ಬೆಂಗಳೂರು, ಸೆ.17 www.bengaluruwire.com : ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಸೆಪ್ಟೆಂಬರ್ 18ರಂದು ಸರ್.ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ ಮತ್ತು 13 ಮಂದಿ ಸಾಧಕ/ಸಾಧಕಿ ಎಂಜಿನಿಯರ್ ಗಳಿಗೆ ಸರ್.ಎಂ.ವಿ.ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಬೆಳಗ್ಗೆ 11.30 ಗಂಟೆಗೆ ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ನೌಕರರ ಭವನದಲ್ಲಿ ನಡೆಯಲಿದೆ.
ಬುಧವಾರದಂದು ಬೆಳಗ್ಗೆ 9.30 ಕ್ಕೆ ಕೆ.ಆರ್.ಸರ್ಕಲ್‌ನಲ್ಲಿರುವ ಸರ್.ಎಂ. ವಿಶ್ವೇಶ್ವರಯ್ಯರವರ “ಪುತ್ಥಳಿಗೆ ಮಾರ್ಲಾಪಣೆ” ಹಾಗೂ ಬೆಳಿಗ್ಗೆ 11.30 ಗಂಟೆ ನಂತರ ಸಭಾ ಕಾರ್ಯಕ್ರಮ ಎಂಜಿನಿಯರ್ ದಿನಾಚರಣೆ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು, ಮುಖ್ಯ ಅತಿಥಿಗಳಾಗಿ ವಿಶೇಷ ಆಯುಕ್ತರುಗಳಾದ ಡಾ.ಅವಿನಾಶ್ ಮೆನನ್‌ರಾಜೇಂದ್ರನ್ (ಆಡಳಿತ), ಡಾ.ಹರೀಶ್‌ಕುಮಾರ್ ಕೆ.ಮತ್ತು ಉಪ ಆಯುಕ್ತರಾದ ಡಾ.ಮಂಜುನಾಥಸ್ವಾಮಿ ಬಿ.ಎಸ್, ಪ್ರಧಾನ ಅಭಿಯಂತರಾದ ಬಿ.ಎಸ್. ಪ್ರಹ್ಲಾದ್, ವಿಶೇಷ ಆಹ್ವಾನಿತರಾಗಿ ಉಪಮುಖ್ಯ ಮಂತ್ರಿಗಳ ತಾಂತ್ರಿಕ ಸಲಹೆಗಾರರಾದ ಕೆ.ಟಿ.ನಾಗರಾಜ್ ರವರು, ಕರ್ನಾಟಕ ರಾಜ್ಯ ಎಂಜಿನಿಯರುಗಳ ಸಂಘದ ಮಾಜಿ ಅಧ್ಯಕ್ಷರಾದ ನಾಗರಾಜುರವರು ಉದ್ಘಾಟನೆ ಮತ್ತು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಪುರಸ್ಕೃತರ ಪಟ್ಟಿ :
ಬಿ.ಎಸ್.ಡಬ್ಲೂ.ಎಂ.ಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ್ ಆರ್. ಕಬಾಡೆ, ಪೂರ್ವ ಮುಖ್ಯ ಅಭಿಯಂತರ ಸುಗುಣ, ಬೆಂಗಳೂರು ಉತ್ತರ ನಗರ ಯೋಜನೆ ಜಂಟಿ ನಿರ್ದೇಶಕ ರಾಕೇಶ್ ಕುಮಾರ್, ಅಧೀಕ್ಷಕ ಅಭಿಯಂತರ ಹೆಚ್.ಎಸ್.ಮಹದೇಶ್, ಕಾರ್ಯಪಾಲಕ ಅಭಿಯಂತರರುಗಳಾದ ರೂಪೇಶ್, ಮುನಿರೆಡ್ಡಿ, ಎಲ್ ವೆಂಕಟೇಶ್(ಕೆರೆಗಳು), ರಾಮಚಂದ್ರಪ್ಪ ಹೆಚ್.ಎಸ್.(ಜೆ.ಡಿ.ಟಿ.ಪಿ ದಕ್ಷಿಣ) ರಾಜಣ್ಣ (ಟಿ.ವಿ.ಸಿ.ಸಿ), ಬಿ. ಶರತ್(ಎಂ.ಪಿ.ಇ.ಡಿ) ಬಿ.ಎನ್.ಪ್ರದೀಪ್, ಸಹಾಯಕ ಎಂಜಿನಿರ್ ಗಳಾದ ಆಶಾ (ಟಿ.ವಿ. ದಕ್ಷಿಣ ವಲಯ), ಚಂದ್ರಶೇಖರ್ ನಾಯಕ್(ಟಿ.ಡಿ.ಆರ್) ಅವರುಗಳಿಗೆ ಸರ್.ಎಂ.ವಿ.ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಅಮೃತ್ ರಾಜ್ ಹೇಳಿದರು.