ನವದೆಹಲಿ, ಆ.27 www.bengaluruwire.com : ದೇಶದಲ್ಲಿ 50 ಲಕ್ಷ ನೋಂದಾಯಿತ ಬಳಕೆದಾರರನ್ನು ಹೊಂದಿರುವ ಟೆಲಿಗ್ರಾಮ್ ಸಂದೇಶ ಕಳುಹಿಸುವ ಅಪ್ಲಿಕೇಶನ್ ಅನ್ನು ಭಾರತದಲ್ಲಿ ನಿಷೇಧ (Telegram Ban In India)ಹೇರುವ ಸಾಧ್ಯತೆಯಿದೆ. ಕಂಪನಿಯ ವಿರುದ್ಧ ಕೇಂದ್ರವು ಸುಲಿಗೆ ಮತ್ತು ಜೂಜಿನ ಕುರಿತು ತನಿಖೆಯನ್ನು ಪ್ರಾರಂಭಿದೆ.
ಭಾರತದಲ್ಲಿ ಮೆಸೇಜಿಂಗ್ ಅಪ್ಲಿಕೇಶನ್ (Messaging Application)ನ ಭವಿಷ್ಯವು ತನಿಖೆಯಿಂದ ಹೊರಬರುವ ಫಲಿತಾಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಎರಡೂ ಕೂಡ ಈ ಸಂಬಂಧ ತನಿಖೆಯನ್ನು ಪ್ರಾರಂಭಿಸಿವೆ ಮತ್ತು ಕಂಪನಿಯ ಪಿ2ಪಿ ಸಂವಹನಗಳನ್ನು ಪರಿಶೀಲಿಸುತ್ತಿವೆ.
ಜೂಜು ಮತ್ತು ಸುಲಿಗೆಯಂತಹ ಅಪರಾಧ ಚಟುವಟಿಕೆಗಳಲ್ಲಿ ಟೆಲಿಗ್ರಾಮ್ ಭಾಗಿಯಾಗಿರುವುದನ್ನು ಸಚಿವಾಲಯಗಳು ನಿರ್ದಿಷ್ಟವಾಗಿ ಪರಿಶೀಲಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಹಾಗಿದ್ದಾಗಿಯೂ ಇಲ್ಲಿಯವರೆಗೆ, ಟೆಲಿಗ್ರಾಮ್ ತನಿಖೆಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಟೆಲಿಗ್ರಾಮ್’ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ 39 ವರ್ಷ ವಯಸ್ಸಿನ ಪಾವೆಲ್ ಡುರೊವ್ ಅವರನ್ನು ಆಗಸ್ಟ್ 24ರಂದು ಪ್ಯಾರಿಸ್ ನಲ್ಲಿ ಟೆಲಿಗ್ರಾಮ್ ಆಪ್ ನಲ್ಲಿ ಕ್ರಿಮಿನಲ್ ಚಟುವಟಿಕೆಯನ್ನು ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ ಬಂಧಿಸಿದ ನಂತರ ಈ ಮಾಹಿತಿಗಳು ಒಂದೊಂದಾಗಿ ಬಹಿರಂಗವಾಗಿದೆ. ಆಪ್ ನಲ್ಲಿ ಅಪರಾಧ ಚಟುವಟಿಕೆಗಳನ್ನ ತಡೆಗಟ್ಟಲು ವಿಫಲವಾದ ಕಾರಣ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಏತನ್ಮಧ್ಯೆ, ಪಿಟಿಐ ವರದಿಯೊಂದರಲ್ಲಿ, “ಫ್ರಾನ್ಸ್‌ನಲ್ಲಿ ಏನಾಯಿತು ಎಂಬುದರ ಹಿನ್ನೆಲೆಯಲ್ಲಿ, ಐಟಿ ಸಚಿವಾಲಯವು ಟೆಲಿಗ್ರಾಮ್ ವಿರುದ್ಧ ಬಾಕಿ ಉಳಿದಿರುವ ದೂರುಗಳ ಬಗ್ಗೆ ಪರಿಶೀಲಿಸಲು ಮತ್ತು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು” ಎಂದು ಗೃಹ ಸಚಿವಾಲಯವನ್ನು ಕೇಳಿದೆ.
ಐಟಿ ಸಚಿವಾಲಯವು ಈ ವಿಷಯದಲ್ಲಿ ತನಿಖಾ ಸಂಸ್ಥೆಯಾಗಿಲ್ಲ ಮತ್ತು ಸಚಿವಾಲಯದ ಅಡಿಯಲ್ಲಿ ಸಿಇಆರ್‌ಟಿ-ಇನ್ ಸಹ ಸೈಬರ್ ಕ್ರೈಂಗಳ ಮೇಲೆ ಅಲ್ಲ ಬದಲಿಗೆ ಸೈಬರ್ ಸಂರಕ್ಷಣೆ ಮೇಲಿನ ಅಪರಾಧಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.
“ಇಲ್ಲಿ ಮೂಲಭೂತ ಪ್ರಶ್ನೆಯೆಂದರೆ ಟೆಲಿಗ್ರಾಮ್ ಮೇಲೆ ಯಾವುದೇ ದೂರುಗಳಿವೆಯೇ?, ಭಾರತದಲ್ಲಿ ಇದೇ ರೀತಿಯ ಪರಿಸ್ಥಿತಿ ಇದೆಯೇ, ಮತ್ತು ಯಾವ ಸ್ಥಿತಿಯಿದೆ ಹಾಗೂ ಇದಕ್ಕೆ ಯಾವ ಕ್ರಮದ ಅಗತ್ಯವಿದೆ” ಎಂದು ಪಿಟಿಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ರಷ್ಯಾ ಮೂಲದ ಡುರೊವ್ ಅವರು ಈ ಸಂದೇಶ ಕಳುಹಿಸುವ ಅಪ್ಲಿಕೇಶನ್ ಟೆಲಿಗ್ರಾಮ್‌ನ್ನು ಪ್ರಾರಂಭಿಸಿದ್ದರು. ಟೆಲಿಗ್ರಾಮ್ ಭಾರತದಲ್ಲಿ ಸುಮಾರು 5 ಮಿಲಿಯನ್ಗೂ ಅಧಿಕ ಬಳಕೆದಾರರನ್ನು ಹೊಂದಿದೆ.