ಬೆಂಗಳೂರು, ಆ.26 www.bengaluruwire.com : ನಗರ ಸಶಸ್ತ್ರ ಮೀಸಲು ಪಡೆಯ (City Armed Reserve) ಕೆ9 ತುಕಡಿಯ ಶ್ವಾನದಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಮಿಕಿ (Mickey) ಎಂಬ ಚುರುಕು ಬುದ್ದಿಯ ನಾಯಿ ಮೃತಪಟ್ಟಿದೆ.
ಬೆಂಗಳೂರು ನಗರದಲ್ಲಿ ಮಾದಕವಸ್ತು ಕಳ್ಳಸಾಗಾಣಿಕೆ ಪತ್ತೆ ಕಾರ್ಯದಲ್ಲಿ ಪೊಲೀಸರ ಜೊತೆಯಲ್ಲಿ ಸಾಕಷ್ಟು ಪ್ರಕರಣಗಳಲ್ಲಿ ಕಾರ್ಯನಿರ್ವಹಿಸಿದ್ದ ಮಿಕಿ ಎಂಬ ಲಾಬ್ರಡಾರ್ ತಳಿಯ ಶ್ವಾನ ಅಕಾಲಿಕವಾಗಿ ಸಾವನ್ನಪ್ಪಿರುವುದಕ್ಕೆ ಬೆಂಗಳೂರು ಶ್ವಾನದಳ ಬೇಸರ ವ್ಯಕ್ತಪಡಿಸಿದೆ. ಸರ್ಕಾರಿ ಗೌರವಗಳೊಂದಿಗೆ ಈ ಮಿಕಿ ಶ್ವಾನದ ಅಂತ್ಯ ಸಂಸ್ಕಾರವನ್ನು ಮಾಡಲಾಯಿತು.
ಮಾಣಿಕ್ ಷಾ ಕವಾಯತು ಮೈದಾನದಲ್ಲಿ ಕವಾಯತು ಸಂದರ್ಭದಲ್ಲಿ ತರಬೇತುದಾರ ಪೊಲೀಸ್ ರೊಂದಿಗೆ ಅಭ್ಯಾಸ ನಡೆಸುತ್ತಿದ್ದ ಫೊಟೊ, ಸರ್ಕಾರಿ ಗೌರವಗಳೊಂದಿಗೆ ನಾಯಿಯ ಅಂತ್ಯ ಸಂಸ್ಕಾರದ ಪೋಟೊವನ್ನು ಬೆಂಗಳೂರುಕೆ9 ಕಾಪ್ಸ್ ಎಂಬ ತುಕುಡಿಯು ತನ್ನ ಅಧಿಕೃತ ಮೈಕ್ರೋಬ್ಲಾಗಿಂಗ್ ತಾಣವಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.