ಬೆಂಗಳೂರು, ಸೆ.10 www.bengaluruwire.com : ಅಮಾಯಕರ ದಾಖಲೆಗಳನ್ನು ಬಳಸಿಕೊಂಡು ನಕಲಿ ಜಿಎಸ್ ಟಿ ನೋಂದಣಿಗಳನ್ನು ತಡೆಯುವ ನಿಟ್ಟಿನಲ್ಲಿ ವಾಣಿಜ್ಯ ಇಲಾಖೆಯು ರಾಜ್ಯದಲ್ಲಿ 120 ಜಿಎಸ್ ಕೆ (Goods And Service Tax Sevakendra) ಬಯೋಮೆಟ್ರಿಕ್ ಸೆಂಟರ್ ಗಳನ್ನು ಇಂದಿನಿಂದ ಆರಂಭಿಸಿದೆ.
ಈ ಕೇಂದ್ರಗಳಲ್ಲಿ ಆಧಾರ್ ಬಯೋಮೆಟ್ರಿಕ್ ದೃಢೀಕರಣದ ಮೂಲಕ ಹೊಸದಾಗಿ ನೋಂದಣಿ ಪಡೆಯಲು ಇಚ್ಚಿಸುವ ಅರ್ಜಿದಾರರ ಬಯೋಮೆಟ್ರಿಕ್ ದೃಢೀಕರಣ ಮತ್ತು ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ. ಈ ಹಂತದ ಪ್ರಕ್ರಿಯೆಯು ಅಮಾಯಕರ ದಾಖಲೆಗಳನ್ನು ಬಳಸಿಕೊಂಡು ಪಡೆಯುವ ನಕಲಿ ಜಿ.ಎಸ್.ಟಿ ನೋಂದಣಿಗಳನ್ನು ತಡೆಯುವಲ್ಲಿ ನೆರವಾಗಿ ರಾಜ್ಯದಲ್ಲಿ ಉತ್ತಮ ವ್ಯಾವಹಾರಿಕ ವಾತಾವರಣ ಉತ್ತೇಜಿಸಲಿದೆ.
ಅರ್ಜಿದಾರರಿಗೆ ಜಿ.ಎಸ್.ಕೆ ಬಯೋಮೆಟ್ರಿಕ್ ಸೆಂಟರ್ ಗಳಿಗೆ ಭೇಟಿ ನೀಡುವ ಸಮಯವನ್ನು ಮುಂಗಡವಾಗಿ ನಿಗದಿಗೊಳಿಸುವ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಕರ್ನಾಟಕದಲ್ಲಿ ಇದುವರೆಗೆ ಒಟ್ಟಾರೆ 10,42,270 ಸರಕು ಮತ್ತು ಸೇವಾದಾರರು ನೋಂದಣಿ ಮಾಡಿಸಿಕೊಂಡಿದ್ದಾರೆ.