ಬೆಂಗಳೂರು/ನವದೆಹಲಿ, ಆ.15 www.bengaluruwire.com : ದೇಶದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಮಾನವ ಸಹಿತ ಗಗನಯಾನ ಯೋಜನೆ 2025ರಲ್ಲಿ ಉಡಾವಣೆಗೆ ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ. ಈ ಮಧ್ಯೆ 78ನೆಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಆ.23ರ ರಾಷ್ಟ್ರೀಯ ಬಾಹ್ಯಾಕಾಶ ದಿನ 2024 (National Space Day 2024) ರ ಅಂಗವಾಗಿ ಗಗನಯಾನ ಯೋಜನೆಗೆ ಆಯ್ಕೆಯಾಗಿರುವ ನಾಲ್ವರು ಗಗನಯಾನಿ (Astronauts) ಗಳಿಗೆ ನೀಡುತ್ತಿರುವ ತರಬೇತಿಯ ವಿಡಿಯೋ ತುಣುಕುಗಳನ್ನು ಇಸ್ರೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಇದೇ ಫೆಬ್ರವರಿ 28ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕೃತವಾಗಿ ಇಸ್ರೋ ಗಗನಯಾನ ಯೋಜನೆಗೆ ಆಯ್ಕೆಯಾದ ನಾಲ್ವರು ಐಎಎಫ್ ಪೈಲೆಟ್ ಗಳಾದ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಹೆಸರನ್ನು ಬಹಿರಂಗಗೊಳಿಸಿದ್ದರು.
ಈ ಬಾಹ್ಯಾಕಾಶ ಯಾನಕ್ಕೆ ಆಯ್ಕೆಯಾಗಿರುವ ಗಗನಯಾನಿಗಳಿಗೆ ಬಾಹ್ಯಾಕಾಶದಲ್ಲಿನ ಗುರುತ್ವಾಕರ್ಷಣ ರಹಿತ ಪರಿಸ್ಥಿತಿಯನ್ನು ಹೋಲುವ ಸಂದರ್ಭದ ತದ್ರೂಪನ್ನು ಸೃಷ್ಟಿಸಿ ಅದರಲ್ಲಿ ಹಾರಾಟ ನಡೆಸುವ ಅಭ್ಯಾಸ, ಯೋಗ, ಸೂಕ್ಷ್ಮ ಗುರುತ್ವ ಬಲದ ಪರಿಚಯಿಸುವಿಕೆ, ತರಗತಿಯಲ್ಲಿ ತರಬೇತಿ, ದೈಹಿಕ ಸಾಮರ್ಥ್ಯ ಟ್ರೈನಿಂಗ್, ಬಾಹ್ಯಾಕಾಶ ಧಿರಿಸು (Flight Suit) ಬಳಕೆಯ ಬಗ್ಗೆ ತರಬೇತಿ ನೀಡುವುದರ ಜೊತೆಗೆ, ವಾಯು ವೈದ್ಯಕೀಯ, ಭೂಮಿಗೆ ಮರಳಿ ಬರುವ ತರಬೇತಿ ಹಾಗೂ ಆ ಪರಿಸ್ಥಿತಿಯಲ್ಲಿ ಹೇಗೆ ಬದುಕುಳಿಯಬೇಕು ಎಂಬ ಕೌಶಲ್ಯವನ್ನು ಕೂಡ ಕಲಿಸಿಕೊಡಲಾಗುತ್ತಿದೆ.
ಗಗನಯಾನ ತರಬೇತಿ ವಿನ್ಯಾಸದಲ್ಲಿ ಶೈಕ್ಷಣಿಕ ಕೋರ್ಸ್‌ಗಳು, ಗಗನ್ಯಾನ್ ಫ್ಲೈಟ್ ಸಿಸ್ಟಮ್ಸ್, ಪ್ಯಾರಾಬೋಲಿಕ್ ಫ್ಲೈಟ್‌ಗಳ ಮೂಲಕ ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಚಿತತೆ, ಚೇತರಿಕೆ ತರಬೇತಿ, ಬಾಹ್ಯಾಕಾಶ ನೌಕೆಯ ಹಾರಾಟದ ಕಾರ್ಯವಿಧಾನಗಳ ಮಾಸ್ಟರಿಂಗ್ ಮತ್ತು ಸಿಬ್ಬಂದಿ ತರಬೇತಿ ಸಿಮ್ಯುಲೇಟರ್‌ಗಳ ತರಬೇತಿಯನ್ನು ಸಹ ಒಳಗೊಂಡಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.
ರಷ್ಯಾದ ಗಗಾರಿನ್ ಕಾಸ್ಮೊನಾಟ್ ತರಬೇತಿ ಕೇಂದ್ರದಲ್ಲಿ (Gagarin Cosmounaut Training Centre – GCTC) ಈಗಾಗಲೇ ನಾಲ್ಕು ಭಾರತೀಯ ಗಗನಯಾತ್ರಿಗಳ ಸಾರ್ವತ್ರಿಕ ಬಾಹ್ಯಾಕಾಶ ಹಾರಾಟದ ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಗಗನ್ಯಾನ್ ಯೋಜನೆಯ ನಿರ್ದಿಷ್ಟ ತರಬೇತಿ ದೇಶದಲ್ಲಿ ಆರಂಭವಾಗಿದೆ. ಈ ಎಲ್ಲಾ ತರಬೇತಿಗಳು ಹೇಗೆ ನಡೆದಿವೆ ಎಂಬುದರ ವಿಡಿಯೋ ತುಣುಕುಗಳನ್ನು ಇಸ್ರೋ ಇನ್ ಸ್ಟೋಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.