ಬೆಂಗಳೂರು, ಸೆ.4 www.bengaluruwire.com : ನಮ್ಮ ಮೆಟ್ರೊ ಗೊಟ್ಟಿಗೆರೆಯಿಂದ ನಾಗಾವರದ ತನಕದ ರೀಚ್-6 ಮಾರ್ಗದಲ್ಲಿ ಪ್ರಮುಖ ಬೆಳವಣಿಗೆಯಿಂದ ಎಲ್ಲರ ಹುಬ್ಬೇರುವಂತೆ ಮಾಡಿದೆ. ಕಾಡುಗೊಂಡನಹಳ್ಳಿ ಮತ್ತು ನಾಗವಾರ ನಿಲ್ದಾಣಗಳ ನಡುವಿನ ಗುಲಾಬಿ ಮಾರ್ಗದ ಶೇ.98 ಸುರಂಗ ಪ್ರಕ್ರಿಯೆಯು ಬುಧವಾರ ಪೂರ್ಣಗೊಂಡಿದೆ.
ಸುರಂಗ ಕೊರೆಯುವ ಯಂತ್ರ ತುಂಗಾ (ಟಿಬಿಎಂ) ಇಂದು ನಾಗಾವರ ನಿಲ್ದಾಣದ ಸೌತ್ ಕಟ್ ಮತ್ತು ಕವರ್ ಶಾಫ್ಟ್ ನಲ್ಲಿ 936.6 ಮೀ ಸುರಂಗ ಕೊರೆಯುವ ಕಾಮಗಾರಿ ಪೂರ್ಣಗೊಳಿಸಿ ಹೊರಬಂದಿದೆ.
ಈ ಸುರಂಗ ಕೊರೆಯುವ ಯಂತ್ರ ಕಾಡುಗೊಂಡನಹಳ್ಳಿ ನಿಲ್ದಾಣದಲ್ಲಿ ಫೆ.3ರಂದು ಕಾಮಗಾರಿ ಪ್ರಾರಂಭ ಮಾಡಿದ್ದು ನಾಗವಾರ ನಿಲ್ದಾಣದ ಸೌತ್ ಕಟ್ ಮತ್ತು ಕವರ್ ಶಾಫ್ಟ್ ನಲ್ಲಿ ತಮ್ಮ ಕಾರ್ಯವನ್ನು ಬುಧವಾರ ಪೂರ್ಣಗೊಳಿಸಿದೆ.
ಗೊಟ್ಟಿಗೆರೆಯಿಂದ ನಾಗಾವರದ ತನಕದ ಪಿಂಕ್ ಲೈನ್ ರೀಚ್-6 ಮಾರ್ಗದಲ್ಲಿ 13.76 ಕಿ.ಮೀ ಉದ್ದದ ಸುರಂಗಮಾರ್ಗವಿದ್ದು, ಈ ಪ್ರಗತಿಯೊಂದಿಗೆ, ಒಟ್ಟು 20,992 ಮೀ ಸುರಂಗ ಮಾರ್ಗದಲ್ಲಿ 20,582.7 ಮೀ ಅಂದರೆ ಶೇ.98 ಕಾರ್ಯವು ಪೂರ್ಣಗೊಂಡಿದೆ. ಒಟ್ಟಾರೆ ರೀಚ್-6ರ ಸುರಂಗ ಮಾರ್ಗಕ್ಕಾಗಿ ನಿಯೋಜಿಸಲಾದ 9 ಟಿಬಿಎಂಗಳಲ್ಲಿ, ಇಲ್ಲಿಯವರೆಗೆ 8 ಟಿಬಿಎಂಗಳು ಸುರಂಗಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಿದೆ.
ಟ್ಯಾನರಿ ರಸ್ತೆಯ ದಕ್ಷಿಣದಿಂದ ಉತ್ತರ ರಾಂಪ್‌ಗೆ ಸುರಂಗ ಮಾರ್ಗವು ನಾಲ್ಕು ಭೂಗತ ಮೆಟ್ರೋ ನಿಲ್ದಾಣಗಳ ನಿರ್ಮಾಣವನ್ನು ಒಳಗೊಂಡಿದೆ: ಟ್ಯಾನರಿ ರಸ್ತೆ, ವೆಂಕಟೇಶಪುರ, ಅರೇಬಿಕ್ ಕಾಲೇಜು ಮತ್ತು ನಾಗವಾರ. ಈ ವಿಭಾಗವನ್ನು ಐಟಿಡಿ ಸಿಮೆಂಟೇಶನ್ ಇಂಡಿಯಾ ಲಿಮಿಟೆಡ್ ನಿರ್ವಹಿಸುತ್ತದೆ.
ಟ್ಯಾನರಿ ರಸ್ತೆಯ ದಕ್ಷಿಣದಿಂದ ಉತ್ತರ ರಾಂಪ್‌ಗೆ ಸುರಂಗ ಮಾರ್ಗವು ನಾಲ್ಕು ಭೂಗತ ಮೆಟ್ರೋ ನಿಲ್ದಾಣಗಳ ನಿರ್ಮಾಣವನ್ನು ಒಳಗೊಂಡಿದೆ : ಟ್ಯಾನರಿ ರಸ್ತೆ, ವೆಂಕಟೇಶಪುರ, ಅರೇಬಿಕ್ ಕಾಲೇಜು ಮತ್ತು ನಾಗವಾರ. ಈ ಮಾರ್ಗವನ್ನು ಐಟಿಡಿ ಸಿಮೆಂಟೇಶನ್ ಇಂಡಿಯಾ ಲಿಮಿಟೆಡ್ ನಿರ್ವಹಿಸುತ್ತದೆ.