ಬೆಂಗಳೂರು, ಆ.29 www.bengaluruwire.com : ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವ ಹಾಗೂ ಪುನರ್ ವಿಮರ್ಶೆ ನಂತರ ಸುಸ್ತಿದಾರರ ತಲಾ 50 ಅಸ್ತಿ ಮಾಲೀಕರ ಹೆಸರನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆಯನ್ನು ದಂಡ ಹಾಗೂ ಬಡ್ಡಿ ಇಲ್ಲದೆ ಪಾವತಿಸುವ ಒಂದು ಬಾರಿ ಪರಿಹಾರ (ಒಟಿಎಸ್). ಯೋಜನೆಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಫೆಬ್ರುವರಿಯಲ್ಲಿ ಜಾರಿಯಾಗಿದ್ದ ಒಟಿಎಸ್ ಯೋಜನೆ ಜುಲೈ
31ರಂದು ಕೊನೆಗೊಂಡಿತ್ತು. ಆನಂತರ ಈ ಯೋಜನೆ ವಿಸ್ತರಣೆಯಾಗಿ ಒಂದು ತಿಂಗಳಾದರೂ ಆಸ್ತಿ ಸಂಗ್ರಹದಲ್ಲಿ ಏರಿಕೆ ಕಂಡು ಬಂದಿಲ್ಲ. ಹೀಗಾಗಿ, ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರ ಹೆಸರನ್ನು ಸಾರ್ವಜನಿಕವಾಗಿ ಪಾಲಿಕೆ ಪ್ರಕಟಿಸಿದೆ.
ಬಿಬಿಎಂಪಿಯ ಪ್ರತಿ ವಲಯದಲ್ಲೂ ಅತಿಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿ ಕೊಂಡಿರುವ ತಲಾ 50 ಆಸ್ತಿ ಮಾಲೀಕರ ಹೆಸರನ್ನು ಪಾಲಿಕೆಯ https://bbmptax.karnataka.gov.in/documents/DefaulterslistZones1.pdf ಪಿಡಿಎಫ್ ನಲ್ಲಿ ಪ್ರಕಟಸಿಲಾಗಿದೆ. ಇದಲ್ಲದೆ, ಪುನರ್ ವಿಮರ್ಶೆ ಮಾಡಿದ ನಂತರ ಅತಿಹೆಚ್ಚು ಬಾಕಿ ಉಳಿಸಿಕೊಂಡಿರುವ ತೆರಿಗೆದಾರರ ಮಾಹಿತಿಯನ್ನೂ ಇದರಲ್ಲಿ ಪ್ರಕಟಿಸಲಾಗಿದೆ. ಆಗಸ್ಟ್ 1 ನೇ ತಾರೀಖಿನಂತೆ 3,04,810 ಆಸ್ತಿಗಳಿಂದ 832.53 ಕೋಟಿ ರೂ. ತೆರಿಗೆ ಹಿಂಬಾಕಿಯಿದೆ ಎಂದು ಬಿಬಿಎಂಪಿ ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.