ನವದೆಹಲಿ, ಜು.22 www.bengaluruwire.com : ಛಲ ಒಂದಿದ್ದರೆ ಯಾವ ಸಂಕೋಲೆಯನ್ನು ದಾಟಿ ಸಾಧಿಸಬಹುದು ಎಂಬುದಕ್ಕೆ ದೆಹಲಿಯ ಅಮಿತಾ ಪ್ರಜಾಪತಿ ಎಂಬ ಹುಡುಗಿ ಇದೀಗ ಸಾಕ್ಷಿಯಾಗಿದ್ದಾರೆ.
ಮನೆಯವರೆಲ್ಲ ಸೇರಿ ಕಷ್ಟಪಟ್ಟು ದುಡಿದರೆ ಮಾತ್ರ ಮೂರು ಹೊತ್ತು ಊಟ ಮಾಡುವ ಪರಿಸ್ಥಿತಿ ಕೆಲ ಕುಟುಂಬಗಳಲ್ಲಿ ಇಂದಿಗೂ ಇದೆ. ಆದರೆ ಇಂತಹ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸಲು ಮುಂದೆ ಬರುವವರು ಬಹಳ ಕಡಿಮೆ. ದೆಹಲಿಯ ಅಮಿತಾ ಪ್ರಜಾಪತಿ ಎಂಬ ಹುಡುಗಿಯ ಟೀ ಮಾರುವ ತಂದೆ ಹಾಗೆ ಯೋಚಿಸದೆ, ಉತ್ತಮ ಶಿಕ್ಷಣ ನೀಡಿ ಆಕೆಯು ಸಿಎ (Chartered Accountant) ಪಾಸ್ ಮಾಡುವ ನಿಟ್ಟಿನಲ್ಲಿ ಹೆಗಲು ನೀಡಿದ್ದಾರೆ.
ಸರಿಯಾದ ವಿದ್ಯಾಭ್ಯಾಸವಿಲ್ಲದೆ ಚಹಾ ಮಾರಿ ಜೀವನ ಸಾಗಿಸುತ್ತಿರುವ ವ್ಯಕ್ತಿ, ತನ್ನ ಮಗಳು ನನ್ನಂತೆ ಆಗಬಾರದೆಂಬ ಕಾರಣಕ್ಕೆ, ಕಷ್ಟಪಟ್ಟು ದುಡಿದ ಪ್ರತಿ ರೂಪಾಯಿಯಲ್ಲಿ ಅಮಿತಾ ಪ್ರಜಾಪತಿಗೆ ಶಿಕ್ಷಣ ನೀಡುವ ಮೂಲಕ ಇದೀಗ ಎಲ್ಲರಿಗೂ ಮಾದರಿಯಾಗಿದ್ದಾರೆ.
ಅಮಿತಾ ಪ್ರಜಾಪತಿ ಸಿಎ ಆಗಲು 10 ವರ್ಷಗಳನ್ನು ತೆಗೆದುಕೊಂಡಿದ್ದಾರೆ. ಇದೇ ವೇಳೆ ಅಮಿತಾ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಸಹ ಎದುರಿಸಿದ್ದರಂತೆ. ಆದರೆ ಈ ಎಲ್ಲಾ ಸವಾಲುಗಳನ್ನು ಎದುರಿಸಲು ಛಲ ಬಿಡದ ಅಮಿತಾ 10 ವರ್ಷಗಳ ಕಠಿಣ ಪರಿಶ್ರಮದ ನಂತರ ತಮ್ಮ ಗುರಿಯನ್ನು ಸಾಧಿಸಿದ್ದಾರೆ.
ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಚಾಯ್ ಮಾರಾಟಗಾರನ ಮಗಳಾದ ಸಿಎ ಅಮಿತಾ ಪ್ರಜಾಪತಿ, ತನ್ನ ತಂದೆಯೊಂದಿಗೆ ತಾನು ಉತ್ತೀರ್ಣಳಾದ ವಿಷಯವನ್ನು ಅವರ ಬಳಿ ಬಂದು ಹಂಚಿಕೊಂಡಾಗ ಇಬ್ಬರೂ ಭಾವುಕರಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಿಎ ಅಮಿತಾ ಪ್ರಜಾಪತಿ ಅವರು ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್ ನಲ್ಲಿ ತಮ್ಮ ಈ ಸಾಧನೆಗೆ, ಪೋಷಕರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ತನ್ನ ಯಶಸ್ಸಿನ ಬಗ್ಗೆ ತಿಳಿದುಕೊಂಡು ಟೀ ಮಾರುವ ತಂದೆ, ಕಣ್ಣೀರು ಹಾಕಿ ಭಾವುಕರಾದ ವಿಡಿಯೊವನ್ನು ಅವರು ಹಂಚಿಕೊಂಡಿದ್ದಾರೆ.