡೆಯುತ್ತಿದೆ. ಆರೋಪಿಯ ಪೋಷಕರು ಪ್ರಸ್ತುತ ಕತಾರ್ನಲ್ಲಿದ್ದಾರೆ ಎಂದು ವರದಿಗಳು ತಿಳಿಸಿವೆ. (ಫೊಟೋ ಕೃಪೆ : ಫೇಸ್ ಬುಕ್ ಖಾತೆಯಲ್ಲಿನ ಪೋಸ್ಟ್)