ಬೆಂಗಳೂರು, ಆ.20 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಆನ್ ಲೈನ್ ವಂಚನೆ ಪ್ರಕರಣಕ್ಕೆ ವಿರಾಮ ಎಂಬುದೇ ಇಲ್ಲ. ಆನ್ ಲೈನ್ ಮೂಲಕ ನಕಲಿ ಫೋನ್ ಪೇ ಮಾಡಿ ಹಣ ದೋಚಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಮಂಗಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೂರದಾರರು ಕನ್ನಮಂಗಲ ಗೇಟ್ ಬಸ್ ನಿಲ್ದಾಣ ಹತ್ತಿರ ಬಸವೇಶ್ವರ ಎಂಟರ್ ಪೈಸಸ್ ಅಂಗಡಿಯನ್ನು ಇಟ್ಟುಕೊಂಡಿದ್ದು, ಅಪರಿಚಿತನೊರ್ವನು ದೂರದಾರ ಖಾತೆಗೆ ₹ 50,000 ಹಣವನ್ನು ನಕಲಿ ಫೋನ್ ಪೇ ಮಾಡಿ ₹ 49,500 ಹಣವನ್ನು ನಗದು ರೂಪದಲ್ಲಿ ಪಡೆದುಕೊಂಡು ಮೋಸ ಮಾಡಿದ್ದಾನೆ.
ಅನುಮಾನ ಬಂದು ಕೊನೆಗೆ ತನ್ನ ಬ್ಯಾಂಕ್ ಖಾತೆಯ ವಿವರವನ್ನು ನೋಡಿದಾಗ ಬಸವೇಶ್ವರ ಎಂಟರ್ ಪೈಸಸ್ ಅಂಗಡಿಯತನಿಗೆ ತಾನು ಮೋಸ ಹೋಗಿರುವುದನ್ನು ಅರಿತು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ಕೃತ್ಯ ನಡೆದ ಸ್ಥಳದಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆ.16 ರಂದು ವಿದ್ಯಾರಣ್ಯಪುರ ಬಸ್ ನಿಲ್ದಾಣದ ಹತ್ತಿರ ಓರ್ವ ವ್ಯಕ್ತಿಯನ್ನು ಒಂದು ಮೊಬೈಲ್ ಫೋನ್ ಮತ್ತು ₹ 25,000 ನಗದು ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಿದಾಗ, ಆನ್ ಲೈನ್ ಮೂಲಕ ನಕಲಿ ಫೋನ್ ಪೇ ಮಾಡಿ ಹಣ ದೋಚಿದ್ದ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ.
ಈ ಬಗ್ಗೆ ದೇವನಹಳ್ಳಿ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ. ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರವರಾದ ಸಜೀತ್ ವಿ ಜೆ ಅವರ ಮಾರ್ಗದರ್ಶನದಲ್ಲಿ ದೇವನಹಳ್ಳಿ ನವೀನ್‌ಕುಮಾರ, ರವರ ನೇತೃತ್ವದಲ್ಲಿ, ದೇವನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ.ಧರ್ಮೇಗೌಡ ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.